Zero Shadow Day: ಒಡಿಶಾದಲ್ಲಿ ಆ ಒಂದು ಘಳಿಗೆ ನೆರಳೇ ಬೀಳುವುದಿಲ್ಲವಂತೆ! ಏನದು ಸೂರ್ಯನ ಲೀಲೆ?

ಪಠಾಣಿ ಸಾಮಂತ ಪ್ಲಾನಿಟೋರಿಯಂ ಉಪ ನಿರ್ದೇಶಕ ಸುಬೇಂದು ಪಟ್ನಾಯಿಕ್ ಅವರು ಎಎನ್​ಐ ಸುದ್ದಿಸಂಸ್ಥೆಯ ಜೊತೆ ಮಾತನಾಡುತ್ತಾ ನಿನ್ನೆ ಶುಕ್ರವಾರ ಭುವನೇಶ್ವರದಲ್ಲಿ ಅನೇಕ ಮಂದಿ ಇಂತಹ ವಿರಳ ಘಟನೆಯನ್ನು ಕಂಡಿದ್ದಾರೆ. ಸೂರ್ಯ ಕರಾರುವಕ್ಕಾಗಿ ನೇರವಾಗಿ ನಮ್ಮ ತಲೆಯ ಮೇಲೆ ಬಂದಾಗ ಈ ಪರಿಸ್ಥಿತಿ ಉದ್ಭವವಾಗುತ್ತದೆ. ಇಂದು ನಾವು ನೋಡಿದ್ದೇವೆ; ನಾಳೆ ಕಟಕ್​ನಲ್ಲಿ ಜನ ನೋಡಬಹುದು ಎಂದಿದ್ದಾರೆ

Zero Shadow Day: ಒಡಿಶಾದಲ್ಲಿ ಆ ಒಂದು ಘಳಿಗೆ ನೆರಳೇ ಬೀಳುವುದಿಲ್ಲವಂತೆ! ಏನದು ಸೂರ್ಯನ ಲೀಲೆ?
Zero Shadow Day: ಒಡಿಶಾದಲ್ಲಿ ಆ ಒಂದು ಘಳಿಗೆ ನೆರಳೇ ಬೀಳುವುದಿಲ್ಲವಂತೆ ಏನದು ಸೂರ್ಯನ ಲೀಲೆ?
Follow us
ಸಾಧು ಶ್ರೀನಾಥ್​
|

Updated on: May 22, 2021 | 2:38 PM

ನಮ್ಮ ತಲೆಯ ಮೇಲೆ ಸೂರ್ಯ-ಚಂದ್ರರು ಇರುವವರೆಗೂ ನೆರಳು ಬೀಳಲೇ ಬೇಕು. ಯಾವುದೇ ಘಳಿಗೆಯೂ ಮಿಸ್ ಆಗೋಕ್ಕೆ ಛಾನ್ಸೇ ಇಲ್ಲ ಅಂತಾ ತಿಳಿದಿದ್ರೆ ಒಡಿಶಾಲ್ಲೊಂದು ನೆರಳು-ಬೆಳಕಿನ ಆಟ ನಡೆದಿದೆ,​ ಗಮನಿಸಿ. ಅಂದಹಾಗೆ ಬೆಂಗಳೂರು- ಮಂಗಳೂರಿನಲ್ಲಿಯೂ ಇಂತಹ ವಿಸ್ಮಯ ನಡೆದಿದೆ.

ಹೌದು ವರ್ಷಕ್ಕೆ ಎರಡು ಬಾರಿ ಭೂಮಿಯ ಮೇಲೆ ನೆರಳು ಬೀಳುವುದೇ ಇಲ್ಲ. ಆಕಾಶದಲ್ಲಿ ನಡೆಯುವ ಚಮತ್ಕಾರ ಅದು ಅಂತಿದ್ದಾರೆ ವಿಜ್ಞಾನಿಗಳು. ಭುವನೇಶ್ವರದಲ್ಲಿ ಇಂತಹ ನೆರಳಿಲ್ಲದ ಚಮತ್ಕಾರ (Zero shadow day) ನಿನ್ನೆ ನಡೆದಿದ್ದರೆ ನಾಳೆ ಕಟಕ್​ನಲ್ಲಿ ನಡೆಯಲಿದೆ ನೋಡಲು ಮರೆಯದಿರಿ ಅಂತಿದ್ದಾರೆ ಇದೇ ವಿಜ್ಞಾನಿಗಳು. ಹೌದು ನಿನ್ನೆ ಭುವನೇಶ್ವರದಲ್ಲಿ ಇಂತಹ ಅಪರೂಪದ ಚಮತ್ಕಾರ ನಡೆದಾಗ ಫೋಟೋಗಳನ್ನು ತೆಗೆಯಲಾಗಿದ್ದು, ದೃಶ್ಯ ಸಾಕ್ಷ್ಯವನ್ನು ಒದಗಿಸಿದ್ದಾರೆ.

ಈ ಬಗ್ಗೆ ಪಠಾಣಿ ಸಾಮಂತ ಪ್ಲಾನಿಟೋರಿಯಂ ಉಪ ನಿರ್ದೇಶಕ ಸುಬೇಂದು ಪಟ್ನಾಯಿಕ್ ಅವರು ಎಎನ್​ಐ ಸುದ್ದಿಸಂಸ್ಥೆಯ ಜೊತೆ ಮಾತನಾಡುತ್ತಾ ನಿನ್ನೆ ಶುಕ್ರವಾರ ಭುವನೇಶ್ವರದಲ್ಲಿ ಅನೇಕ ಮಂದಿ ಇಂತಹ ವಿರಳ ಘಟನೆಯನ್ನು ಕಂಡಿದ್ದಾರೆ. ಸೂರ್ಯ ಕರಾರುವಕ್ಕಾಗಿ ನೇರವಾಗಿ ನಮ್ಮ ತಲೆಯ ಮೇಲೆ ಬಂದಾಗ ಈ ಪರಿಸ್ಥಿತಿ ಉದ್ಭವವಾಗುತ್ತದೆ. ಇಂದು ನಾವು ನೋಡಿದ್ದೇವೆ; ನಾಳೆ ಕಟಕ್​ನಲ್ಲಿ ಜನ ನೋಡಬಹುದು ಎಂದಿದ್ದಾರೆ.

Bhubaneswar Cuttack witness a rare celestial event zero shadow day whats it 3

ಬೆಂಗಳೂರು- ಮಂಗಳೂರಿನಲ್ಲಿಯೂ ಇಂತಹ ವಿಸ್ಮಯ ನಡೆದಿದೆ

ಆಕಾಶದಲ್ಲಿ ಸೂರ್ಯ ಅತ್ಯಂತ ಮೇಲ್ತುದಿಯಲ್ಲಿದ್ದಾಗ (Zenith) ಇಂತಹ ಸೊಬಗು ನೋಡಬಹುದು. ಇಂತಹ ಸಮಯದಲ್ಲಿ ಯಾವುದೇ ವಸ್ತು ಅಥವಾ ಜೀವಿಗಳ ಮೇಲೆ ಸೂರ್ಯನ ಬೆಳಕು ಬಿದ್ದಿದ್ದರೂ ಅದರ ಕೆಳಗೆ ನೆರಳು ಬಿದ್ದಿರುವುದಿಲ್ಲ. ಸಾಮಾನ್ಯವಾಗಿ ಇದು ಮಧ್ಯಾಹ್ನದ ನಂತರ ಘಟಿಸುತ್ತದೆ. ಆದರೆ ಮಧ್ಯಾಹ್ನದ ನಂತರ ಸೂರ್ಯನ ಬೆಳಕು ಬಿದ್ದಾಗ ಅದರ ಪ್ರತಿಫಲವಾಗಿ ನೆರಳು ಉತ್ತರ ದಿಕ್ಕಿನಲ್ಲಿ ಬಿದ್ದಿರುತ್ತದೆ. ಆದರೆ ಈ ಎರಡೂ ದಿನಗಳಂದು ಸೂರ್ಯ ನೇರವಾಗಿ ನಮ್ಮ ಮೇಲೆ ಅಥವಾ ಯಾವುದೇ ವಸ್ತುವಿನ ಮೇಲೆ ಬಿದ್ದಾಗ ಆ ಬೆಳಕಷ್ಟೂ ನಮ್ಮ ದೇಹದ ಮೇಲೆಯೇ ಇರುತ್ತದೆ. ಆದರೆ ಉತ್ತರದ ದಿಕ್ಕಿನತ್ತ ವಾಲಿರುವುದಿಲ್ಲ ಎಂದು ವಿವರಿಸುತ್ತಾರೆ ಪ್ಲಾನಿಟೋರಿಯಂ ನಿರ್ದೇಶಕ ಸುಬೇಂದು ಪಟ್ನಾಯಿಕ್ ಅವರು.

(Bhubaneswar Cuttack witness a rare celestial event zero shadow day whats it)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್