Viral Photo: ಈ ಮುದ್ದಾದ ಮೇಕೆ ಮರಿಗೆ 8 ಕಾಲು, ಎರಡು ದೇಹ!; ವಿಚಿತ್ರ ಪ್ರಾಣಿಯ ಫೋಟೋ ವೈರಲ್
ಮೇಕೆ 8 ಕಾಲುಗಳಿರುವ ಮರಿಗೆ ಜನ್ಮ ನೀಡಿರುವ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿದೆ. ಆದರೆ, ಬೇಸರದ ಸಂಗತಿಯೆಂದರೆ, ಈ ಮೇಕೆ ಮರಿ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ.
ಕೊಲ್ಕತ್ತಾ: ಮಕ್ಕಳು ಹೇಗಿದ್ದರೂ ಚಂದ. ಮನುಷ್ಯರ ಮಕ್ಕಳೇ ಆಗಿರಲಿ, ಹಂದಿ, ಕುರಿ, ಮೇಕೆ, ಹುಲಿ, ಹಸು, ನಾಯಿ, ಬೆಕ್ಕು ಹೀಗೆ ಯಾವುದೇ ಮರಿಗಳಾದರೂ ಅವುಗಳನ್ನು ನೋಡಿದರೆ ಮನಸು ಉಲ್ಲಸಿತವಾಗುತ್ತದೆ. ಆದರೆ, ಈ ಫೋಟೋದಲ್ಲಿರುವುದು ಒಂದು ವಿಚಿತ್ರವಾದ ಮೇಕೆ ಮರಿ. ಪಶ್ಚಿಮ ಬಂಗಾಳದ ಪರ್ಗನಾಸ್ ಜಿಲ್ಲೆಯ ಕಲ್ಮೇಗ ಎಂಬ ಊರಿನಲ್ಲಿ ಮೇಕೆಯೊಂದು 8 ಕಾಲುಗಳಿರುವ, ಎರಡು ಸೊಂಟವಿರುವ ಮರಿಯೊಂದಕ್ಕೆ ಜನ್ಮ ನೀಡಿದೆ. ಈ ವಿಶೇಷವಾದ ಮೇಕೆ ಮರಿಯ ಫೋಟೋಗಳು ಭಾರೀ ವೈರಲ್ ಆಗಿದ್ದು, ಸುತ್ತಮುತ್ತಲಿನ ಊರಿನವರು ಈ ಮರಿಯನ್ನು ನೋಡಲು ದೌಡಾಯಿಸಿದ್ದಾರೆ.
ಮೇಕೆ 8 ಕಾಲುಗಳಿರುವ ಮರಿಗೆ ಜನ್ಮ ನೀಡಿರುವ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿದೆ. ಈ ಮೇಕೆ ಮರಿ ಇರುವ ಮನೆಗೆ ನೂರಾರು ಜನರು ಬಂದು ಅಚ್ಚರಿಯಿಂದ ಈ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಆದರೆ, ಬೇಸರದ ಸಂಗತಿಯೆಂದರೆ, ಈ ಮೇಕೆ ಮರಿ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಸಾವನ್ನಪ್ಪಿದೆ. ಬಂಗಾಳದ ಸರಸ್ವತಿ ಮಂಡಲ್ ಎಂಬಾಕೆಯ ಮನೆಯಲ್ಲಿ ಜನಿಸಿದ ಈ ಮೇಕೆ ಮರಿ ಬರೋಬ್ಬರಿ 8 ಕಾಲುಗಳನ್ನು ಹೊಂದಿತ್ತು. ಅದಕ್ಕೆ ಎದ್ದು ನಿಲ್ಲಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಅದಾಗಿ ಕೆಲವೇ ಗಂಟೆಗಳಲ್ಲಿ ಆ ಮರಿ ಸಾವನ್ನಪ್ಪಿದೆ. ಆದರೆ, ಆ ಮೇಕೆಮರಿಯ ಫೋಟೋ ವೈರಲ್ ಆಗುತ್ತಿದ್ದಂತೆ ಅದನ್ನು ನೋಡಲು ಬರುವವರ ಸಂಖ್ಯೆ ಹೆಚ್ಚಾಗಿದೆ. ಹಾಗೆ ಬಂದವರೆಲ್ಲರೂ ಮೇಕೆ ಮರಿ ಸಾವನ್ನಪ್ಪಿದ ಸುದ್ದಿ ತಿಳಿದು ಬೇಸರದಿಂದ ವಾಪಾಸ್ ತೆರಳುತ್ತಿದ್ದಾರೆ.
ಈ ಮೇಕೆ ಮರಿಯ ಫೋಟೋ ನೋಡಿದವರು ಇದೊಂದು ಪವಾಡ ಎಂದು ಕರೆದಿದ್ದಾರೆ. ಇದೇ ಮೊದಲ ಬಾರಿಗೆ 8 ಕಾಲು ಮತ್ತು 2 ದೇಹಗಳಿರುವ ಮೇಕೆ ಮರಿ ಜನ್ಮ ತಾಳಿರುವ ವಿಷಯ ಬೆಳಕಿಗೆ ಬಂದಿದ್ದು, ತನ್ನ ದೇಹದ ನ್ಯೂನತೆಯ ಕಾರಣದಿಂದಲೇ ಆ ಮರಿ ಸಾವನ್ನಪ್ಪಿದೆ ಎನ್ನಲಾಗಿದೆ.
ಇದನ್ನೂ ಓದಿ: Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?
Viral News | ಬರೋಬ್ಬರಿ 1 ಕೋಟಿಗೆ ಹರಾಜಾಯ್ತು ವಿಸ್ಕಿ ಬಾಟಲ್; ಇದರ ವಿಶೇಷತೆ ಕೇಳಿದರೆ ಕಿಕ್ ಏರುತ್ತೆ!
(Miracle Goat Baby Born With 8 Legs and 2 Hips in West Bengal Photos Goes Viral)
Published On - 8:01 pm, Mon, 19 July 21