ಕೆನಡಾದಲ್ಲಿ ಕೆಲಸ-ಮನೆ ಕೊಡಿಸುತ್ತೇನೆ ಎಂದು 9 ಲಕ್ಷ ಮೋಸ ಮಾಡಿದ ಖತರ್ನಾಕ್ ವಂಚಕರು

ಕೆನಡಾದಲ್ಲಿ ಸ್ವಂತ ಮನೆ ಹಾಗೂ ಕೆಲಸ ಕೊಡಿಸುತ್ತೇನೆ ಎಂದು ವ್ಯಕ್ತಿಯೊಬ್ಬನನ್ನು ಮೋಸದ ಜಾಲದಲ್ಲಿ ಸಿಲುಕಿಸಿದ ಸೈಬರ್ ಕ್ರೈಂ ಪ್ರಕರಣ ನೋಯ್ಡಾದಲ್ಲಿ ನಡೆದಿದೆ. ಸ್ಥಳೀಯ ಇಂಜಿನಿಯರ್ ಒಬ್ಬ ಈ ಮೋಸದ ಚಟುವಟಿಕೆಗಳಿಗೆ ಸಿಲುಕಿ ಸುಮಾರು 9 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಕೆನಡಾದಲ್ಲಿ ಕೆಲಸ-ಮನೆ ಕೊಡಿಸುತ್ತೇನೆ ಎಂದು 9 ಲಕ್ಷ ಮೋಸ ಮಾಡಿದ ಖತರ್ನಾಕ್ ವಂಚಕರು
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Apr 06, 2022 | 7:52 PM

ನೋಯ್ಡಾ: ಕೆನಡಾದಲ್ಲಿ ಸ್ವಂತ ಮನೆ ಹಾಗೂ ಕೆಲಸ ಕೊಡಿಸುತ್ತೇನೆ ಎಂದು ವ್ಯಕ್ತಿಯೊಬ್ಬನನ್ನು ಮೋಸದ ಜಾಲದಲ್ಲಿ ಸಿಲುಕಿಸಿದ ಪ್ರಕರಣ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ಸ್ಥಳೀಯ ಇಂಜಿನಿಯರ್ ಒಬ್ಬ ಈ ಮೋಸದ ಚಟುವಟಿಕೆಗಳಿಗೆ ಸಿಲುಕಿ ಸುಮಾರು 9 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಕೆನಡಾ ಮತ್ತು ಇತರ ದೇಶಗಳಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದೆ. ಲಾಕ್​ಡೌನ್ ಸಂದರ್ಭದಲ್ಲಿ ವೆಬ್​ಸೈಟ್ ಮೂಲಕ ಕೆಲಸಕ್ಕೆ ಹುಡುಕಾಡಿದ್ದೆ. ಈ ವೇಳೆ ಆನ್​ಲೈನ್​ನಲ್ಲಿ ನನಗೆ ಮೋಸವಾಗಿದೆ ಎಂದು ವಂಚನೆಗೆ ಒಳಗಾದ ರೋಹಿತ್ ಸೂದ್ ಹೇಳಿದ್ದಾರೆ.

Placement Seekers ಹೆಸರಿನ ಕಂಪೆನಿಯಲ್ಲಿ ರೋಹಿತ್ ಸೂದ್ ರೆಸ್ಯೂಮೆ ಹಾಕಿದ್ದರು. ಜನರಿಗೆ ಕೆಲಸ ಕೊಡಿಸಿ ಅದಕ್ಕೆ ಕಮಿಷನ್​ ತೆಗೆದುಕೊಳ್ಳುವ ಕಂಪನಿ ಇದಾಗಿದೆ. ಪ್ಲೇಸ್​ಮೆಂಟ್​ ಸೀಕರ್ಸ್​ನಿಂದ ಮಾಹಿತಿ ಪಡೆದ ಕೆನಡಾ ಮೂಲದ ಸ್ಕಾಂಸ್ಕಾ ಇಂಜಿನಿಯರಿಂಗ್ (Skanska) ಎಂಬ ಕಂಪೆನಿ ರೋಹಿತ್ ಸೂದ್​ಗೆ ಕರೆ ಮಾಡಿ ಕೆಲಸದ ಆಫರ್ ನೀಡಿತ್ತು. ಆ ಬಳಿಕ ನಡೆದ ಬೆಳವಣಿಗೆಯಲ್ಲಿ ರೋಹಿತ್ ಸೂದ್​ಗೆ ಮೋಸವಾಗಿದೆ.

‘ನಾನು ಕೆಲವಷ್ಟು ವೆಬ್​ಸೈಟ್​ಗಳಲ್ಲಿ ಕೆಲಸಕ್ಕೆ ಅಪ್ಲೈ ಮಾಡಿದ್ದೆ. ಅಲ್ಲಿಂದಲೇ ಅವರು CV ಪರಿಗಣಿಸಿ ಕರೆ ಮಾಡಿರಬಹುದು ಅಂದುಕೊಂಡಿದ್ದೆ. ತ್ರಿಶಾ ವಾಟ್ಸನ್ ಎಂಬವರು ಸಪ್ಟೆಂಬರ್ 2020ರಂದು ಕರೆ ಮಾಡಿ ಇಂಜಿನಿಯರಿಂಗ್ ಸಂಸ್ಥೆಯ ಪ್ರತಿನಿಧಿ ಎಂದು ಹೇಳಿಕೊಂಡಿದ್ದರು. ಜತೆಗೆ, ನೀವು ಕೆಲಸಕ್ಕೆ ಶಾರ್ಟ್​ಲಿಸ್ಟ್ ಆಗಿದ್ದೆ ಎಂದು ಸೂಚಿಸಿದ್ದರು. ಒಂದು ಸುತ್ತಿನ ಫೋನ್ ಮಾತುಕತೆ ಹಾಗೂ ಒಂದು ಝೂಮ್ ಕರೆ ಸಂದರ್ಶನ ನಡೆಸಿ ಕೆನಡಾದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದರು’ ಎಂದು ಘಟನೆಯ ಹಿನ್ನೆಲೆಯನ್ನು ಸೂದ್ ವಿವರಿಸಿದ್ದಾರೆ.

ಈ ಸಂದರ್ಶನಗಳು ಆದಮೇಲೆ ಅವರು ನಿಗದಿತ ಹಣ (Fee) ತುಂಬಲು ಕೇಳಿದ್ದರು. ಹಣ ನೀಡಿದರೆ, ವಕೀಲರ ಮೂಲಕ ಕೆನಡಾದಲ್ಲಿ ಮನೆಯೊಂದನ್ನು ನೀಡಲಾಗುತ್ತದೆ ಎಂದು ಹೇಳಿದ್ದರು. ಎಡ್ವರ್ಡ್ ಡೆನ್ನಿಸ್ ಎಂಬ ಹೆಸರಿನ ವ್ಯಕ್ತಿ ತಾನು ವಕೀಲ ಎಂದು ಹೇಳಿಕೊಂಡು ವಿವಿಧ ಕಾರಣಗಳಿಗಾಗಿ ಹಣ ನೀಡಲು ಕೇಳಿದ್ದರು. ಅಪಾಯಿಂಟ್​ಮೆಂಟ್ ಮೊತ್ತ, ಪರ್ಮನೆಂಟ್ ರೆಸಿಡೆನ್ಸಿ (PR) ಮೊತ್ತ, ಕೆನಡಾದ ಲೇಬರ್ ಮಾರ್ಕೆಟ್ ಇಂಪ್ಯಾಕ್ಟ್ ಅಸೆಸ್​ಮೆಂಟ್ (LMIA) ವರದಿಗೆ ಹಣ, ಸೆಕ್ಯುರಿಟಿ ಕ್ಲಿಯರೆನ್ಸ್, ಕೋಡ್ ಆ್ಯಕ್ಟಿವೇಷನ್ ಹಾಗೂ ಕಾನೂನು ಕೆಲಸಗಳಿಗೆ ವಿವಿಧ ಹಂತದಲ್ಲಿ ಹಣ ಕೇಳಿದ್ದರು.

ಅದರಂತೆ, ರೋಹಿತ್ ಸೂದ್​ನಿಂದ ನ್ಯೂಯಾರ್ಕ್​ನ ಕಮ್ಯುನಿಟಿ ಫೆಡರಲ್ ಸೇವಿಂಗ್ ಬ್ಯಾಂಕ್​ಗೆ ಸುಮಾರು 9 ಲಕ್ಷ ರೂಪಾಯಿ ವರ್ಗಾವಣೆಯಾಗಿದೆ. ಹಣ ಪಡೆಯುವಲ್ಲಿ ಸಫಲರಾಗಲು ಎಲ್ಲಾ ಉಪಾಯಗಳನ್ನು, ತಂತ್ರಗಳನ್ನು ಮೋಸಗಾರರು ಹೂಡಿದ್ದಾರೆ ಎಂದು ಸೂದ್ ವಿವರಿಸಿದ್ದಾರೆ.

ರೋಹಿತ್ ಸೂದ್ ತುಂಬಿರುವ ಈ ಎಲ್ಲಾ ಫೀಸ್​ಗಳಲ್ಲಿ ಅಪಾಯಿಂಟ್​ಮೆಂಟ್ ಫೀಸ್ ಹಾಗೂ PR ಫೀಸ್​ನ್ನು ಕೆನಡಾಕ್ಕೆ ತೆರಳಿದ ಬಳಿಕ ಹಿಂದಿರುಗಿಸುವುದಾಗಿ ಅವರು ತಿಳಿಸಿರುವ ಬಗ್ಗೆಯೂ ಅವರು ಹೇಳಿದ್ದರು. ಕಾನೂನು ವ್ಯವಸ್ಥೆಗಳನ್ನು ವಕೀಲರು ನೋಡಿಕೊಳ್ಳುತ್ತಿದ್ದರೆ, ತ್ರಿಶಾ ಎಂಬವರು ಸೂದ್ ಮಗನಿಗೆ ಸೂಕ್ತ ಕಾಲೇಜು ಹುಡುಕಲು ಸಹಕರಿಸುವುದಾಗಿಯೂ ಹೇಳಿದ್ದರು. ಈ ಎಲ್ಲಾ ಆಟಗಳನ್ನಾಡಿದ ಜಾಲ ಸುಮಾರು 9 ಲಕ್ಷ ಮೋಸ ಹಣ ವಂಚನೆ ಮಾಡಿದೆ.

ಆದರೆ, ಈ ಜಾಲದ ಬಗ್ಗೆ ಕೆನಡಾ ಕಮಿಷನ್ ದೆಹಲಿಯಲ್ಲಿ ದೂರು ದಾಖಲಿಸಿಕೊಂಡ ಬಳಿಕ skanska engineering ಹಾಗೂ theplacementseekers ಎಂಬ ವೆಬ್​ಸೈಟ್ ಸ್ಥಗಿತಗೊಳಿಸಿದೆ. ವೆಬ್​ಸೈಟ್ ಮುಚ್ಚಿರುವ ಕುರಿತು ಅವರನ್ನು ಕೇಳಿದಾಗ, ವೆಬ್​ಸೈಟ್ ಪರಿಷ್ಕರಿಸಲಾಗುತ್ತಿದೆ ಎಂಬ ಮಾಹಿತಿ ನೀಡಿದ್ದಾರೆ.

ಮೋಸದ ಜಾಲದ ಬಗ್ಗೆ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಲು ಸೂದ್ 18 ದಿನ ಪರದಾಡಿದ್ದಾರೆ. ಈ ಕುರಿತು ಸ್ವತಃ ರೋಹಿತ್ ಸೂದ್ ಬೇಸರ ವ್ಯಕ್ತಪಡಿಸಿದ್ದಾರೆ. ಕೊನೆಗೆ, ದೆಹಲಿಯಲ್ಲಿ IT Actನ IPC Section 420 ಹಾಗೂ Section 66 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ, ಯುಎಸ್​ನ ನೇಷನಲ್ ಸೆಕ್ಯುರಿಟಿ ಏಜೆನ್ಸಿ ಹಾಗೂ ಕೆನಡಾದ ಆ್ಯಂಟಿ ಫ್ರಾಡ್ ಸೆಂಟರ್​ನಲ್ಲಿ ಕೂಡ ದೂರು ನೀಡಿದ್ದಾರೆ.

ಇದನ್ನೂ ಓದಿ: QR Code Scam: OLXನಲ್ಲಿ ಸೋಫಾ ಕೊಳ್ಳುವುದಾಗಿ ಹೇಳಿ ಅರವಿಂದ್ ಕೇಜ್ರಿವಾಲ್ ಪುತ್ರಿಗೆ ಮೋಸ ಮಾಡಿದ ಆರೋಪಿಗಳು ಅರೆಸ್ಟ್

QR Code Scam: ಅರವಿಂದ್ ಕೇಜ್ರಿವಾಲ್​ ಮಗಳಿಗೆ ಮೋಸವಾದ್ರೆ ಒಂದೇ ವಾರದಲ್ಲಿ ಕ್ರಮ, ಉಳಿದವರು ಯಾಮಾರಿದ್ರೆ ಯಾರೂ ದಿಕ್ಕಿಲ್ಲ

Published On - 6:04 pm, Sat, 20 February 21