Shocking News: ಮನುಷ್ಯರ ಮೂತ್ರದಿಂದ ತಯಾರಾದ ಬಿಯರ್ಗೆ ಭಾರೀ ಬೇಡಿಕೆ; ಏನಿದು ವಿಚಿತ್ರ ಸುದ್ದಿ?
Pisner Beer: ಈ ಪ್ರಯೋಗ ಕೊಂಚ ಹಳೆಯದೇ ಆದರೂ ಬಹಳಷ್ಟು ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಪಿಸ್ನೆರ್ ಬಿಯರ್ಗೂ ಬೇಡಿಕೆಯಿದ್ದು, ಇದನ್ನು 50,000 ಲೀಟರ್ ಮೂತ್ರದಿಂದ ತಯಾರಿಸಲಾಗಿದೆ.
ಈ ಜಗತ್ತಿನಲ್ಲಿ ಮದ್ಯಪ್ರಿಯರಿಗೇನೂ ಬರವಿಲ್ಲ. ಅವರಲ್ಲಿ ಒಬ್ಬೊಬ್ಬರಿಗೆ ಒಂದೊಂದು ಬ್ರ್ಯಾಂಡ್ ಇಷ್ಟ. ಮದ್ಯಪ್ರಿಯರ ಪೈಕಿ ಬಿಯರ್ ಇಷ್ಟಪಡದಿರುವವರೇ ಕಡಿಮೆ. ಈ ಬಿಯರ್ ಅನ್ನು ಮನುಷ್ಯನ ಮೂತ್ರದಿಂದಲೂ ಮಾಡಬಹುದು ಎಂಬ ವಿಷಯ ನಿಮಗೆ ಗೊತ್ತಾ? ಮೂತ್ರದಿಂದ ಬಿಯರ್ ತಯಾರಿಸುತ್ತಾರಾ? ಎಂದು ಮೂಗು ಮುರಿಯಬೇಡಿ. ಅಂಥದ್ದೊಂದು ಪ್ರಯೋಗ ಈಗಾಗಲೇ ನಡೆದಿದ್ದು, ಹೊಸ ಬಗೆಯ ಬಿಯರ್ ಟ್ರೈ ಮಾಡಬೇಕು ಎಂದು ಬಯಸುವವರು ಈ ಬಿಯರ್ ಟೇಸ್ಟ್ ಮಾಡಬಹುದು!
ನೊರಬ್ರೋ ಕಂಪನಿ ಮನುಷ್ಯರ ಮೂತ್ರದಿಂದ ಬಿಯರ್ ತಯಾರಿಸಿದೆ. ನೀವೇನಾದರೂ ಪಿಸ್ನೆರ್ ಬಿಯರ್ ಕುಡಿದಿದ್ದರೆ ನೀವು ಮನುಷ್ಯರ ಮೂತ್ರವನ್ನು ಕುಡಿದಿದ್ದೀರಿ ಎಂದೇ ಅರ್ಥ. ಈ ಪ್ರಯೋಗ ಕೊಂಚ ಹಳೆಯದೇ ಆದರೂ ಬಹಳಷ್ಟು ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ. ಪಿಸ್ನೆರ್ ಬಿಯರ್ಗೂ ಬೇಡಿಕೆಯಿದ್ದು, ಇದನ್ನು 50,000 ಲೀಟರ್ ಮೂತ್ರದಿಂದ ತಯಾರಿಸಲಾಗಿದೆ.
ಕೆಲವು ವರ್ಷಗಳ ಹಿಂದೆ ನೊರಬ್ರೋ ಕಂಪನಿ ಸಂಗೀತ ಕಾರ್ಯಕ್ರಮದಲ್ಲಿ 50,000 ಲೀಟರ್ ಮನುಷ್ಯರ ಮೂತ್ರವನ್ನು ಸಂಗ್ರಹ ಮಾಡಿತ್ತು. ನಂತರವೇ ಅವರು ಪಿಸ್ನೆರ್ ಬಿಯರ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದರು. ಈ ಬಿಯರ್ ಅನ್ನು ನಾವು ಮಾರ್ಕೆಟ್ಗೆ ತಂದಾಗ ಅನೇಕರು ನಾವು ಮನುಷ್ಯರ ಮೂತ್ರವನ್ನೇ ಬಾಟಲಿಗೆ ತುಂಬಿ ಬಿಯರ್ ಎಂದು ಮಾರಾಟ ಮಾಡುತ್ತಿದ್ದೇವೆ ಎಂದು ಭಾವಿಸಿದ್ದರು. ಆದರೆ, ಅದು ತಪ್ಪು ಕಲ್ಪನೆ. ನಾವು ಈ ಹೊಸ ಬಗೆಯ ಬಿಯರ್ಗಾಗಿ ಮೂತ್ರವನ್ನು ಬಳಸುತ್ತೇವೆ ಎಂಬುದು ಸತ್ಯ. ಆದರೆ, ಅದಕ್ಕೂ ಮೊದಲು ಸಾಕಷ್ಟು ಹಂತಗಳನ್ನು ಅನುಸರಿಸುತ್ತೇವೆ ಎಂದು ಕಂಪನಿ ತಿಳಿಸಿದೆ.
ಮೂತ್ರವನ್ನು ಪರಿಷ್ಕರಿಸಿ ಮಾಡಲಾಗುವ ಬಿಯರ್ನಲ್ಲಿ ಸ್ವಲ್ಪವೇ ಸ್ವಲ್ಪ ಅದರ ಟೇಸ್ಟ್ ಬಂದರೂ ನಾವು ಆ ಉತ್ಪನ್ನವನ್ನು ಮತ್ತೆ ಬಳಸುವುದಿಲ್ಲ. ನಾವು ಹೇಳದೆ ಹಾಗೇ ನೀಡಿದರೆ ಅದು ಮೂತ್ರದಿಂದ ಮಾಡಿದ ಬಿಯರ್ ಎಂದು ಯಾರಿಗೂ ಗೊತ್ತಾಗುವುದೇ ಇಲ್ಲ. ಮನುಷ್ಯನ ದೇಹದಿಂದ ಹೊರಹೋಗುವ ರಾಸಾಯನಿಕಯುಕ್ತ ಮೂತ್ರವನ್ನು ಮರುಬಳಕೆ ಮಾಡಿ, ಬಿಯರ್ಗೆ ಬಳಸಲಾಗುತ್ತದೆ. ಇದಕ್ಕೆ ಬೀರ್ಸೈಕ್ಲಿಂಗ್ ಎಂದು ಹೆಸರಿಡಲಾಗಿದೆ ಎಂದು ಪಿಸ್ನೆರ್ ಬಿಯರ್ ಕಂಪನಿ ಮಾಹಿತಿ ನೀಡಿದೆ.
ಇದನ್ನೂ ಓದಿ: ಬಿಯರ್ ಬಾಟಲ್ ಸಾಗಿಸುತ್ತಿದ್ದ ಲಾರಿ ಪಲ್ಟಿ, ಕೊರೊನಾ ನಡುವೆ ಭಯವಿಲ್ಲದೆ ಬಿಯರ್ಗಾಗಿ ಮುಗಿಬಿದ್ದ ಜನ .!
ಇದನ್ನೂ ಓದಿ: Viral Video: ಇದಪ್ಪಾ ಬ್ಯಾಲೆನ್ಸಿಂಗ್ ಅಂದ್ರೆ! ಈ ’ಬಾಟಲಿಪುತ್ರಿ‘ಯ ಸಾಹಸವನ್ನು ನೋಡಿದರೆ ಮೈ ಜುಂ ಎನ್ನದೇ ಇರದು