Sign In

By signing in or creating an account, you agree with Associated Broadcasting Company's Terms & Conditions and Privacy Policy.

Justice Rama Jois: ಶಿವಮೊಗ್ಗದಿಂದ ಶುರುವಾದ ರಾಮಾ ಜೋಯಿಸ​​ರ ಜೀವನ ಹೀಗೆಲ್ಲ ಸಾಗಿತ್ತು.. ಬರಹವೂ ಕರಗತವಾಗಿತ್ತು

Justice Rama Jois: ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ರಾಮಾ ಜೋಯಿಸ್ (Rama Jois)​ ಅವರು ದೇಶದ ತುರ್ತು ಪರಿಸ್ಥಿತಿ (1975-77) ಸಂದರ್ಭದಲ್ಲಿ, ಅಟಲ್​ ಬಿಹಾರಿ ವಾಜಪೇಯಿ, ಎಲ್​.ಕೆ.ಆಡ್ವಾಣಿ, ಮಧು ದಂಡಾವಟೆ ಅವರೊಂದಿಗೆ ಬೆಂಗಳೂರು ಜೈಲುವಾಸ ಅನುಭವಿಸಿದವರು.

Justice Rama Jois: ಶಿವಮೊಗ್ಗದಿಂದ ಶುರುವಾದ ರಾಮಾ ಜೋಯಿಸ​​ರ ಜೀವನ ಹೀಗೆಲ್ಲ ಸಾಗಿತ್ತು.. ಬರಹವೂ ಕರಗತವಾಗಿತ್ತು
ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್​
Follow us
Lakshmi Hegde
|

Updated on:Feb 16, 2021 | 12:21 PM

ಬೆಂಗಳೂರು: ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿ, ಮಾಜಿ ರಾಜ್ಯಪಾಲ ಮಂಡಗದ್ದೆ ರಾಮಾ ಜೋಯಿಸ್ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ, ಪಂಜಾಬ್​, ಜಾರ್ಖಂಡ್​ ರಾಜ್ಯಗಳ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದ ರಾಮಾ ಜೋಯಿಸ್ (Rama Jois)​ ಹುಟ್ಟಿದ್ದು ಶಿವಮೊಗ್ಗದ ಆರಗ ಗ್ರಾಮದಲ್ಲಿ. ನರಸಿಂಹ ಜೋಯಿಸ್​ ಮತ್ತು ಲಕ್ಷ್ಮೀದೇವಮ್ಮನವರ ಪುತ್ರನಾದ ರಾಮಾ ಜೋಯಿಸ್​ ತಮ್ಮ ಶಿಕ್ಷಣವನ್ನು ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ ಪೂರ್ತಿಗೊಳಿಸಿದರು. ಇವರಿಗೆ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರ್ ಆಫ್​ ಲಾ ಗೌರವ ಪದವಿ ನೀಡಿ ಪುರಸ್ಕರಿಸಿದೆ. ರಾಮಾ ಜೋಯಿಸ್​ ಪತ್ನಿಯ ಹೆಸರು ವಿಮಲಾ. ಇವರಿಗೆ ಇಬ್ಬರು ಮಕ್ಕಳು, ಮೂವರು ಮೊಮ್ಮಕ್ಕಳು ಇದ್ದಾರೆ.

ಖ್ಯಾತ ಬರಹಗಾರ; ಕಾನೂನು ಪದವಿ ಕೋರ್ಸ್​ನ ಪಠ್ಯಪುಸ್ತಕವಾಗಿದೆ ರಾಮಾ ಜೋಯಿಸ್​ ಅವರು 1992ರ ಮೇ 3ರಿಂದ ಆಗಸ್ಟ್​ 31ರವರೆಗೆ ಪಂಜಾಬ್​ ಮತ್ತು ಹರ್ಯಾಣ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು. 2002ರ ಜುಲೈ 15ರಿಂದ, 2003ರ ಜೂನ್​ 11ರವರೆಗೆ ಜಾರ್ಖಂಡದ 2ನೇ ರಾಜ್ಯಪಾಲರಾಗಿ ಕಾರ್ಯನಿರ್ವಹಿಸಿದರು. ಹಾಗೇ, 2003ರ ಜೂನ್​ 12ರಂದು ಬಿಹಾರದ 19ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದರು. 2004ರ ಅಕ್ಟೋಬರ್​ 31ರವರೆಗೆ ಅಲ್ಲಿ ಗವರ್ನರ್​ ಆಗಿದ್ದರು. ಹಾಗೇ ರಾಜ್ಯಸಭಾ ಸದಸ್ಯರೂ ಆಗಿದ್ದವರು.

ಇಷ್ಟೆಲ್ಲದರ ನಡುವೆ ಒಬ್ಬ ಖ್ಯಾತ ಬರಹಗಾರರಾಗಿಯೂ ಹೆಸರುಗಳಿಸಿದ್ದರು. ಕಾನೂನಿಗೆ ಸಂಬಂಧಪಟ್ಟ ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಸರ್ವೀಸ್ ಲಾ, ಕಾರ್ಪಸ್​ ಲಾ, ಸಾಂವಿಧಾನಿಕ ಕಾನೂನು ಹೀಗೆ ಅನೇಕ ವಿಚಾರಗಳ ಮೇಲೆ ತಮ್ಮ ಬರಹಗಳಿಂದ ಬೆಳಕು ಚೆಲ್ಲಿದ್ದಾರೆ. Legal and Constitutional History of India (ಭಾರತದ ಕಾನೂನು ಮತ್ತು ಸಾಂವಿಧಾನಿಕ ಇತಿಹಾಸ)ದ ವಾಲ್ಯೂಮ್ 3ಯನ್ನು ಕಾನೂನು ಪದವಿ ಕೋರ್ಸ್​ನ ಪಠ್ಯಪುಸ್ತಕವಾಗಿಯೂ ಪರಿಗಣಿಸಲಾಗಿದೆ. ಇನ್ನು ಧರ್ಮ ಮತ್ತು ಮನು ಸ್ಮೃತಿಯ ಬಗೆಗಿನ ಅವರ ದೃಷ್ಟಿಕೋನ ಅತ್ಯಂತ ಸರಳವಾಗಿದ್ದು, ಒಬ್ಬ ಸಾಮಾನ್ಯನೂ ಕೂಡ ಅರ್ಥ ಮಾಡಿಕೊಳ್ಳುವಂತಿದೆ.

ಜೈಲುವಾಸ ಅನುಭವಿಸಿದ್ದರು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ರಾಮಾ ಜೋಯಿಸ್​ ಅವರು ದೇಶದ ತುರ್ತು ಪರಿಸ್ಥಿತಿ (1975-77) ಸಂದರ್ಭದಲ್ಲಿ, ಅಟಲ್​ ಬಿಹಾರಿ ವಾಜಪೇಯಿ, ಎಲ್​.ಕೆ.ಆಡ್ವಾಣಿ, ಮಧು ದಂಡಾವಟೆ ಅವರೊಂದಿಗೆ ಬೆಂಗಳೂರು ಜೈಲುವಾಸ ಅನುಭವಿಸಿದವರು.

ಕಂಬನಿ ಮಿಡಿದ ರಾಜಕೀಯ ಗಣ್ಯರು ರಾಮಾ ಜೋಯಿಸ್​ ನಿಧನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಹಲವು ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಜಲ ಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಪ್ರತಿಕ್ರಿಯಿಸಿ, ರಾಮಾ ಜೋಯಿಸ್​ ಅವರು ಆರ್​ಎಸ್​ಎಸ್​ನ ಹಿರಿಯ ಸ್ವಯಂ ಸೇವಕರಾಗಿದ್ದರು. ಅವರ ದಣಿವರಿಯದ ಕೆಲಸವನ್ನು ಬಿಹಾರ ಮತ್ತು ಜಾರ್ಖಂಡ ರಾಜ್ಯಗಳ ರಾಜ್ಯಪಾಲರ ಹುದ್ದೆಯನ್ನು ಕೇಂದ್ರ ಸರ್ಕಾರ ನೀಡಿತ್ತು. ಇಂಥ ಧೀಮಂತ ವ್ಯಕ್ತಿಯನ್ನು ಕಳೆದುಕೊಂಡಿದ್ದು ನಷ್ಟ ಎಂದು ಹೇಳಿದ್ದಾರೆ.

ಹಾಗೇ, ಡಿಸಿಎಂ ಲಕ್ಷ್ಮಣ್​ ಸವದಿ ಪ್ರತಿಕ್ರಿಯಿಸಿ, ಮಾಜಿ ರಾಜ್ಯಪಾಲರು, ಹಿರಿಯ ನ್ಯಾಯಮೂರ್ತಿಯೂ ಆಗಿದ್ದ ರಾಮಾ ಜೋಯಿಸ್​ ನಿಧನದ ಸುದ್ದಿ ಕೇಳಿ ತುಂಬ ಆಘಾತವಾಯಿತು. ಅವರು ನಮ್ಮ ನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದರು. ಅವರು ಸಮಾಜಕ್ಕೆ ಸಲ್ಲಿಸಿದ ಸೇವೆ ಅನನ್ಯ. ನಮ್ಮ ಬಿಜೆಪಿಗೆ ಹಿರಿಯ ಮಾರ್ಗದರ್ಶಕರೂ ಆಗಿದ್ದರು. ಅಂಥ ಶ್ರೇಷ್ಠ ಮೇಧಾವಿಯನ್ನು ಕಳೆದುಕೊಂಡಿದ್ದು ದುರ್ದೈವ ಎಂದಿದ್ದಾರೆ.

ಇದನ್ನೂ ಓದಿ: Justice Rama Jois: ನಿವೃತ್ತ ನ್ಯಾಯಮೂರ್ತಿ ರಾಮಾ ಜೋಯಿಸ್ ಬೆಂಗಳೂರಿನಲ್ಲಿ ನಿಧನ

Published On - 12:20 pm, Tue, 16 February 21

ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಮಧ್ಯಪ್ರದೇಶದ ಆನಂದಪುರ ಧಾಮದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಉತ್ತರ ಕರ್ನಾಟಕದಲ್ಲಿ ನೀರು ಪೋಲಾಗಲು ಬಿಡೋದು ಕ್ರಿಮಿನಲ್ ಅಪರಾಧ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಅಣ್ಣಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದೇಕೆ ವಿಜಯಲಕ್ಷ್ಮಿ, ಇಲ್ಲಿದೆ ಮಾಹಿತಿ
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ
ಪುಣ್ಯಸ್ನಾನ ಮಾಡಿ ಸಂಗಮ ತೀರದಲ್ಲೇ ಬಟ್ಟೆ ಬಿಸಾಡಿ ಹೋಗುತ್ತಿರುವ ಜನ
ಪುಣ್ಯಸ್ನಾನ ಮಾಡಿ ಸಂಗಮ ತೀರದಲ್ಲೇ ಬಟ್ಟೆ ಬಿಸಾಡಿ ಹೋಗುತ್ತಿರುವ ಜನ
ಎಲೆಕೋಸು ಬೆಲೆ ದಿಢೀರ್​​ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ
ಎಲೆಕೋಸು ಬೆಲೆ ದಿಢೀರ್​​ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ
ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ