AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಕಿಭಾಯ್ ಅನ್ನು ಹೀಗೂ ನೋಡಬಹುದು: ಪುಟ್ಟ ಬಾಲಕನ ಮಾತು ಕೇಳಿ

Rocky Bhai: ‘ಕೆಜಿಎಫ್​’ನ ರಾಕಿಭಾಯ್ ಪಾತ್ರ ಅನುಕರಣೀಯ ಅಲ್ಲ, ಸಮಾಜಕ್ಕೆ ಮಾರಕ ಆಗುವಂಥಹಾ ಪಾತ್ರ ಅದು ಎಂಬ ಟೀಕೆ ವ್ಯಕ್ತವಾಗಿತ್ತು, ‘ಕೆಜಿಎಫ್’ ಸಿನಿಮಾ ನೋಡಿ ಯುವಕನೊಬ್ಬ ಕೊಲೆ ಮಾಡಿದ ಘಟನೆಯೂ ಸಹ ನಡೆದಿದ್ದನ್ನು ಸಹ ಇಲ್ಲಿ ಸ್ಮರಿಸಬಹುದು. ಆದರೆ ಇದೀಗ ಪುಟ್ಟ ಬಾಲಕನೊಬ್ಬನ ವಿಡಿಯೋ ವೈರಲ್ ಆಗಿದ್ದು, ರಾಕಿಭಾಯ್ ಬಗ್ಗೆ ಆ ಬಾಲಕ ಆಡಿರುವ ಮಾತು ಕೇಳಿ...

ರಾಕಿಭಾಯ್ ಅನ್ನು ಹೀಗೂ ನೋಡಬಹುದು: ಪುಟ್ಟ ಬಾಲಕನ ಮಾತು ಕೇಳಿ
Yash Rockybhai
ಮಂಜುನಾಥ ಸಿ.
|

Updated on: Feb 20, 2026 | 1:29 PM

Share

‘ಕೆಜಿಎಫ್’ ಮತ್ತು ‘ಕೆಜಿಎಫ್ 2’ ಸಿನಿಮಾಗಳಲ್ಲಿ ಯಶ್ (Yash) ನಿರ್ವಹಿಸಿರುವ ರಾಕಿಭಾಯ್ ಪಾತ್ರಕ್ಕೆ ಭಾರಿ ಜನಮನ್ನಣೆ ಸಿಕ್ಕಿದೆ. ರಾಕಿಭಾಯ್ ಅಭಿಮಾನಿಗಳು ರಾಷ್ಟ್ರದಾದ್ಯಂತ ಇದ್ದಾರೆ. ಯಶ್ ಅವರು ರಾಕಿಭಾಯ್ ಪಾತ್ರಕ್ಕೆ ಜೀವವೇ ತುಂಬಿದ್ದಾರೆ. ಆದರೆ ರಾಕಿಭಾಯ್ ಪಾತ್ರ ಅನುಕರಣೀಯ ಅಲ್ಲ, ಸಮಾಜಕ್ಕೆ ಮಾರಕ ಆಗುವಂಥಹಾ ಪಾತ್ರ ಅದು ಎಂಬ ಟೀಕೆ ಸಹ ವ್ಯಕ್ತವಾಗಿತ್ತು, ‘ಕೆಜಿಎಫ್’ ಸಿನಿಮಾ ನೋಡಿ ಯುವಕನೊಬ್ಬ ಕೊಲೆ ಮಾಡಿದ ಘಟನೆಯೂ ಸಹ ನಡೆದಿದ್ದನ್ನು ಸಹ ಇಲ್ಲಿ ಸ್ಮರಿಸಬಹುದು. ರಾಕಿಭಾಯ್​​ಗೆ ಎರಡು ಮುಖವಿದೆ, ಒಂದು ಹಿಂಸೆಯ ಮುಖವಾದರೆ ಮತ್ತೊಂದು ಛಲಗಾರನದ್ದು. ಏನೂ ಇಲ್ಲದವನು ತನ್ನ ಛಲ, ಧೈರ್ಯದಿಂದ ಎಲ್ಲವನ್ನೂ ಗಳಿಸಬಲ್ಲ ಎಂಬುದನ್ನು ತೋರಿಸಿದ ಪಾತ್ರವದು. ಅದೇ ಆ ಪಾತ್ರದ ಆತ್ಮ ಸಹ. ಆದರೆ ಅದನ್ನು ಅರಿತುಕೊಂಡವರು ಬಹಳ ವಿರಳ.

ಇದೀಗ ಪುಟ್ಟ ಬಾಲಕನೊಬ್ಬನ ವಿಡಿಯೋ ವೈರಲ್ ಆಗಿದೆ. ಆ ಪುಟ್ಟ ಬಾಲಕ ರಾಕಿಭಾಯ್​​ನ ನಿಜವಾದ ಅಭಿಮಾನಿ. ರಾಕಿಭಾಯ್​ ಅನ್ನು ನಿಜವಾಗಿ ಅರ್ಥ ಮಾಡಿಕೊಂಡಿರುವಾತ. ಇದೀಗ ವೈರಲ್ ಆಗಿರುವ ರೀಲ್​​ನಲ್ಲಿ ಪುಟ್ಟ ಬಾಲಕನೊಬ್ಬ ರಸ್ತೆಯಲ್ಲಿ ಕ್ಯಾರಿ ಬ್ಯಾಗುಗಳನ್ನು ಮಾರಾಟ ಮಾಡುತ್ತಿದ್ದಾನೆ. ಯೂಟ್ಯೂಬರ್ ಒಬ್ಬ ಆತನ ಹತ್ತಿರ ಹೋಗಿ, ಏನಿದು? ಎಂದು ಕೇಳುತ್ತಾನೆ. ಹುಡುಗ ‘ಕ್ಯಾರಿ ಬ್ಯಾಗ್’ ಎನ್ನುತ್ತಾನೆ. ‘ಯಾಕಾಗಿ ಮಾರುತ್ತಿದ್ದೀಯ?’ ಎಂದು ಕೇಳುತ್ತಾನೆ ಯೂಟ್ಯೂಬರ್, ಆ ಪುಟ್ಟ ಬಾಲಕ ‘ಶ್ರೀಮಂತನಾಗಲು’ ಎನ್ನುತ್ತಾನೆ. ಆಗ ಯೂಟ್ಯೂಬರ್, ‘ನೀನು ದೊಡ್ಡವನಾದ ಮೇಲೆ ಯಾರ ರೀತಿ ಆಗಬೇಕು ಎಂದು ನಿನ್ನ ಆಸೆ?’ ಎಂದು ಕೇಳುತ್ತಾನೆ, ಅದಕ್ಕೆ ಆ ಬಾಲಕ ‘ರಾಕಿಭಾಯ್’ ಎನ್ನುತ್ತಾನೆ. ಅದ್ಯಾಕೆ ರಾಕಿಭಾಯ್ ಬಗ್ಗೆ ಆಗಬೇಕು? ಎಂದು ಕೇಳಿದ್ದಕ್ಕೆ, ‘ರಾಕಿಭಾಯ್, ತನ್ನ ತಾಯಿಗೆ ಇಡೀ ಪ್ರಪಂಚದ ಚಿನ್ನವನ್ನು ತಂದುಕೊಡುತ್ತೇನೆಂದು ಹೇಳಿದ್ದ, ನಾನು ಹಾಗೆಯೇ ತನ್ನ ತಾಯಿಗೆ ಚಿನ್ನ ತಂದುಕೊಡುತ್ತೇನೆ’ ಎನ್ನುತ್ತಾನೆ.

ಇದನ್ನೂ ಓದಿ:‘ಟಾಕ್ಸಿಕ್’ಗಾಗಿ ಒಂದಾದ ‘ಕೆಜಿಎಫ್’ ಜೋಡಿ: ಉತ್ತರದ ಹಕ್ಕು ಭಾರಿ ಮೊತ್ತಕ್ಕೆ ಡೀಲ್

ವಿಡಿಯೋ ತುಸು ಹಳೆಯದ್ದಾದರೂ ಈಗ ಮತ್ತೆ ವೈರಲ್ ಆಗುತ್ತಿದೆ. ಪುಟ್ಟ ಬಡ ಬಾಲಕನಿಗೆ ದೊಡ್ಡದಾಗಿ ಯೋಚಿಸುವುದಕ್ಕೆ, ತನ್ನ ತಾಯಿಯನ್ನು ಪ್ರೀತಿಸುವುದಕ್ಕೆ, ಬಡತನದಿಂದ ಹೊರ ಬಂದು ಶ್ರೀಮಂತನಾಗುವುದಕ್ಕೆ ಸ್ಪೂರ್ತಿ ತುಂಬಿದ್ದಾನೆ ರಾಕಿಭಾಯ್. ಇದೀಗ ಈ ವಿಡಿಯೋಕ್ಕೆ ಹಲವಾರು ಮೆಚ್ಚುಗೆಯ ಪ್ರತಿಕ್ರಿಯೆಗಳು ಬಂದಿವೆ. ಆದರೆ ಕೆಲವರು ಈ ವಿಡಿಯೋ ಸ್ಕ್ರಿಪ್ಟೆಡ್, ಮೊದಲೇ ಹುಡುಗನಿಗೆ ಅದೇ ಉತ್ತರ ಕೊಡುವಂತೆ ಹೇಳಿಕೊಟ್ಟಿರಬಹುದು ಎಂಬ ಟೀಕೆಗಳೂ ಸಹ ವ್ಯಕ್ತವಾಗುತ್ತಿವೆ.

ಏನೇ ಆಗಲಿ, ರಾಕಿಭಾಯ್, ಹಲವಾರು ಯುವಕರಿಗೆ ಬದುಕಿನಲ್ಲಿ ಗೆಲುವು ಸ್ಪೂರ್ತಿ ತುಂಬಿರುವುದಂತೂ ನಿಜ. ಆದರೆ ಸ್ಪೂರ್ತಿ ಪಡೆದ ಯುವಕರು ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕಷ್ಟೆ. ಸಿನಿಮಾನಲ್ಲಿ ಕಮರ್ಶಿಯಲ್ ಕಾರಣಗಳಿಗಾಗಿಯೋ ಅಥವಾ ಮಾಸ್ ಅಂಶಗಳಿಗಾಗಿಯೋ ರಾಕಿಭಾಯ್ ಹಿಂಸೆಯ ದಾರಿ ಹಿಡಿಯುತ್ತಾನೆ ಆದರೆ ನಿಜ ಜೀವನದಲ್ಲಿ ರಾಕಿಭಾಯ್ ಅಭಿಮಾನಿಗಳು ಕಾನೂನಿನ ಗಡಿಯ ಒಳಗೆ ಗೆಲ್ಲುವ ಹೋರಾಟವನ್ನು ಮಾಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಎಕ್ಸಾಂ ಹಾಲ್ ಟಿಕೆಟ್ ತೋರಿಸಿದ್ರೆ ಬಾಲಕರಿಗೂ ಉಚಿತ ಪ್ರಯಾಣ
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಮಕ್ಕಳ ಪರೀಕ್ಷಾ ಒತ್ತಡ ನಿವಾರಣೆಗೆ ಪೋಷಕರು ಮಾಡಬೇಕಾದ್ದು ಏನು?
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಸಿಸಿಟಿವಿಯಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಬೇಸಿಗೆಗೂ ಮುನ್ನ ಮಂತ್ರಾಲಯದಲ್ಲಿ ನೀರಿಗೆ ತತ್ವಾರ: ಪುಣ್ಯಸ್ನಾನಕ್ಕೂ ಪರದಾಟ
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ಪುಸ್ತಕ ಹಿಡಿದುಕೊಂಡು ಓದಲು ಕುಳಿತಾಗಲೇ ನಿದ್ದೆ ಬರುತ್ತಾ?
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ