Sign In

By signing in or creating an account, you agree with Associated Broadcasting Company's Terms & Conditions and Privacy Policy.

ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ

ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಅಮಿತ್ ಶಾ

ಸುಷ್ಮಾ ಚಕ್ರೆ
|

Updated on:Apr 05, 2025 | 4:55 PM

ಛತ್ತೀಸ್‌ಗಢದ ದಾಂತೇಶ್ವರಿ ದೇವಸ್ಥಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮಾ ದಂತೇಶ್ವರಿಗೆ ಪೂಜೆ ನೆರವೇರಿಸಿದ್ದಾರೆ. ಛತ್ತೀಸ್‌ಗಢದ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಮತ್ತು ಅವರ ಸಂಪುಟ ಸಹೋದ್ಯೋಗಿಯೊಂದಿಗೆ ಶಾ ಶನಿವಾರ ಮಾರಕ ಮಾವೋವಾದಿ ಹಿಂಸಾಚಾರಕ್ಕೆ ಕುಖ್ಯಾತಿ ಪಡೆದಿದ್ದ ಜಿಲ್ಲೆಗೆ ಒಂದು ದಿನದ ಭೇಟಿಗಾಗಿ ದಾಂತೇಶ್ವರಿಗೆ ತಲುಪಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಚೈತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ ಪೂಜೆ ಸಲ್ಲಿಸಿದರು. 14ನೇ ಶತಮಾನದಲ್ಲಿ ನಿರ್ಮಿಸಲಾದ ಈ ದಾಂತೇಶ್ವರಿ ದೇವಸ್ಥಾನವು ದಾಂತೇಶ್ವರಿ ದೇವಿಗೆ ಸಮರ್ಪಿತವಾಗಿದೆ ಮತ್ತು ಇದು ಭಾರತದಾದ್ಯಂತ ಹರಡಿರುವ ದೈವಿಕ ಸ್ತ್ರೀ ಶಕ್ತಿಯಾದ 52 ಶಕ್ತಿ ಪೀಠಗಳಲ್ಲಿ ಒಂದಾಗಿದೆ.

ಬಸ್ತಾರ್, ಏಪ್ರಿಲ್ 5: ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಇಂದು ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯ ಮಾ ದಾಂತೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. 14ನೇ ಶತಮಾನದಲ್ಲಿ ನಿರ್ಮಿಸಲಾದ ಧಾರ್ಮಿಕ ಸ್ಥಳವಾದ ದಾಂತೇಶ್ವರಿ ದೇವಸ್ಥಾನವು ದಾಂತೇಶ್ವರಿಗೆ ಸಮರ್ಪಿತವಾಗಿದೆ. ಭಾರತದಾದ್ಯಂತ ಹರಡಿರುವ ದೈವಿಕ ಸ್ತ್ರೀ ಶಕ್ತಿಯಾದ 52 ಶಕ್ತಿ ಪೀಠಗಳಲ್ಲಿ ಒಂದಾಗಿದೆ. ಈ ದೇವಾಲಯವು ರಾಯ್‌ಪುರದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ದಂತೇವಾಡ ನಗರದಲ್ಲಿದೆ. ನವರಾತ್ರಿ (ಚೈತ್ರ ನವರಾತ್ರಿ ಮತ್ತು ಶರದಿಯಾ ನವರಾತ್ರಿ) ಸಮಯದಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಛತ್ತೀಸ್‌ಗಢದಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳು ತೀವ್ರಗೊಂಡಿವೆ. ಜನವರಿಯಿಂದೀಚೆಗೆ ಭದ್ರತಾ ಪಡೆಗಳು ಹಲವಾರು ಎನ್‌ಕೌಂಟರ್‌ಗಳಲ್ಲಿ ಸುಮಾರು 350 ನಕ್ಸಲರನ್ನು ಕೊಲ್ಲಲಾಗಿದೆ. ಅವರಲ್ಲಿ ಹೆಚ್ಚಿನವರು ಬಸ್ತಾರ್ ಪ್ರದೇಶದಲ್ಲಿದ್ದಾರೆ. ಮಾರ್ಚ್ 2026ರೊಳಗೆ ಕೇಂದ್ರ ಸರ್ಕಾರ ನಕ್ಸಲಿಸಂ ಅನ್ನು ಕೊನೆಗೊಳಿಸಲು ಸಂಕಲ್ಪಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ. ಮಾರ್ಚ್ 29ರಂದು ಬಸ್ತಾರ್ ಪ್ರದೇಶದಲ್ಲಿ ನಡೆದ ಎರಡು ಎನ್‌ಕೌಂಟರ್‌ಗಳಲ್ಲಿ 11 ಮಹಿಳೆಯರು ಸೇರಿದಂತೆ 18 ನಕ್ಸಲರು ಸಾವನ್ನಪ್ಪಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 05, 2025 04:49 PM