AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಮಾನ ನಿಲ್ದಾಣದೊಳಗೆ ಕಪಿರಾಯನ ಭರ್ಜರಿ ಬೇಟೆ; ವೈರಲ್ ಆಯ್ತು ಹಳೇ ವಿಡಿಯೋ

ಒಂದರ ನಂತರ ಒಂದು ತಿನಿಸುಗಳನ್ನು ಹೊಟ್ಟೆಗಿಳಿಸಿದ ಕೋತಿ ಕೊನೆಗೆ ಶಾಸ್ತ್ರೋಕ್ತವಾಗಿ ಊಟ ಪೂರೈಸುವಂತೆ ಅಲ್ಲಿಟ್ಟಿದ್ದ ಹಣ್ಣುಗಳ ಪೈಕಿ ಒಂದೇ ಒಂದು ಬಾಳೆಹಣ್ಣನ್ನು ಕೈಗೆತ್ತಿಕೊಂಡು ಜಾಗ ಖಾಲಿ ಮಾಡಿದೆ. ಭಾರತೀಯರಿಗೆ ಮನೆ ಹಂಚು ಇಳಿಸಿ ಬರುವ ಮಂಗಗಳ ಉಪಟಳ ನೋಡಿ ನೋಡಿ ಇವೆಲ್ಲಾ ವಿಶೇಷ ಅನ್ನಿಸದಿದ್ದರೂ ವಿದೇಶಿ ಪ್ರಯಾಣಿಕರಿಗೆ ಇದೊಂದು ಅವಿಸ್ಮರಣೀಯ ಸಂಗತಿಯಂತೆ ಕಂಡಿದೆ.

ವಿಮಾನ ನಿಲ್ದಾಣದೊಳಗೆ ಕಪಿರಾಯನ ಭರ್ಜರಿ ಬೇಟೆ; ವೈರಲ್ ಆಯ್ತು ಹಳೇ ವಿಡಿಯೋ
ಭರ್ಜರಿ ಭೋಜನದಲ್ಲಿ ತಲ್ಲೀನವಾಗಿರುವ ಕೋತಿ
Skanda
|

Updated on: May 20, 2021 | 3:23 PM

Share

ಸಾಮಾಜಿಕ ಜಾಲತಾಣಗಳೊಳಗೆ ಯಾವಾಗ ಯಾವ ಸಂಗತಿ ವೈರಲ್ ಆಗುತ್ತದೆ ಎಂದು ಯಾರೂ ಊಹಿಸಲಾಗದು. ಕೆಲವೊಂದು ವಿಚಾರಗಳು ಹೇಗೆ ವೈರಲ್ ಆದವು ಎನ್ನುವುದೂ ತಿಳಿಯುವುದಿಲ್ಲ. ಇಲ್ಲೊಂದು ವಿಡಿಯೋ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಇದನ್ನು ನವದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದ್ದು, ಕೋತಿಯೊಂದು ವಿಮಾನ ನಿಲ್ದಾಣದೊಳಗೆ ಕುಳಿತು ಭರ್ಜರಿ ಬೇಟೆ ಕಲೆಹಾಕಿದೆ. ಬೇಟೆ ಅಂದ ಕೂಡಲೇ ಈ ಕೋತಿಯೇ ಹೋರಾಡಿ ಏನನ್ನೋ ಹೊಸಕಿ ಹಾಕಿರಬಹುದು ಎಂದು ಭಾವಿಸಬೇಡಿ. ಇದೊಂದು ರೀತಿಯಲ್ಲಿ ಕಪಿರಾಯನನ್ನೇ ಅರಸಿಕೊಂಡು ಬಂದ ಭಾಗ್ಯ! ಹೌದು, ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ವಿಶ್ರಾಂತಿ ಪಡೆಯಲೆಂದು ಇರುವ ವಿಶೇಷ ಕೋಣೆಯಲ್ಲಿ ತರಹೇವಾರಿ ತಿನಿಸು, ಹಣ್ಣು-ಹಂಪಲುಗಳನ್ನು ಇರಿಸಲಾಗಿತ್ತು. ಅದನ್ನು ಕಂಡ ಕೋತಿ ಸೀದಾ ಕೋಣೆಯೊಳಗೆ ಲಗ್ಗೆ ಇಟ್ಟು ತನಗೆ ಬೇಕಾಗಿದ್ದನ್ನೆಲ್ಲಾ ಸ್ವಾಹ ಮಾಡಿದೆ. ಅಂದಹಾಗೆ ಈ ವಿಡಿಯೋ ಕೊರೊನಾ ಪೂರ್ವಕಾಲದ್ದಾಗಿದೆ. ಪ್ರವಾಸದ ನಿಮಿತ್ತ ಭಾರತಕ್ಕೆ ಬಂದಿದ್ದ ಜೆನ್ನಾ ಕರ್ಟಿಸ್ ಎಂಬುವವರು ಮಾರ್ಚ್​ 5, 2018ರಂದು ಇದನ್ನು ಚಿತ್ರೀಕರಿಸಿದ್ದಾರೆ. ಆದರೆ, ಆ ದೃಶ್ಯ ಈಗ ವೈರಲ್ ಆಗಿದೆ.

ಜೆನ್ನಾ ಕರ್ಟಿಸ್ ವಿಮಾನಕ್ಕಾಗಿ ಕಾದು ಕುಳಿತಿದ್ದ ವೇಳೆ ಬಾಯಾರಿಕೆ ಆಯಿತೆಂದು ಕುಡಿಯಲು ನೀರು ತುಂಬಿಸಿಕೊಂಡ ಬರಲು ವಿಶ್ರಾಂತಿ ಕೊಠಡಿ ಬಳಿ ತೆರಳಿದ್ದಾರೆ. ಅಲ್ಲಿ ಬೇಕಾದಷ್ಟು ತಿಂಡಿ-ತಿನಿಸು, ಹಣ್ಣು-ಹಂಪಲು ಇತ್ತಾದರೂ ತುರ್ತಾಗಿ ನೀರು ಬೇಕಿದ್ದ ಕಾರಣ ಫ್ರಿಡ್ಜ್​ನಿಂದ ನೀರು ತುಂಬಿಸಿಕೊಂಡಿದ್ದಾರೆ. ಆದರೆ, ನೀರು ತೆಗೆದುಕೊಂಡು ಹಿಂದೆ ತಿರುಗಿದಾಗ ಅವರಿಗೆ ಭಾರೀ ಅಚ್ಚರಿಯೊಂದು ಕಾದಿತ್ತು. ಏಕೆಂದರೆ ಜನಜಂಗುಳಿಯಿದ್ದ ಅದ್ದೂರಿ ವಿಮಾನ ನಿಲ್ದಾಣದಲ್ಲಿ ಕಪಿರಾಯ ಹಾಜರಾಗಿದ್ದ. ಅದೂ ಪ್ರಯಾಣಿಕರ ವಿಶೇಷ ಕೊಠಡಿಯಲ್ಲಿ.

ಜೆನ್ನಾ ಕರ್ಟಿಸ್ ಹತ್ತಿರ ಹೋದರೂ ಕೋತಿ ಭಯಗೊಳ್ಳದೇ ಆರಾಮಾಗಿ ಅಲ್ಲಿಟ್ಟಿದ್ದ ಸಿಹಿ ತಿನಿಸು ತಿನ್ನುವುದನ್ನು ಮುಂದುವರೆಸಿದಾಗ ಅವರಿಗೆ ಅಚ್ಚರಿಯಾಗಿದೆ. ಪ್ರಾಣಿಯೊಂದು ಈ ಪರಿ ಮನುಷ್ಯರೊಂದಿಗೆ ಒಡನಾಟ ಬೆಳೆಸಿಕೊಳ್ಳುವುದು ಹೇಗೆ ಸಾಧ್ಯ ಎಂದು ಭಾವಿಸಿ ತಕ್ಷಣವೇ ಅವರ ಪಾಲಿಗೆ ವಿಶೇಷವೆನಿಸಿದ ದೃಶ್ಯವನ್ನು ಚಿತ್ರೀಕರಿಸಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಾಣುವಂತೆ ಮಂಗ ಆರಾಮಾಗಿ ಯಾವುದೇ ಭಯಭೀತಿಯಿಲ್ಲದೆ ತನಗೆ ಬೇಕಾದ ತಿನಿಸನ್ನು ತಿನ್ನುತ್ತಾ ಕುಳಿತಿದೆ. ನಂತರ ಬೇರೆ ಬೇರೆ ಟೇಬಲ್​ಗೆ ತೆರಳಿ ಯಾವುದು ಬೇಕೋ ಅದನ್ನು ಬಾಯಿಗಿರಿಸಿಕೊಂಡಿದೆ.

ಕೆಲ ಕಾಲ ಒಂದರ ನಂತರ ಒಂದು ತಿನಿಸುಗಳನ್ನು ಹೊಟ್ಟೆಗಿಳಿಸಿದ ಕೋತಿ ಕೊನೆಗೆ ಶಾಸ್ತ್ರೋಕ್ತವಾಗಿ ಊಟ ಪೂರೈಸುವಂತೆ ಅಲ್ಲಿಟ್ಟಿದ್ದ ಹಣ್ಣುಗಳ ಪೈಕಿ ಒಂದೇ ಒಂದು ಬಾಳೆಹಣ್ಣನ್ನು ಕೈಗೆತ್ತಿಕೊಂಡು ಜಾಗ ಖಾಲಿ ಮಾಡಿದೆ. ಭಾರತೀಯರಿಗೆ ಮನೆ ಹಂಚು ಇಳಿಸಿ ಬರುವ ಮಂಗಗಳ ಉಪಟಳ ನೋಡಿ ನೋಡಿ ಇವೆಲ್ಲಾ ವಿಶೇಷ ಅನ್ನಿಸದಿದ್ದರೂ ವಿದೇಶಿ ಪ್ರಯಾಣಿಕರಿಗೆ ಇದೊಂದು ಅವಿಸ್ಮರಣೀಯ ಸಂಗತಿಯಂತೆ ಕಂಡಿದೆ. ಇದೀಗ ಈ ವಿಡಿಯೋ ಯೂಟ್ಯೂಬ್​ನಲ್ಲೂ ಅಪ್​ಲೋಡ್ ಆಗಿದ್ದು, ಸಾಕಷ್ಟು ವೀಕ್ಷಕರನ್ನು ಗಳಿಸಿಕೊಂಡಿದೆ.

(Monkey sitting in Delhi Airport lounge eating sweets and fruits old video goes viral)

ಇದನ್ನೂ ಓದಿ: Viral Video: ಕೈಯಲ್ಲಿ ಬ್ರಶ್​ ಹಿಡಿದು ಬಟ್ಟೆ ತೊಳೆಯುತ್ತಿರುವ ಮಂಗನನ್ನು ನೋಡಿ! ಕೋತಿ ಚೇಷ್ಟೆಗೆ ನೆಟ್ಟಿಗರು ಫಿದಾ 

Viral Video: ಕೋತಿ ತರಕಾರಿ ಕತ್ತರಿಸುವ ಚೆಂದ..; ಮಹಿಳೆಗೆ ಸಹಾಯ ಮಾಡುವ ಮಂಗಕ್ಕೆ ಮನಸೋತ ನೆಟ್ಟಿಗರು !

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​