ದೆಹಲಿ: ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುವ ಕೆಲವು ವಿಡಿಯೋಗಳು ನಿಜಕ್ಕೂ ಅಚ್ಚರಿ ಹುಟ್ಟಿಸುತ್ತವೆ. ಅದರಲ್ಲೂ ಪ್ರಾಣಿಗಳ ವಿಡಿಯೋಗಳಂತೂ ಮನಸಿಗೆ ಮುದ ನೀಡುವುದರಲ್ಲಿ ಅನುಮಾನವೇ ಇಲ್ಲ. ಹಾಗೇ, ಈಗ ಕೋತಿಯೊಂದು ಮಹಿಳೆಗೆ ಅಡುಗೆಮನೆಯಲ್ಲಿ ಸಹಾಯ ಮಾಡುತ್ತಿರುವ ಕ್ಯೂಟ್ ವಿಡಿಯೋವೊಂದು ಸಿಕ್ಕಾಪಟೆ ವೈರಲ್ ಆಗುತ್ತಿದೆ. ಇದನ್ನು ಅಮನ್ ಪ್ರೀತ್ ಎಂಬುವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕೋತಿಗಳು ಚೇಷ್ಟೆ ಮಾಡುವುದು ತೀರ ಸಹಜ. ಆದರೆ ಟ್ವಿಟರ್ನಲ್ಲಿ ಈಗ ಶೇರ್ ಆಗಿರುವ 1 ನಿಮಿಷದ ವಿಡಿಯೋದಲ್ಲಿ ಕೋತಿ ಗಂಭೀರವಾಗಿ ಕುಳಿತುಕೊಂಡು ಬೀನ್ಸ್ನ್ನು ಕತ್ತರಿಸುತ್ತಿರುವುದನ್ನು ನೋಡಬಹುದು. ವಿಡಿಯೋದಲ್ಲಿ ಮಹಿಳೆಯೊಬ್ಬರ ಕೈ ಮಾತ್ರ ಕಾಣಿಸುತ್ತಿದೆ. ಅವರು ಬೀನ್ಸ್ನ ನಾರು, ತೊಟ್ಟು ತೆಗೆದು ಕೋತಿಯ ಎದುರು ಇರುವ ಪಾತ್ರೆಗೆ ಹಾಕುತ್ತಾರೆ. ನಂತರ ಅದನ್ನು ಮಂಗ ಕೈಯಲ್ಲೇ ಮುರಿಯುತ್ತದೆ. ವಿಡಿಯೋ ಶೇರ್ ಮಾಡಿಕೊಂಡಿರುವ ಅಮನ್ ಪ್ರೀತ್, ಇದು ನಾರಿಶಕ್ತಿ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಈ ವಿಡಿಯೋ 12 ಸಾವಿರಕ್ಕೂ ಅಧಿಕ ವೀವ್ಸ್ ಪಡೆದುಕೊಂಡಿದ್ದು, 193 ಸಲ ರೀಟ್ವೀಟ್ ಆಗಿದೆ. ನೆಟ್ಟಿಗರು ತುಂಬ ಖುಷಿ ವ್ಯಕ್ತಪಡಿಸಿ, ಕಾಮೆಂಟ್ಗಳನ್ನು ಹಾಕಿದ್ದಾರೆ. ಆ ಕೋತಿಯನ್ನು ಮತ್ತು ಕೋತಿಗೆ ತರಕಾರಿ ಕತ್ತರಿಸುವ ತರಬೇತಿ ನೀಡಿದ ಮಹಿಳೆಯನ್ನು ಹೊಗಳುತ್ತಿದ್ದಾರೆ. ವಾಸ್ತವವಾಗಿ ಮಹಿಳೆಯರು ಅತ್ಯುತ್ತಮ ವ್ಯವಸ್ಥಾಪಕರು. ಅದನ್ನು ಈ ವಿಡಿಯೋ ಮತ್ತೊಮ್ಮೆ ಸಾಕ್ಷೀಕರಿಸಿತು ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಹಾಗೇ, ಇನ್ನೊಬ್ಬರು, ಕೋತಿ ಮಾಡಿದ ಕೆಲಸದ ಬಗ್ಗೆ ಏನನ್ನೂ ಹೇಳಲಾರೆ. ಆದರೆ ಮಹಿಳೆಯರು, ಪುರುಷನನ್ನೂ ಕೋತಿಯನ್ನಾಗಿ ಮಾಡಬಲ್ಲರು ಎಂದು ಫನ್ನಿಯಾಗಿ ಬರೆದಿದ್ದಾರೆ.
ऐसा है के अगर हम कुछ ठान लें तो इंसानों से लेकर बन्दरों तक सबसे काम करवा लेती हैं !! 😃😃।। नारी शक्ति ।। pic.twitter.com/kOuL0ckBql
— Aman Preet IRS (@IrsAman) February 16, 2021
ಕೋತಿಗಳ ವಿಡಿಯೋಗಳು ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಎತ್ತರದ ಕಟ್ಟಡದ ಮೇಲೆ ನಿಂತು ಕೋತಿಯೊಂದು ಗಾಳಿಪಟ ಹಾರಿಸುತ್ತಿರುವ ವಿಡಿಯೋ ನೆಟ್ಟಿಗರ ಮನಗೆದ್ದಿತ್ತು. ಹಾಗೇ, ಇತ್ತೀಚೆಗೆ ಕೋತಿಗಳ ಗುಂಪೊಂದು ಕೇಕ್ ತಿನ್ನುತ್ತಿರುವ ವಿಡಿಯೋ ಕೂಡ ಸೋಷಿಯಲ್ ಮಿಡಿಯಾದಲ್ಲಿ ಪ್ರಸಾರವಾಗಿತ್ತು. ಇಲ್ಲಿ ಕೋತಿಗಳು ಕೇಕ್ಗಾಗಿ ಗಲಾಟೆ, ಹೊಡೆದಾಟ ಮಾಡಿಕೊಳ್ಳದೆ ಒಟ್ಟಾಗಿ, ಫುಲ್ ಖುಷಿಯಿಂದ ತಿನ್ನುತ್ತಿರುವುದನ್ನು ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದರು.