Video Viral: ಪ್ರಕಾಶ್ ಹುಕ್ಕೇರಿ ಮತ್ತು DySP ನಡುವೆ ಮಾತಿನ ಚಕಮಕಿ: ವಿಡಿಯೋ ವೈರಲ್
video Viral: ರಸ್ತೆ ನಡುವಲ್ಲಿ ನಿಂತಿದ್ದ ಪ್ರಕಾಶ್ ಹುಕ್ಕೇರಿಗೆ ಬದಿಗೆ ನಿಲ್ಲಲು ಡಿವೈಎಸ್ಪಿ ಹೇಳಿದರು. ಬದಿಗೆ ಸರಿಯದಿದ್ದರೆ ಕೇಸ್ ಹಾಕುವುದಾಗಿ ಹೇಳಿದರು. ಡಿವೈಎಸ್ಪಿ ನಡೆಗೆ ಗರಂ ಆದ ಪ್ರಕಾಶ್ ಹುಕ್ಕೇರಿ ನನ್ನ ಮೇಲೆ ಕೇಸ್ ಹಾಕು ಎಂದು ಸಚಿವ ಮಾಧುಸ್ವಾಮಿ ಎದುರೇ ಸವಾಲ್ ಹಾಕಿದರು.

ಬೆಳಗಾವಿ: ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಮತ್ತು ಚಿಕ್ಕೋಡಿ ಡಿವೈಎಸ್ಪಿ ಮನೋಜ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿನ್ನೆ (ಫೆಬ್ರವರಿ 15) ಚಿಕ್ಕೋಡಿ ತಾಲೂಕಿನ ಇಂಗಳಗಿ ಗ್ರಾಮದ ಸೇತುವೆ ಕಾಮಗಾರಿ ವೀಕ್ಷಣೆಗೆ ಸಚಿವ ಮಾಧುಸ್ವಾಮಿ ಆಗಮಿಸಿದ್ದರು. ಜೆ.ಸಿ. ಮಾಧುಸ್ವಾಮಿಯನ್ನು ಸ್ವಾಗತಿಸಲು ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಬಂದಿದ್ದರು. ಈ ವೇಳೆ ರಸ್ತೆ ನಡುವಲ್ಲಿ ನಿಂತಿದ್ದ ಪ್ರಕಾಶ್ ಹುಕ್ಕೇರಿಗೆ ಬದಿಗೆ ನಿಲ್ಲಲು ಡಿವೈಎಸ್ಪಿ ಹೇಳಿದರು. ಬದಿಗೆ ಸರಿಯದಿದ್ದರೆ ಕೇಸ್ ಹಾಕುವುದಾಗಿ ಹೇಳಿದರು. ಡಿವೈಎಸ್ಪಿ ನಡೆಗೆ ಗರಂ ಆದ ಪ್ರಕಾಶ್ ಹುಕ್ಕೇರಿ ನನ್ನ ಮೇಲೆ ಕೇಸ್ ಹಾಕು ಎಂದು ಸಚಿವ ಮಾಧುಸ್ವಾಮಿ ಎದುರೇ ಸವಾಲ್ ಹಾಕಿದರು.
ಈ ವೇಳೆ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಮಧ್ಯ ಪ್ರವೇಶಿಸಿದರು. ಆದರೆ ಮಧ್ಯೆ ಮಾತನಾಡದಂತೆ ಪ್ರಕಾಶ್ ಹುಕ್ಕೇರಿ ತಡೆದರು. ಸಿಟ್ಟಿಗೆದ್ದ ಪ್ರಕಾಶ್ ಹುಕ್ಕೇರಿಯನ್ನು ಸಚಿವ ಮಾಧುಸ್ವಾಮಿ ಸಮಾಧಾನ ಪಡಿಸಿದರು. ಬಳಿಕ ಕಾಮಗಾರಿ ಪರಿಶೀಲನೆಗೆ ಮಾಧುಸ್ವಾಮಿಗೆ ಪ್ರಕಾಶ್ ಹುಕ್ಕೇರಿ ಸಾಥ್ ಕೊಟ್ಟರು.

ಕಾಮಗಾರಿ ಪರಿಶೀಲನೆ ನಡೆಸಿದ ಮಾಧುಸ್ವಾಮಿಗೆ ಸಾಥ್ ನೀಡಿದ ಪ್ರಕಾಶ್ ಹುಕ್ಕೇರಿ.
ಇದನ್ನೂ ಓದಿ: ‘ಉಮೇಶ್ ಕತ್ತಿಯವ್ರೇ.. ನಿಮ್ಮದೇ ಒಂದು ರಾಜ್ಯ ಕಟ್ಟಿ; ಅಲ್ಲಿ ನೀವೇ ಸಿಎಂ ಆದಾಗ ಇಂಥ ತುಘಲಕ್ ದರ್ಬಾರ್ ನಡೆಸಿ’