AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ಕಣ್ಣೀರಿನ ಬಗ್ಗೆ ನ್ಯೂಯಾರ್ಕ್ ಟೈಮ್ಸ್​ನಲ್ಲಿ ಪ್ರಕಟವಾಗಿದೆ ಎನ್ನಲಾದ ಈ ಸುದ್ದಿಯ ಅಸಲಿ ವಿಷಯವೇನು?

ಮೋದಿ ಭಾಷಣದ ಈ ಭಾಗ ಹಲವಾರು ಅಭಿಪ್ರಾಯಗಳು ಸೃಷ್ಟಿಯಾಗುವಂತೆ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಚಾರ ಪರ-ವಿರೋಧ, ಟೀಕೆ, ಟ್ರಾಲ್​ಗೂ ಕಾರಣವಾಗಿತ್ತು.

ಪ್ರಧಾನಿ ಮೋದಿ ಕಣ್ಣೀರಿನ ಬಗ್ಗೆ ನ್ಯೂಯಾರ್ಕ್ ಟೈಮ್ಸ್​ನಲ್ಲಿ ಪ್ರಕಟವಾಗಿದೆ ಎನ್ನಲಾದ ಈ ಸುದ್ದಿಯ ಅಸಲಿ ವಿಷಯವೇನು?
ಪ್ರಧಾನಿ ಮೋದಿ ಭಾವುಕ
TV9 Web
| Edited By: |

Updated on:Aug 21, 2021 | 10:03 AM

Share

ದೆಹಲಿ: ದೇಶದೆಲ್ಲೆಡೆ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡಿತ್ತು. ಕೊವಿಡ್ ಸೋಂಕಿನ ಎರಡನೇ ಅಲೆ ವೇಗವಾಗಿ ಹಬ್ಬಿ, ಜನರಲ್ಲಿ ಆತಂಕ ಸೃಷ್ಟಿಮಾಡಿತ್ತು. ಸೂಕ್ತ ವೈದ್ಯಕೀಯ ಸೌಲಭ್ಯ, ವೈದ್ಯಕೀಯ ಆಮ್ಲಜನಕ ಪೂರೈಕೆಯ ಅಭಾವವೂ ಕಂಡುಬಂದಿತ್ತು. ಅದೆಲ್ಲದರಿಂದ ಮುಂದುವರಿದು ಪ್ರಸ್ತುತ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹಂತಹಂತವಾಗಿ ಇಳಿಕೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೊರೊನಾ ಸೋಂಕಿನ ಕುರಿತಾಗಿ ಮಾತನಾಡಿದ್ದರು. ಆಗ ವೈದ್ಯರು, ಮುಂಚೂಣಿಯ ಕಾರ್ಯಕರ್ತರನ್ನು ನೆನೆದು ಭಾವುಕರಾಗಿದ್ದರು.

ಮೋದಿ ಭಾಷಣದ ಈ ಭಾಗ ಹಲವಾರು ಅಭಿಪ್ರಾಯಗಳು ಸೃಷ್ಟಿಯಾಗುವಂತೆ ಮಾಡಿತ್ತು. ಸಾಮಾಜಿಕ ಜಾಲತಾಣದಲ್ಲಿ ವಿಚಾರ ಪರ-ವಿರೋಧ, ಟೀಕೆ, ಟ್ರಾಲ್​ಗೂ ಕಾರಣವಾಗಿತ್ತು. ಈ ಬಗ್ಗೆ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದು ಹೇಳಲಾಗಿದ್ದ, ಪತ್ರಿಕೆಯ ಮುಖಪುಟದ ಫೊಟೋ ಕೂಡ ವೈರಲ್ ಆಗಿತ್ತು.

ಭಾರತದ ಪ್ರಧಾನ ಮಂತ್ರಿ ಅತ್ತರು ಎಂದು ಬರೆದು, ಮೊಸಳೆ ಕಣ್ಣೀರು ಸುರಿಸುತ್ತಿರುವ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಲ್ಪಟ್ಟಿತ್ತು. ಆದರೆ ನಿಜ ವಿಚಾರ ಏನೆಂದರೆ, ಈ ರೀತಿಯ ಯಾವುದೇ ಲೇಖನ, ಫೊಟೋ ನ್ಯೂಯಾರ್ಕ್ ಟೈಮ್ಸ್​ನಲ್ಲಿ ಪ್ರಕಟವಾಗಿಲ್ಲ. ಬದಲಾಗಿ, ದಿ ಡೈಲಿ ನ್ಯೂಯಾರ್ಕ್ ಟೈಮ್ಸ್ ಎಂಬ ಮತ್ತೊಂದು ಟ್ವಿಟರ್ ಖಾತೆ ಈ ಚಿತ್ರವನ್ನು ಹಂಚಿಕೊಂಡಿತ್ತು.

ಇದೇ ಮುಖಪುಟದಲ್ಲಿ ಇರುವ ಮುಖ್ಯ ಸುದ್ದಿ ಮೇ 21ರ ನ್ಯೂಯಾರ್ಕ್ ಟೈಮ್ಸ್ ನ ವರದಿಯದ್ದಾಗಿದೆ.

ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ಪ್ರಾಣ ಕಳೆದುಕೊಂಡ ಜನರಿಗೆ ಪಿಎಂ ಮೋದಿ ಗೌರವ ಸಲ್ಲಿಸಿದರು. ಈ ವೈರಸ್ ನಮ್ಮ ಪ್ರೀತಿಪಾತ್ರರನ್ನು ನಮ್ಮಿಂದ ಕಿತ್ತುಕೊಂಡಿದೆ.  ವೈದ್ಯರೊಂದಿಗೆ ಸಂವಾದದ ವೇೆೆಳೆ ಮೋದಿ ಭಾವುಕರಾಗಿದ್ದರು. ಕೊವಿಡ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿರುವ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂವಾದ ನಡೆಸಿದ್ದರು. ಕೊವಿಡ್ -19 ವಿರುದ್ಧ ಎಲ್ಲಾ ದಾದಿಯರು, ವೈದ್ಯರು, ಆಂಬ್ಯುಲೆನ್ಸ್ ಚಾಲಕರು ಮತ್ತು ವಾರ್ಡ್‌ಬಾಯ್‌ಗಳು ಜತೆಯಾಗಿ ಕಾರ್ಯನಿರ್ವಹಿಸಿರುವುದು ಎಂಬುದು ಶ್ಲಾಘನೀಯ ಎಂದು ಮೋದಿ ಹೇಳಿದ್ದರು.

ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆಯನ್ನು ಕೈಗೆ ಏಕೆ ನೀಡಲಾಗುತ್ತದೆ? ಸೊಂಟಕ್ಕೆ ಏಕಿಲ್ಲ? ಇಲ್ಲಿದೆ ಸಂಪೂರ್ಣ ವಿವರ

ಕೊವಿಡ್​ 19 ಲಸಿಕೆ ಪ್ರಮಾಣಪತ್ರದ ಮೇಲೆ ಪ್ರಧಾನಿ ಬದಲು ಮುಖ್ಯಮಂತ್ರಿ ಫೋಟೋ; ನೋಂದಣಿ ಆ್ಯಪ್​ ಕೂಡ ಬದಲಿಸಿದ ಛತ್ತೀಸ್​ಗಡ್​

Published On - 11:02 pm, Sat, 22 May 21