ಯತ್ನಾಳ್ ವಿಷಯದಲ್ಲಿ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಣಯ ನಾವ್ಯಾರೂ ಪ್ರಶ್ನಿಸುವಂತಿಲ್ಲ: ಡಾ ಕೆ ಸುಧಾಕರ್
ಬಸನಗೌಡ ಯತ್ನಾಳ್ ಯಾವತ್ತೂ ಪಕ್ಷದ ವಿರುದ್ಧ ಮಾತಾಡಿದವರಲ್ಲ, ಪಕ್ಷಕ್ಕೆ ಮಾರಕವೆನಿಸುವ ರೀತಿಯಲ್ಲಿ ಮಾತಾಡಿಲ್ಲ, ಅವರಿಗೆ ಕೆಲ ನಾಯಕರ ಬಗ್ಗೆ ಅಸಮಾಧಾನವಿತ್ತು ಮತ್ತು ಅವರ ವಿರುದ್ಧ ಸಾರ್ವಜನಿಕವಾಗಿ ನಾಲಗೆ ಹರಿಬಿಡುತ್ತಿದ್ದರು, ತಮ್ಮ ಅಸಮಧಾನವನ್ನು ಪಕ್ಷದ ವೇದಿಕೆಯೊಳಗೆ ತೋಡಿಕೊಂಡಿದ್ದರೆ ಆಗುತಿತ್ತು, ಅವರು ಹಾಗೆ ಮಾಡಲಿಲ್ಲ ಎಂದು ಸುಧಾಕರ್ ಹೇಳಿದರು
ಚಿಕ್ಕಬಳ್ಳಾಪುರ, ಏಪ್ರಿಲ್ 5: ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಪಕ್ಷದಿಂದ ಉಚ್ಚಾಟನೆಯಾಗಿದ್ದು ದುರದೃಷ್ಟಕರ, ನ್ಯಾವ್ಯಾರೂ ಹೈಕಮಾಂಡ್ ನಿರ್ಣಯವನ್ನು ಪ್ರಶ್ನಿಸಬಾರದು ಎಂದು ಚಿಕ್ಕಬಳ್ಳಾಪುರದ ಸಂಸದ ಡಾ ಕೆ ಸುಧಾಕರ್ ಹೇಳಿದರು. ಯತ್ನಾಳ್ ಒಬ್ಬ ಜನಾನುರಾಗಿ ನಾಯಕ ಮತ್ತು ಜನಪ್ರಿಯರೂ ಹೌದು, ಅವರ ಬಗ್ಗೆ ಖಂಡಿತ ಸಹಾನುಭೂತಿ ಇದೆ, ಅವರು ತನಗೆ ಹಿರಿಯ ಸ್ನೇಹಿತ; ಜಾಸ್ತಿ ಟೀಕೆ ಮಾಡೋದು ಬೇಡ, ಭಾಷೆ ಇತಿಮಿತಿಯಲ್ಲಿ ಇರಬೇಕು ಅಂತ ಕಿವಿಮಾತು ಹೇಳಿದ್ದೆ, ಆದಷ್ಟು ಬೇಗ ಪಕ್ಷಕ್ಕೆ ವಾಪಸ್ಸು ಬರುತ್ತಾರೆಂಬ ವಿಶ್ವಾಸ ತನಗಿದೆ ಎಂದು ಸಂಸದ ಹೇಳಿದರು.
ಇದನ್ನೂ ಓದಿ: ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮುಖ ನೋಡದ ಡಾ ಕೆ ಸುಧಾಕರ್ ಮತ್ತು ಪ್ರದೀಪ್ ಈಶ್ವರ್!
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು

‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ

‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
