AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುರುಷರಲ್ಲಿ ಹಾಗೂ ಮಧುಮೇಹಿಗಳಲ್ಲಿ ಮ್ಯೂಕೋರ್ಮೈಕೋಸಿಸ್ ಸಾಧ್ಯತೆ ಹೆಚ್ಚು: ಅಧ್ಯಯನ

ಡಾ.ಅವಧೇಶ್ ಕುಮಾರ್ ಸಿಂಗ್, ಡಾ.ರೀತು ಸಿಂಗ್, ಡಾ.ಶಶಾಂಕ್ ಜೋಶಿ ಹಾಗೂ ಡಾ.ಅನೂಪ್ ಮಿಶ್ರಾ ಎಂಬ ನಾಲ್ವರು ವೈದ್ಯರು ಈ ಅಧ್ಯಯನ ನಡೆಸಿದ್ದು, 101ಜನರಲ್ಲಿ 82ಮಂದಿ ಭಾರತೀಯರು, 9 ಮಂದಿ ಅಮೇರಿಕನ್ನರು ಹಾಗೂ 3 ಮಂದಿ ಇರಾನ್ ದೇಶದವರು ಪಾಲ್ಗೊಂಡಿದ್ದರು.

ಪುರುಷರಲ್ಲಿ ಹಾಗೂ ಮಧುಮೇಹಿಗಳಲ್ಲಿ ಮ್ಯೂಕೋರ್ಮೈಕೋಸಿಸ್ ಸಾಧ್ಯತೆ ಹೆಚ್ಚು: ಅಧ್ಯಯನ
ಸಾಂಕೇತಿಕ ಚಿತ್ರ
Skanda
|

Updated on: May 22, 2021 | 11:25 AM

Share

ಕೊರೊನಾ ಎರಡನೇ ಅಲೆಯ ಜತೆಜತೆಗೆ ದೇಶದ ಜನರ ನಿದ್ದೆಗೆಡಿಸಿರುವ ಬ್ಲ್ಯಾಕ್ ಫಂಗಸ್ ಅಥವಾ ಮ್ಯುಕೋರ್ಮೈಕೋಸಿಸ್ ಸಮಸ್ಯೆ ಮಹಿಳೆಯರಿಗಿಂತಲೂ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಹಾಗೂ ಇತರೆ ಆರೋಗ್ಯ ಸಮಸ್ಯೆ ಉಳ್ಳವರಿಗಿಂತ ಮಧುಮೇಹಿಗಳು ಈ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂಬುದನ್ನು ಅಧ್ಯಯಯನವೊಂದು ಬಹಿರಂಗಪಡಿಸಿದೆ. ನಾಲ್ವರು ಭಾರತೀಯ ವೈದ್ಯರು ನಡೆಸಿದ ಈ ಅಧ್ಯಯನ ಶೀಘ್ರದಲ್ಲೇ ಪ್ರಕಟಗೊಳ್ಳಲಿದ್ದು, ಸದ್ಯ ಹೊರಬಿದ್ದಿರುವ ಮಾಹಿತಿ ವೈದ್ಯಕೀಯ ವಲಯದಲ್ಲಿ ಮತ್ತಷ್ಟು ಕುತೂಹಲ ಹಾಗೂ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕೊವಿಡ್ 19ರಲ್ಲಿ ಮ್ಯೂಕೋರ್ಮೆಕೋಸಿಸ್ ಎಂದು ಈ ಅಧ್ಯಯನವನ್ನು ಹೆಸರಿಸಲಾಗಿದ್ದು, ಕೊರೊನಾಕ್ಕೆ ತುತ್ತಾಗಿ ನಂತರ ಬ್ಲ್ಯಾಕ್ ಫಂಗಸ್ ಸಮಸ್ಯೆ ಅನುಭವಿಸಿದ 101 ಜನ ಅಧ್ಯಯನಕ್ಕೊಳಪಟ್ಟಿದ್ದರು. 101 ಜನರ ಪೈಕಿ ಮ್ಯೂಕೋರ್ಮೈಕೋಸಿಸ್​ಗೆ ತುತ್ತಾದವರಲ್ಲಿ ಪುರುಷರ ಸಂಖ್ಯೆ 79 ಇದ್ದು, ಒಟ್ಟು 83 ಜನ ಮಧುಮೇಹಿಗಳಾಗಿದ್ದರು ಎನ್ನುವುದು ಬಹಿರಂಗವಾಗಿದೆ.

ಡಾ.ಅವಧೇಶ್ ಕುಮಾರ್ ಸಿಂಗ್, ಡಾ.ರೀತು ಸಿಂಗ್, ಡಾ.ಶಶಾಂಕ್ ಜೋಶಿ ಹಾಗೂ ಡಾ.ಅನೂಪ್ ಮಿಶ್ರಾ ಎಂಬ ನಾಲ್ವರು ವೈದ್ಯರು ಈ ಅಧ್ಯಯನ ನಡೆಸಿದ್ದು, 101ಜನರಲ್ಲಿ 82ಮಂದಿ ಭಾರತೀಯರು, 9 ಮಂದಿ ಅಮೇರಿಕನ್ನರು ಹಾಗೂ 3 ಮಂದಿ ಇರಾನ್ ದೇಶದವರು ಪಾಲ್ಗೊಂಡಿದ್ದರು. ಈ ಅಧ್ಯಯನದ ವಿಸ್ತೃತ ವರದಿ ಎಲ್ಸೆವಿರ್ ಜರ್ನಲ್​ನಲ್ಲಿ ಪ್ರಕಟವಾಗಲಿದೆ ಎನ್ನಲಾಗಿದೆ.

ಯಾರಿಗೆ ಬ್ಲ್ಯಾಕ್ ಫಂಗಸ್ ಹೆಚ್ಚು ಅಪಾಯಕಾರಿ 1. ಅನಿಯಂತ್ರಿತ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು 2. ಅತಿ ಹೆಚ್ಚು ಸ್ಟೀರಾಯ್ಟ್​ ಬಳಕೆಯಲ್ಲಿರುವವರು 3. ರೋಗನಿರೋಧಕ ಶಕ್ತಿ ಶಮನ ಮಾಡುವ ಔಷಧ ಸೇವಿಸುತ್ತಿರುವವರು 4. ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುತ್ತಿರುವವರು 5. ದೀರ್ಘಕಾಲದ ಅನಾರೋಗ್ಯ ಸಮಸ್ಯೆಯುಳ್ಳವರು 6. ಅತಿಯಾದ ಶೀತ, ಥಂಡಿ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಉಸಿರಾಟದ ಸಮಸ್ಯೆಯಿದ್ದು ಮಡಿಕಲ್ ಆಕ್ಸಿಜನ್​ ಸಹಾಯ ಪಡೆಯುವವರು ಇವರೆಲ್ಲರೂ ಬ್ಲ್ಯಾಕ್ ಫಂಗಸ್ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಹೆಚ್ಚಿದ್ದು, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

ಬ್ಲ್ಯಾಕ್​ ಫಂಗಸ್​ ಸೋಂಕು ತಗುಲಿದೆ ಎಂದು ಗುರುತಿಸುವುದು ಹೇಗೆ? 1. ಮೂಗಿನಿಂದ ಅಸಹಜ ಕಪ್ಪು ವಿಸರ್ಜನೆ, ರಕ್ತ ಬರುವುದು 2. ಮೂಗಿನಲ್ಲಿ ಕಿರಿಕಿರಿ, ತಲೆನೋವು, ಕಣ್ಣಿನ ನೋವು, ಕಣ್ಣಿನ ಸುತ್ತ ಊತ, ಎರಡೆರಡು ದೃಷ್ಟಿ, ಕಣ್ಣು ಕೆಂಪಾಗುವುದು, ಕಾಣದಿರುವುದು, ಅಸ್ಪಷ್ಟತೆ, ಕಣ್ಣು ತೆರೆಯುವುದಕ್ಕೆ ಹಾಗೂ ಮುಚ್ಚುದಕ್ಕೆ ಕಷ್ಟವಾಗುವುದು 3. ಮುಖ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವ ಅನುಭವ 4. ಆಹಾರ ಸೇವಿಸುವ ವೇಳೆ ನೋವು, ಬಾಯಿ ತೆರೆಯಲು ಕಷ್ಟವಾಗುವುದು 5. ಮುಖದಲ್ಲಿ ಊತ, ಕಪ್ಪುಗಟ್ಟುವಿಕೆ, ಗಟ್ಟಿಯಾಗುವಿಕೆ, ನೋವು ಕಾಣಿಸಿಕೊಳ್ಳುವುದು 6. ಹಲ್ಲು ಉದರುವುದು, ಬಾಯಿ ಒಳಗೂ ಕಪ್ಪು ಬಣ್ಣ ಹಾಗೂ ಊತ ಕಾಣಿಸಿಕೊಳ್ಳುವುದು ಇವು ಬ್ಲ್ಯಾಕ್ ಫಂಗಸ್​ ಸೋಂಕಿನ ಕೆಲ ಪ್ರಮುಖ ಲಕ್ಷಣಗಳು

ಸೋಂಕು ಕಾಣಿಸಿಕೊಂಡಾಗ ಏನು ಮಾಡಬೇಕು? 1. ಬ್ಲ್ಯಾಕ್ ಫಂಗಸ್ ಪತ್ತೆಯಾದಾಗ ENT ವೈದ್ಯರು, ಕಣ್ಣಿನ ವೈದ್ಯರು ಅಥವಾ ಸೂಕ್ತ ತಜ್ಞರ ಬಳಿ ತೆರಳಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು 2. ರಕ್ತದಲ್ಲಿನ ಮಧುಮೇಹ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಸೂಕ್ತ ಕ್ರಮ ಅನುಸರಿಸಬೇಕು 3. ಇತರ ಆರೋಗ್ಯ ಸಮಸ್ಯೆಗಳಿದ್ದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದನ್ನು ತಪ್ಪಿಸಬಾರದು 4. ವೈದ್ಯರನ್ನು ಕೇಳದೆ ಯಾವ ಕಾರಣಕ್ಕೂ ಸ್ಟಿರಾಯ್ಡ್ ಹಾಗೂ ಆ್ಯಂಟಿ ವೈರಲ್ ಡ್ರಗ್ ಪಡೆಯಬಾರದು 5. ವೈದ್ಯರ ಸಲಹೆ ಮೇರೆಗೆ MRI, ಸಿಟಿ ಸ್ಕ್ಯಾನ್ ಮಾಡಿಸಬೇಕು

ಇದನ್ನೂ ಓದಿ: ಈ 3 ವಿಧಾನಗಳನ್ನು ಅನುಸರಿಸಿದರೆ ಬ್ಲ್ಯಾಕ್​ ಫಂಗಸ್ ಕಾಯಿಲೆಯನ್ನು ತಡೆಗಟ್ಟಬಹುದು: ಡಾ.ರಣ್​ದೀಪ್ ಗುಲೇರಿಯಾ

ನಿಮಗೆ ಬ್ಲ್ಯಾಕ್ ಫಂಗಸ್ ಇದೆಯೋ, ಇಲ್ಲವೋ ಗುರುತಿಸುವುದು ಹೇಗೆ? ಏನು ಕ್ರಮ ತೆಗೆದುಕೊಳ್ಳಬೇಕು? ಚಿಕಿತ್ಸಾ ವಿಧಾನವೇನು?

ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಪುಟಿನ್ ರಹಸ್ಯ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ಕಾರ್ಮಿಕರ ಮೇಲೆ ಹಲ್ಲೆ ಮಾಡಿ ಚಹಾ ಅಂಗಡಿ ಧ್ವಂಸಗೊಳಿಸಿದ ಪೊಲೀಸಪ್ಪ!
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ದೊಡ್ಡ ಗಣಪತಿ ದೇವಸ್ಥಾನದಲ್ಲಿ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ, ಅಭಿಷೇಕ
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಅಯ್ಯಪ್ಪ ಸ್ವಾಮಿಯ ಫೋಟೋವನ್ನು ಮನೆಯಲ್ಲಿ ಇಡುವುದರಿಂದ ಆಗುವ ಲಾಭಗಳೇನು?
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ಹೊಸ ವರ್ಷದ ಮೊದಲ ದಿನದಂದು ಈ ರಾಶಿಯವರಿಗೆ ಶುಭ ಫಲ
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ನ್ಯೂ ಇಯರ್​​​: ಕುಡಿದು ಟೈಟಾದ ಯುವತಿ, ಆಟೋದಲ್ಲಿ ಕೂರಿಸಿ ಕಳಿಸಿದ ಪೊಲೀಸ್​​
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
ಬೆಳಗಾವಿಯಲ್ಲಿ ನ್ಯೂಇಯರ್​​ ಕಿಕ್​​; ಭರ್ಜರಿ ಸ್ಟೆಪ್​ ಹಾಕಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು
New Year 2026: ಹೊಸವರ್ಷಕ್ಕೆ ಅದ್ಧೂರಿ ಸ್ವಾಗತ; ಕುಣಿದು ಕುಪ್ಪಳಿಸಿದ ಜನರು