ಕಳೆದೊಂದು ವರ್ಷದಿಂದ ದೇಶದಲ್ಲಿ ಕಂಡುಬಂದ ಒಟ್ಟು ಕೊರೊನಾ ಸೋಂಕಿತರ ಶೇ.27ರಷ್ಟು ಪಾಲು ಮೇ ತಿಂಗಳ 21 ದಿನದಲ್ಲಿ ಪತ್ತೆ

ನಿನ್ನೆ (ಮೇ 21) ಅಂತ್ಯದ ವೇಳೆಗೆ ದೇಶದಲ್ಲಿ ಮೇ ತಿಂಗಳೊಂದರಲ್ಲೇ ದಾಖಲಾದ ಸೋಂಕಿತರ ಸಂಖ್ಯೆ 70 ಲಕ್ಷದ ಗಡಿ ದಾಟಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಒಟ್ಟು 69.4ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಮೇ ತಿಂಗಳ 21 ದಿದೊಳಗೆ 71.3ಲಕ್ಷ ಕೇಸ್ ಪತ್ತೆಯಾಗಿರುವುದು ತಜ್ಞರನ್ನು ಚಿಂತೆಗೀಡುಮಾಡಿದೆ.

ಕಳೆದೊಂದು ವರ್ಷದಿಂದ ದೇಶದಲ್ಲಿ ಕಂಡುಬಂದ ಒಟ್ಟು ಕೊರೊನಾ ಸೋಂಕಿತರ ಶೇ.27ರಷ್ಟು ಪಾಲು ಮೇ ತಿಂಗಳ 21 ದಿನದಲ್ಲಿ ಪತ್ತೆ
ಸಾಂದರ್ಭಿಕ ಚಿತ್ರ
Follow us
Skanda
|

Updated on: May 22, 2021 | 10:39 AM

ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ಸೃಷ್ಟಿಸಿರುವ ಅವಾಂತರದಿಂದ ಜನ ಸಾಮಾನ್ಯರ ಜೀವನ ದುರ್ಭರವಾಗಿದೆ. ಕಳೆದ 24 ಗಂಟೆಯಲ್ಲಿ ಮತ್ತೆ ಹೊಸದಾಗಿ 2,57,299 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 4,194 ಜನ ಸೋಂಕಿನಿಂದ ಕೊನೆಯುಸಿರೆಳೆದಿದ್ದಾರೆ. ಸದ್ಯ ದೇಶದಲ್ಲಿ 29,23,400 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 2,62,89,290ಕ್ಕೆ ತಲುಪಿದೆ. ಕೊರೊನಾದಿಂದಾಗಿ ದೇಶದಲ್ಲಿ ಇಲ್ಲಿಯ ತನಕ 2,95,525ಜನ ಮೃತಪಟ್ಟಿದ್ದರೆ, 2,30,70,365ಜನ ಚೇತರಿಸಿಕೊಂಡಿದ್ದಾರೆ.

ಮೂರು ವಾರಗಳ ನಂತರ ದಿನವೊಂದರಲ್ಲಿ 30ಲಕ್ಷಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿರುವುದು ಕೊಂಚ ಆಶಾದಾಯಕ ಬೆಳವಣಿಗೆ ಆಗಿದ್ದರೂ, ಹೊಸ ಪ್ರಕರಣಗಳ ಬಹುಪಾಲು ಪ್ರಮಾಣ ತಮಿಳುನಾಡು, ಕರ್ನಾಟಕ, ಕೇರಳದಲ್ಲಿ ಕಂಡುಬರುತ್ತಿರುವುದು ಚಿಂತೆಗೀಡುಮಾಡುತ್ತಿದೆ. ಅತ್ತ ನೆರೆಯ ಮಹಾರಾಷ್ಟ್ರದಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದ್ದು ದೈನಂದಿನ ಪ್ರಕರಣಗಳ ಸಂಖ್ಯೆ 30 ಸಾವಿರಕ್ಕಿಂತಲೂ ಕಡಿಮೆ ಆಗಿದೆ.

ಸಾವಿನ ಪ್ರಮಾಣ ಹಾಗೂ ಸೋಂಕಿತರ ಸಂಖ್ಯೆ ಆಘಾತಕಾರಿ ರೀತಿಯಲ್ಲಿ ಹೆಚ್ಚುತ್ತಿರುವ ಕಾರಣ ಕರ್ನಾಟಕ, ಕೇರಳ, ಗೋವಾ ರಾಜ್ಯಗಳು ಈಗಾಗಲೇ ಜಾರಿಯಲ್ಲಿದ್ದ ಕಠಿಣ ನಿಯಮಾವಳಿಗಳನ್ನು ಮತ್ತೆ ವಿಸ್ತರಣೆ ಮಾಡಿವೆ. ಕರ್ನಾಟಕದಲ್ಲಿ ಜೂನ್​ 7ರ ತನಕ, ಗೋವಾದಲ್ಲಿ ಮೇ 31ರ ತನಕ ಹಾಗೂ ಕೇರಳದಲ್ಲಿ ಮೇ 30ರ ತನಕ ನಿಯಮಾವಳಿಗಳು ಜಾರಿಯಲ್ಲಿರಲಿವೆ.

ಇದೆಲ್ಲದರ ನಡುವೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮೇ 24ರಿಂದ ಮೇ 28ರ ತನಕ ಅಮೆರಿಕಾಕ್ಕೆ ಭೇಟಿ ನೀಡುತ್ತಿದ್ದು, ಲಸಿಕೆ ಉತ್ಪಾದಕರು ಹಾಗೂ ಉನ್ನತ ಮಟ್ಟದ ತಜ್ಞರ ಜತೆ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ದೇಶದಲ್ಲಿ ತೀವ್ರವಾಗಿ ಲಸಿಕೆ ಕೊರತೆ ಎದುರಾಗಿರುವುದು ದೊಡ್ಡ ಸಮಸ್ಯೆಯಾಗಿರುವುದರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಮಾತುಕತೆ ನಡೆಸಲಿದ್ದಾರೆ.

ಮೇ ತಿಂಗಳು ಅತ್ಯಂತ ಅಪಾಯಕಾರಿ ದೇಶದಲ್ಲಿ ಕೊರೊನಾ ಪ್ರಕರಣಗಳ ಕೊಂಚ ಇಳಿಮುಖವಾಗುತ್ತಿರುವಂತೆ ಕಾಣುತ್ತಿದ್ದರೂ ಮೇ ತಿಂಗಳ ಮೊದಲ ದಿನದಿಂದ 21ನೇ ತಾರೀಖಿನ ತನಕದ ಅಂಕಿ ಅಂಶಗಳನ್ನು ಗಮನಿಸಿದರೆ ಸೋಂಕು ಅತ್ಯಂತ ವ್ಯಾಪಕವಾಗಿ ಹರಡಿರುವುದು ಕಂಡುಬರುತ್ತದೆ. ನಿನ್ನೆ (ಮೇ 21) ಅಂತ್ಯದ ವೇಳೆಗೆ ದೇಶದಲ್ಲಿ ಮೇ ತಿಂಗಳೊಂದರಲ್ಲೇ ದಾಖಲಾದ ಸೋಂಕಿತರ ಸಂಖ್ಯೆ 70 ಲಕ್ಷದ ಗಡಿ ದಾಟಿದೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಒಟ್ಟು 69.4ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಮೇ ತಿಂಗಳ 21 ದಿದೊಳಗೆ 71.3ಲಕ್ಷ ಕೇಸ್ ಪತ್ತೆಯಾಗಿರುವುದು ತಜ್ಞರನ್ನು ಚಿಂತೆಗೀಡುಮಾಡಿದೆ. ಕಳೆದ ವರ್ಷದಿಂದ ಇಲ್ಲಿಯ ತನಕ ದೇಶದಲ್ಲಿ ದಾಖಲಾದ ಒಟ್ಟು ಸೋಂಕಿತರ ಶೇ.27ರಷ್ಟು ಭಾಗ ಮೇ ತಿಂಗಳ 21 ದಿನದಲ್ಲಿ ಕಂಡುಬಂದಿರುವುದು ಚಿಂತನಾರ್ಹ ಸಂಗತಿಯಾಗಿದೆ.

ಇದನ್ನೂ ಓದಿ: ಕೊರೊನಾದಿಂದ ನಿಜವಾಗಿಯೂ ಸಂಭವಿಸಿದ ಸಾವುಗಳೆಷ್ಟು? ಅಧಿಕೃತ ಅಂಕಿಗೂ ಆರೋಗ್ಯ ಸಂಸ್ಥೆ ನೀಡಿದ ಲೆಕ್ಕಾಚಾರಕ್ಕೂ ವ್ಯತ್ಯಾಸ ನೋಡಿ! 

ಕೊರೊನಾ ಸೋಂಕಿತರಿಗೆ ನೀಡುವ ಸ್ಟಿರಾಯ್ಡ್​ನಿಂದ ಸಕ್ಕರೆ ಖಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು; ಇಲ್ಲಿದೆ ವಿವರ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್