ಗರಿಬಿಚ್ಚಿ ಕುಣಿಯುತ್ತಿದ್ದ ನವಿಲಿನ ಮೇಲೆ ಹುಲಿ ದಾಳಿ; ರಾಷ್ಟ್ರಪಕ್ಷಿ ಹಾಗೂ ರಾಷ್ಟ್ರಪ್ರಾಣಿ ಮುಖಾಮುಖಿಯಾದ ವಿಡಿಯೋ ವೈರಲ್

Viral video: ಇನ್ನೇನು ಹುಲಿಯ ಬಾಯಿಗೆ ನವಿಲು ಸಿಗಬೇಕು ಎನ್ನುವಷ್ಟರಲ್ಲಿ ಅದೃಷ್ಟವಶಾತ್ ಅದು ಎಚ್ಚೆತ್ತುಕೊಂಡಿದೆ. ಬಣ್ಣದ ಗರಿಗಳನ್ನು ಅಗಲವಾಗಿ ಬಿಚ್ಚಿ ನರ್ತಿಸುತ್ತಿದ್ದ ನವಿಲು ಕೂದಲೆಳೆ ಅಂತರದಲ್ಲಿ ಹುಲಿಯ ದಾಳಿಯಿಂದ ಬಚಾವಾಗಿದೆ.

ಗರಿಬಿಚ್ಚಿ ಕುಣಿಯುತ್ತಿದ್ದ ನವಿಲಿನ ಮೇಲೆ ಹುಲಿ ದಾಳಿ; ರಾಷ್ಟ್ರಪಕ್ಷಿ ಹಾಗೂ ರಾಷ್ಟ್ರಪ್ರಾಣಿ ಮುಖಾಮುಖಿಯಾದ ವಿಡಿಯೋ ವೈರಲ್
ಕುಣಿಯುತ್ತಿದ್ದ ನವಿಲಿನ ಮೇಲೆ ದಾಳಿ ಮಾಡಿದ ಹುಲಿ
TV9kannada Web Team

| Edited By: Skanda

Jul 20, 2021 | 11:04 AM


ವನ್ಯಪ್ರಾಣಿಗಳೆಂದರೆ (Wild Animals) ಅವು ಅರಣ್ಯದ ಸಂಪತ್ತು. ಆ ಕಾರಣದಿಂದಲೇ ಸಾಕಷ್ಟು ನೀತಿ, ನಿಯಮಗಳನ್ನು ರೂಪಿಸಿ ಅವುಗಳಿಗೆ ಮನುಷ್ಯರಿಂದ ಹಾನಿಯಾಗದಂತೆ ಕಾನೂನಿನ ಪ್ರಕಾರವೂ ರಕ್ಷಣೆ ಒದಗಿಸಲಾಗಿದೆ. ಭಾರತದಲ್ಲಿ ಹುಲಿಗೆ ರಾಷ್ಟ್ರಪ್ರಾಣಿ (National Animal Tiger) ಎಂದೂ, ನವಿಲಿಗೆ ರಾಷ್ಟ್ರಪಕ್ಷಿ (National Bird Peacock) ಎಂದೂ ಸ್ಥಾನಮಾನ ನೀಡಿ ಗೌರವಿಸಲಾಗಿದೆ. ಹುಲಿಯ ಗತ್ತು, ಗಾಂಭೀರ್ಯ ಅದಕ್ಕೆ ಕಾಡಿನ ರಾಜ ಎಂಬ ಪಟ್ಟವನ್ನು ತಂದುಕೊಟ್ಟಿದ್ದರೆ, ನವಿಲಿನ ಸೌಂದರ್ಯ, ಅದು ಗರಿಬಿಚ್ಚಿ ನೃತ್ಯ ಮಾಡುವ ಪರಿ ಅದನ್ನು ಪಕ್ಷಿಗಳ ಪೈಕಿ ಎಲ್ಲಕ್ಕಿಂತಲೂ ವಿಶೇಷವಾಗಿ ಗುರುತಿಸುವಂತೆ ಮಾಡಿದೆ. ಇತ್ತೀಚೆಗೆ ವೈರಲ್ ಆದ ವಿಡಿಯೋ (Viral Video) ಒಂದರಲ್ಲಿ ಈ ಎರಡೂ ವಿಶೇಷ ಜೀವಿಗಳು ಎದುರುಬದುರಾಗಿದ್ದು, ಅದು ನೋಡುಗರ ಮೈ ಜುಂ ಎನ್ನುವಂತೆ ಮಾಡಿದೆ.

ವೈರಲ್ ಆದ ವಿಡಿಯೋದಲ್ಲಿ ರಾಷ್ಟ್ರಪ್ರಾಣಿ ಹಾಗೂ ರಾಷ್ಟ್ರಪಕ್ಷಿ ಎರಡೂ ಒಟ್ಟಿಗೆ ನೋಡಲು ಸಿಕ್ಕಿವೆ. ಕಾಡೊಂದರಲ್ಲಿ ಗಾಢ ನಿದ್ರೆಯಲ್ಲಿದ್ದ ಹುಲಿಯನ್ನು ಗರಿಬಿಚ್ಚಿ ನರ್ತಿಸಿದ ನವಿಲು ನಿದ್ರೆಯಿಂದ ಎಬ್ಬಿಸಿದೆ. ಮೈಚಾಚಿ ಮಲಗಿದ್ದ ಹುಲಿರಾಯ ನವಿಲಿನ ಕೂಗು ಹಾಗೂ ನರ್ತನದಿಂದ ಸಿಟ್ಟಿಗೆದ್ದಿದ್ದಾನೆ. ಮೊದಲು ಒಮ್ಮೆ ಕತ್ತೆತ್ತಿ ನೋಡಿದ ಹುಲಿರಾಯ ಕಿರಿಕಿರಿ ಆದಂತೆನಿಸಿ ಮತ್ತೆ ಸುತ್ತಮುತ್ತ ಗಮನಿಸಿದ್ದಾನೆ. ಆದರೆ, ನವಿಲು ತನ್ನ ಪಾಡಿಗೆ ತಾನು ಕೂಗುತ್ತಾ, ಗರಿಬಿಚ್ಚಿ ನರ್ತನ ಆರಂಭಿಸಿದಾಗ ತನ್ನ ಗತ್ತು ತೋರಿಸಿದ್ದಾನೆ.

ಬಯಲಿನಂತಿದ್ದ ಪ್ರದೇಶದಲ್ಲಿ ಗರಿಬಿಚ್ಚಿ ನರ್ತಿಸುತ್ತಿದ್ದ ನವಿಲಿನತ್ತ ನುಗ್ಗಿ ಬಂದ ಹುಲಿ ಆಕ್ರಮಣ ನಡೆಸಲು ಮುಂದಾಗಿದೆ. ರಾಷ್ಟ್ರಪ್ರಾಣಿ ಹಾಗೂ ರಾಷ್ಟ್ರಪಕ್ಷಿ ಎರಡೂ ಆ ಮೂಲಕ ಮುಖಾಮುಖಿಯಾಗಿವೆ. ಇನ್ನೇನು ಹುಲಿಯ ಬಾಯಿಗೆ ನವಿಲು ಸಿಗಬೇಕು ಎನ್ನುವಷ್ಟರಲ್ಲಿ ಅದೃಷ್ಟವಶಾತ್ ಅದು ಎಚ್ಚೆತ್ತುಕೊಂಡಿದೆ. ಬಣ್ಣದ ಗರಿಗಳನ್ನು ಅಗಲವಾಗಿ ಬಿಚ್ಚಿ ನರ್ತಿಸುತ್ತಿದ್ದ ನವಿಲು ಕೂದಲೆಳೆ ಅಂತರದಲ್ಲಿ ಹುಲಿಯ ದಾಳಿಯಿಂದ ಬಚಾವಾಗಿದೆ.

ಹುಲಿ ಹಿಂದಿನಿಂದ ಬಂದು ದಾಳಿಗೆ ಸಜ್ಜಾಗುತ್ತಿದ್ದಂತೆಯೇ ಅಕ್ಕಪಕ್ಕದಲ್ಲಿದ್ದ ಬೇರೆ ನವಿಲುಗಳು ಸದ್ದುಮಾಡುತ್ತಾ ಹಾರಿವೆ. ತಕ್ಷಣವೇ ನೃತ್ಯದಲ್ಲಿ ಮಗ್ನವಾಗಿದ್ದ ನವಿಲು ಕೂಡಾ ಎಚ್ಚೆತ್ತುಕೊಂಡು ಅಲ್ಲಿಂದ ಹಾರಿದ ಪರಿಣಾಮ ವ್ಯಾಘ್ರನ ಬಾಯಿಯಿಂದ ಪಾರಾಗಿದೆ. ಹುಲಿ ನವಿಲಿನ ಮೇಲೆ ಆಕ್ರಮಣ ನಡೆಸಿದ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಒಂದೂವರೆ ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಿಟ್ಟಿಸಿಕೊಂಡಿದೆ. ಇಂಡಿಯನ್ ಬೀ ಕೀಪರ್ಸ್​ ಎಂಬ ಯೂಟ್ಯೂಬ್​ ಚಾನೆಲ್​ನಲ್ಲಿ ಅಪ್​ಲೋಡ್ ಆದ ಈ ವಿಡಿಯೋವನ್ನು ನೆಟ್ಟಿಗರು ಬೇರೆ ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕಾಡಿನ ವೈಭವ, ರಾಷ್ಟ್ರಪ್ರಾಣಿ ಹಾಗೂ ರಾಷ್ಟ್ರಪಕ್ಷಿಯ ಮುಖಾಮುಖಿಯನ್ನು ಬೆರಗುಗಣ್ಣುಗಳಿಂದ ನೋಡಿದ್ದಾರೆ.

ಇದನ್ನೂ ಓದಿ:
ಟೂರಿಸ್ಟ್​ ವ್ಯಾನ್​ ಸುತ್ತುವರೆದ ದೈತ್ಯಾಕಾರದ 3 ಹುಲಿಗಳು: ಪ್ರವಾಸಿಗರ ಹೃದಯ ಬಡಿತ ಹೆಚ್ಚಾಯ್ತು! ವಿಡಿಯೋ ವೈರಲ್ ಆಯ್ತು 

ಸಂಗಾತಿ ಸೆಳೆಯಲು ಗರಿ ಬಿಚ್ಚಿ ಕುಣಿದ ನವಿಲು.. ಗಡಿ ಜಿಲ್ಲೆಯಲ್ಲಿ ಮನ ಮೋಹಕ ಲೀಲೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada