ಪುಟ್ಟ ಬಾಲಕನ ದೈವ ನರ್ತನ: ಮೈ ಜುಮ್ಮೆನಿಸುವ ವಿಡಿಯೋ ನೋಡಿ
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಲಿ ಗ್ರಾಮದಲ್ಲಿ ನಡೆದ ಮುಗೇರಕಲ ದೈವೋತ್ಸವದಲ್ಲಿ 11 ವರ್ಷದ ಸಮರ್ಥ್ ಎಂಬ ಬಾಲಕ ತನಿಮಾನಿಗ ದೈವ ನರ್ತನ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಬಾಲಕನ ಅಜ್ಜ ಮತ್ತು ತಂದೆ ಕೂಡ ದೈವ ನರ್ತಕರಾಗಿದ್ದರು. ಮೂರು ತಲೆಮಾರುಗಳಿಂದ ಮುಂದುವರಿಯುತ್ತಿರುವ ಈ ಪರಂಪರೆ ಸಮರ್ಥನಿಂದ ಮುಂದುವರಿಯುತ್ತಿದೆ. ದೈವ ಭಕ್ತರು ಈ ಬಾಲಕನ ಅಪರೂಪದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಲಿ ಗ್ರಾಮದಲ್ಲಿರುವ ಮುಗೇರಕಲ ದೈವಗಳ ಸನ್ನಿಧಾನದಲ್ಲಿ ನಡೆದ ಪ್ರತಿಷ್ಠಾ ವರ್ಧಂತ್ಯುತ್ಸವದಲ್ಲಿ 11 ವರ್ಷದ ಬಾಲಕ ದೈವದ ರೂಪದಲ್ಲಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದಿದ್ದಾರೆ. ಬಾಲಕ ಸಮರ್ಥ್ ತನಿಮಾನಿಗ ದೈವದ ಪಾತ್ರಿಯಾಗಿ ಗಗ್ಗರ ಕಟ್ಟಿದ್ದಾನೆ. ಸಮರ್ಥ ಕಾರ್ಕಳ ತಾಲೂಕಿನ ಸೂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಓದುತಿದ್ದಾರೆ. ಈ ಹಿಂದೆ ಬಾಲಕನ ಅಜ್ಜ ಮೋನು ಪಾಣರ ದೈವ ನರ್ತನ ಮಾಡುತ್ತಿದ್ದರು. ಬಾಲಕನ ತಂದೆ ಹರೀಶ್ ಕೂಡ ದೈವ ನರ್ತಕರಾಗಿದ್ದರು. ಇದೀಗ ಮೂರನೇ ತಲೆಮಾರಿನ ಬಾಲಕ ಸಮರ್ಥ್ನಿಂದ ಪರಂಪರೆ ಮುಂದುವರೆಸಿಕೊಂಡು ಬಂದಿದ್ದಾರೆ. ಬಾಲಕನ ಹೆಣ್ಣು ದೈವ ಪಾತ್ರಕ್ಕೆ ದೈವಭಕ್ತರು ತಲೆಬಾಗಿದ್ದಾರೆ.
Published on: Apr 05, 2025 04:01 PM
Latest Videos