Viral Video | ಶ್ರೀಲಂಕಾ ಕ್ರಿಕೆಟಿಗನ ವಿಚಿತ್ರ ಬೌಲಿಂಗ್​ ಶೈಲಿ, ಎದುರಾಳಿ ತಂಡದ ಬ್ಯಾಟ್ಸ್​ಮನ್​ ಜೊತೆ ಕಾಮೆಂಟೇಟರ್ಸ್​ಗೂ ಶಾಕ್​..!

ಟಿ 10 ಲೀಗ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ಕೊಥಿಗೋಡ ಅವರ ವಿಲಕ್ಷಣ ಬೌಲಿಂಗ್ ಶೈಲಿಯಿಂದ ಗೊಂದಲಕ್ಕೊಳಗಾಗಿದ್ದಾರೆ. ಈಗ ಕೊಥಿಗೋಡಾದ ಬೌಲಿಂಗ್ ಶೈಲಿಯನ್ನು ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಪಾಲ್ ಆಡಮ್ಸ್ ಅವರೊಂದಿಗೆ ಹೋಲಿಸಲಾಗಿದೆ.

Viral Video | ಶ್ರೀಲಂಕಾ ಕ್ರಿಕೆಟಿಗನ ವಿಚಿತ್ರ ಬೌಲಿಂಗ್​ ಶೈಲಿ, ಎದುರಾಳಿ ತಂಡದ ಬ್ಯಾಟ್ಸ್​ಮನ್​ ಜೊತೆ ಕಾಮೆಂಟೇಟರ್ಸ್​ಗೂ ಶಾಕ್​..!
ಕೆವಿನ್ ಕೊಥಿಗೋಡ
pruthvi Shankar

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 04, 2021 | 7:58 PM

ಅಬುಧಾಬಿ: ಶ್ರೀಲಂಕಾ ಲೆಗ್ ಸ್ಪಿನ್ನರ್ ಕೆವಿನ್ ಕೊಥಿಗೋಡ ತಮ್ಮ ಹೊಸರೀತಿಯ ಬೌಲಿಂಗ್ ಶೈಲಿಯಿಂದ ಕ್ರಿಕೆಟ್ ಜಗತ್ತನ್ನು ತಮ್ಮತ್ತ ಸೆಳೆದಿದ್ದಾರೆ. ಮಲೇಷ್ಯಾದಲ್ಲಿ ನಡೆದ ಯೂತ್ ಏಷ್ಯಾ ಕಪ್‌ನಲ್ಲಿ ಕೆವಿನ್ ಕೊಥಿಗೋಡ ಬೌಲಿಂಗ್ ಮಾಡುವ ವಿಡಿಯೋಗಳು ಈಗ ಫುಲ್​ ವೈರಲ್ ಆಗಿದೆ. ಅಬುಧಾಬಿ ಟಿ 10 ಲೀಗ್‌ನಲ್ಲಿ ಬ್ಯಾಟ್ಸ್‌ಮನ್‌ಗಳು, ಕೊಥಿಗೋಡ ಅವರ ವಿಲಕ್ಷಣ ಬೌಲಿಂಗ್ ಶೈಲಿಯಿಂದ ಗೊಂದಲಕ್ಕೊಳಗಾಗಿದ್ದಾರೆ. ಈಗ ಕೊಥಿಗೋಡಾದ ಬೌಲಿಂಗ್ ಶೈಲಿಯನ್ನು ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್ ಪಾಲ್ ಆಡಮ್ಸ್ ಅವರೊಂದಿಗೆ ಹೋಲಿಸಲಾಗಿದೆ.

ಮಾರ್ಥಾ ಅರೇಬಿಯನ್ಸ್​ ಮತ್ತು ಖಲಂದರ್​ ತಂಡಗಳ ನಡುವಿನ ಅಬುಧಾಬಿ ಟಿ 10 ಪಂದ್ಯದ ಸಮಯದಲ್ಲಿ, ಕೊಥಿಗೋಡ ಬೌಲಿಂಗ್ ಎದುರಿಸಿದ ಎದುರಾಳಿ ತಂಡದ ದಾಂಡಿಗ ಬ್ಯಾಂಟನ್ ತಾವು ಎದುರಿಸಿದ ಮೊದಲ ಎಸೆತದಲ್ಲಿ ಗೊಂದಲಕ್ಕಿಡಾದರು. ಬ್ಯಾಟ್ಸ್‌ಮನ್ ಮತ್ತು ಕಾಮೆಂಟೆಟರ್​ಗಳು ಆರಂಭದಲ್ಲಿ, ಲೆಗ್-ಸ್ಪಿನ್ನರ್ ಕೊಥಿಗೋಡ ಬೌಲಿಂಗ್ ರನ್-ಅಪ್​ನಲ್ಲಿ ಎಡವಟ್ಟಾಗಿರಬಹುದು, ಹೀಗಾಗಿ ಈ ರೀತಿ ಬೌಲಿಂಗ್​ ಮಾಡಿದ್ದಾರೆ ಎಂದು ಬಾವಿಸಿದ್ದರು. ಆದರೆ ಕೋಥಿಗೋಡ ತಮ್ಮ ಅಸಾಂಪ್ರದಾಯಿಕ ಬೌಲಿಂಗ್ ಶೈಲಿಯನ್ನು ಮುಂದಿನ ಎಸೆತದಲ್ಲೂ ಮುಂದುವರೆಸಿದರು. ಇದರಿಂದ ಎದುರಾಳಿ ತಂಡದ ದಾಂಡಿಗ ಬ್ಯಾಂಟನ್ ಹಾಗೂ ಕಾಮೆಂಟೆಟರ್​ಗಳು ಅಕ್ಷರಶಃ ಆಶ್ಚರ್ಯಕ್ಕೊಳಗಾದರು.

India vs England Test Series | ಈ ಸರಣಿಯಲ್ಲೂ ನಿರ್ಣಾಯಕರಾಗುತ್ತಾರಾ ಎಡಗೈ ಸ್ಪಿನ್ನರ್​ಗಳು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada