AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಇದಪ್ಪಾ ಬ್ಯಾಲೆನ್ಸಿಂಗ್​​ ಅಂದ್ರೆ! ಈ ’ಬಾಟಲಿಪುತ್ರಿ‘ಯ ಸಾಹಸವನ್ನು ನೋಡಿದರೆ ಮೈ ಜುಂ ಎನ್ನದೇ ಇರದು

ಯಾರೋ ಹರಿಬಿಟ್ಟ ವಿಡಿಯೋ ಜಗತ್ತಿನ ಇನ್ಯಾವುದೋ ಮೂಲೆಗೆ ಕ್ಷಣಾರ್ಧದಲ್ಲಿ ತಲುಪಿ ಮೌನವಾಗಿ ಬಿರಿದ ಕಾನನದ ಮಲ್ಲಿಗೆಯು ಘಮಲು ವಿಶ್ವವನ್ನೇ ವ್ಯಾಪಿಸುವಂತೆ ಮಾಡುತ್ತದೆ. ಇಲ್ಲಿಯೂ ಇಂಥದ್ದೇ ಒಂದು ಪ್ರತಿಭೆಯಿದೆ. ಆಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಪರಿಣಿತ ಸ್ಟಂಟ್ ಮಾಸ್ಟರ್ಸ್ ಕೂಡಾ ಹುಬ್ಬೇರಿಸಿ ಚಪ್ಪಾಳೆ ತಟ್ಟಿದ್ದಾರೆ.

Viral Video: ಇದಪ್ಪಾ ಬ್ಯಾಲೆನ್ಸಿಂಗ್​​ ಅಂದ್ರೆ! ಈ ’ಬಾಟಲಿಪುತ್ರಿ‘ಯ ಸಾಹಸವನ್ನು ನೋಡಿದರೆ ಮೈ ಜುಂ ಎನ್ನದೇ ಇರದು
ಬಾಟಲಿಯ ಮೇಲೆ ನಡೆದು ಸಾಹಸ ಪ್ರದರ್ಶಿಸಿದ ಯುವತಿ
Skanda
| Edited By: |

Updated on:May 22, 2021 | 3:48 PM

Share

ಈ ಜಗತ್ತಿನಲ್ಲಿ ಪ್ರತಿಭೆಗಳಿಗೆ ಕೊರತೆಯೇ ಇಲ್ಲ. ನೂರಾರು ಸಮಸ್ಯೆಗಳ ಮಧ್ಯೆ ಹುಟ್ಟಿದರೂ ಅವಕಾಶದ ಒಂದು ಕಿಡಿಯನ್ನೇ ಉಪಯೋಗಿಸಿಕೊಂಡು ಬೆಳಗುವ ಸಾವಿರಾರು ಮಂದಿ ನಮ್ಮ ಸುತ್ತಲೂ ಇರುತ್ತಾರೆ. ಆ ಪೈಕಿ ಒಂದಷ್ಟು ಜನ ಛಲ ಬಿಡದೇ ಮುಂದೆ ಬಂದರೆ ಇನ್ನೊಂದಷ್ಟು ಜನ ಹಿಂಜರಿಕೆಯ ಕಾರಣದಿಂದಲೋ, ಸೂಕ್ತ ವೇದಿಕೆ ಸಿಗದಿರುವುದಕ್ಕೋ ಎಲೆಮರೆಯ ಕಾಯಿಯಂತೆ ಉಳಿದು ಬಿಡುತ್ತಾರೆ. ಆದರೆ, ಈಗ ಕೈಯಲ್ಲಿ ಸ್ಮಾರ್ಟ್​ಫೋನ್ ಬಂದು ತಂತ್ರಜ್ಞಾನವೇ ಕಾಲ ಬುಡಕ್ಕೆ ಬಂದು ಬಿದ್ದಿರುವಂತಾದ ಕಾರಣ ಎಷ್ಟೋ ಜನ ರಾತ್ರಿ ಬೆಳಗಾಗುವುದರೊಳಗೆ ತಮಗೆ ಅರಿವಿಲ್ಲದಂತೆಯೇ ಪ್ರಸಿದ್ಧರಾಗಿಬಿಡುತ್ತಾರೆ. ಯಾರೋ ಹರಿಬಿಟ್ಟ ವಿಡಿಯೋ ಜಗತ್ತಿನ ಇನ್ಯಾವುದೋ ಮೂಲೆಗೆ ಕ್ಷಣಾರ್ಧದಲ್ಲಿ ತಲುಪಿ ಮೌನವಾಗಿ ಬಿರಿದ ಕಾನನದ ಮಲ್ಲಿಗೆಯು ಘಮಲು ವಿಶ್ವವನ್ನೇ ವ್ಯಾಪಿಸುವಂತೆ ಮಾಡುತ್ತದೆ.

ಇಲ್ಲಿಯೂ ಇಂಥದ್ದೇ ಒಂದು ಪ್ರತಿಭೆಯಿದೆ. ಆಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಪರಿಣಿತ ಸ್ಟಂಟ್ ಮಾಸ್ಟರ್ಸ್ ಕೂಡಾ ಹುಬ್ಬೇರಿಸಿ ಚಪ್ಪಾಳೆ ತಟ್ಟಿದ್ದಾರೆ. ವೈರಲ್ ವಿಡಿಯೋದಲ್ಲಿರುವ ಯುವತಿ ಬಾಟಲಿಗಳ ಮೇಲೆ ನಿಂತು ಸಮತೋಲನ ಕಾಪಾಡಿಕೊಳ್ಳುವ ಪರಿ ನಿಮ್ಮನ್ನೂ ಅಚ್ಚರಿಗೆ ನೂಕದೇ ಇರಲಾರದು. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನಿಸುವ ಈ ವಿಡಿಯೋದಲ್ಲಿ ಮಧ್ಯ ವಯಸ್ಸಿನ ಯುವತಿಯೊಬ್ಬಳು ತನ್ನ ಇಡೀ ದೇಹದ ಭಾರವನ್ನು ನೆಟ್ಟಗೆ ನಿಂತ ಗಾಜಿನ ಬಾಟಲಿಗಳ ಮೇಲೆ ಬಿಟ್ಟು ಮೆಟ್ಟಿಲೇರಿದಷ್ಟೇ ಸಲೀಸಾಗಿ ಏರುತ್ತಿರುವುದು ಕಾಣಿಸುತ್ತದೆ.

ರಸ್ತೆಯೊಂದರ ಪಕ್ಕದಲ್ಲಿ ತನ್ನ ಈ ಅದ್ಭುತ ಪ್ರತಿಭೆಯನ್ನು ಪ್ರದರ್ಶಿಸಿರುವ ಯುವತಿ ಮೊದಲು ನೆಲದ ಮೇಲೆ ನಿಂತ ಬಾಟಲಿಯಿಂದ ಹೆಜ್ಜೆಯೂರಲು ಆರಂಭಿಸಿ ನಂತರ ಚಿಕ್ಕ ಮೆಟ್ಟಿಲುಗಳ ಮೇಲೆ ಪೇರಿಸಿಟ್ಟ ಬಾಟಲಿಗಳ ಮೇಲೆ ಕಾಲೂರಿ ಮೇಲೇರುತ್ತಾ ಹೋಗಿದ್ದಾಳೆ. ಸುಮಾರು ನಾಲ್ಕು ಮೆಟ್ಟಿಲುಗಳನ್ನು ಹತ್ತಿದ ನಂತರ ಪುಟಾಣಿ ಟೇಬಲಿನ ಮೇಲಿಟ್ಟ ಬಾಟಲಿಗಳ ಮೇಲೂ ಅಷ್ಟೇ ಚಾಕಚಕ್ಯತೆಯಿಂದ ಹೆಜ್ಜೆಯಿಟ್ಟು ಎಲ್ಲೂ ಆಯ ತಪ್ಪದಂತೆ ನಿಂತಿರುವುದನ್ನು ನೋಡಿದರೆ ಒಮ್ಮೆ ಮೈ ಜುಂ ಅನ್ನದೇ ಇರದು.

ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹಂಚಲ್ಪಟ್ಟಿದ್ದರೂ ಟ್ವಿಟರ್​ನಲ್ಲಿ ಹೋಲ್ಡ್ ಮೈ ಬಿಯರ್ ಎಂಬ ಅಕೌಂಟ್​ನಲ್ಲಿ ಕಾಣಿಸಿಕೊಂಡ ನಂತರ ಭಾರೀ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಕೆಲವರಂತೂ ಬಾಟಲಿಯಲ್ಲಿರುವುದನ್ನು ಒಳಗಿಳಿಸಿದ ಮೇಲೆ ದೇಹವನ್ನು ಬ್ಯಾಲೆನ್ಸ್ ಮಾಡುವುದಕ್ಕಿಂತಲೂ ಇದು ಇನ್ನೂ ಕಷ್ಟ ಹಾಗೂ ಅಪಾಯಕಾರಿ ಎಂದು ತಮಾಷೆಯಾಗಿ ಕಾಲೆಳೆದಿದ್ದಾರೆ. ಇನ್ನು ಕೆಲವರು ಆಕೆ ಹಾಗೆ ಹೆಜ್ಜೆಯೂರುವುದನ್ನು ನೋಡು ನೋಡುತ್ತಲೇ ಸುಸ್ತಾಗಿ ಹೋದೆ ಎಂದಿದ್ದಾರೆ. ಅಂದಹಾಗೆ, ಈ ಬಾಟಲಿ ಸಾಹಸದ ವಿಡಿಯೋ ಎಲ್ಲಿಯದು, ಯಾವಾಗ ಚಿತ್ರೀಕರಿಸಿದ್ದು ಎಂಬ ವಿವರ ಇಲ್ಲವಾದರೂ ಸದ್ಯ ವೈರಲ್ ಆಗುತ್ತಾ ದೇಶ, ಭಾಷೆಗಳ ಗಡಿ ಮೀರಿ ಶಬ್ಧ ಮಾಡುತ್ತಿದೆ.

ಇದನ್ನೂ ಓದಿ: ವಿಮಾನ ನಿಲ್ದಾಣದೊಳಗೆ ಕಪಿರಾಯನ ಭರ್ಜರಿ ಬೇಟೆ; ವೈರಲ್ ಆಯ್ತು ಹಳೇ ವಿಡಿಯೋ 

Viral Video: ಕೊಂಚ ಸ್ಲಿಪ್​ ಆದ್ರೆ ಬದುಕುಳಿಯುವುದೇ ಡೌಟು! ಯುವಕನ ಸ್ಟಂಟ್​ ವಿಡಿಯೋ ನೋಡಿದ್ರೆ ನೀವೂ ಬೆರಗಾಗ್ತೀರಾ

Published On - 3:18 pm, Sat, 22 May 21

ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ
ಪೋಷಕರೇ ಗಮನಿಸಿ: ಮಕ್ಕಳನ್ನು ಶಾಲೆಗೆ ಸೇರಿಸುವ ಮುನ್ನ ಇರಲಿ ಎಚ್ಚರ
ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು: ಅಷ್ಟಕ್ಕೂ ಆಗಿದ್ದೇನು?
ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು: ಅಷ್ಟಕ್ಕೂ ಆಗಿದ್ದೇನು?
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆಶಿ: ಏನಂದ್ರು ನೋಡಿ
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!