ವಿನಯ್ ಸೋಮಯ್ಯ ಯಾವ ಪಕ್ಷದವರು ಅನ್ನೋದು ಮುಖ್ಯವಲ್ಲ, ನಾನು ಅವರ ಕುಟುಂಬದೊಂದಿಗಿದ್ದೇನೆ: ಮಂತರ್ ಗೌಡ
ವಿನಯ್ ನವೆಂಬರ್ ತಿಂಗಳಲ್ಲಿ ಕುಶಾಲನಗರ ಅಸ್ಪತ್ರೆಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯನಲ್ಲಿ ತನ್ನನ್ನು ಟ್ಯಾಗ್ ಮಾಡಿ ಒಂದು ಪೋಸ್ಟ್ ಹಾಕಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ಗಳನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡುವ ತಾನು ತನ್ನನ್ನು ಭೇಟಿಯಾಗಿ ಸಮಸ್ಯೆಯನ್ನು ಚರ್ಚಿಸುವಂತೆ ಹೇಳಿದ್ದೆ, ಅವರು ಬರಲಿಲ್ಲ, ಹಾಗಾಗಿ ಅವರನ್ನು ತಾನು ನೋಡಲೇ ಇಲ್ಲ ಎಂದು ಮಂತರ್ ಗೌಡ ಹೇಳುತ್ತಾರೆ.
ಮಡಿಕೇರಿ, ಏಪ್ರಿಲ್ 5: ವಿನಯ್ ಸೋಮಣ್ಣ ಅವರು ಯಾವುದೇ ಪಕ್ಷದವರಾಗಿರಬಹುದು, ಕೇವಲ 39-ವರ್ಷ ವಯಸ್ಸಿನವರಾಗಿದ್ದ ಅವರು ಆತ್ಮಹತ್ಯಗೆ ಮೂಲಕ ಸಾವನ್ನಪ್ಪಿರುವ ಅವರ ಕುಟುಂಬದ ಜತೆ ಒಬ್ಬ ಜನಪ್ರತಿಧಿಯಾಗಿ ತಾನು ಮತ್ತು ತನ್ನ ಬೆಂಬಲಿಗರು ನಿಲ್ಲುವುದಾಗಿ ಮಡಿಕೇರಿ ಶಾಸಕ ಮಂತರ್ ಗೌಡ (Mantar Gowda) ಹೇಳಿದರು. ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ಅರೋಪ ಪ್ರತ್ಯಾಪತೋಪಗಳೇನೇ ಇದ್ದರೂ ಅವುಗಳ ಬಗ್ಗೆ ಮಾತಾಡಲು ಬೇರೆ ಸಮಯ ಮತ್ತು ಸಂದರ್ಭವಿದೆ, ಅದರೆ ಅವರನ್ನು ತಾನು ನೋಡೇ ಇರಲಿಲ್ಲ, ಅವರು ಸೋಮವಾರಪೇಟೆಯವರು ಅಂತ ಗೊತ್ತಾಗಿದ್ದು ನಿನ್ನೆಯಷ್ಟೇ ಎಂದು ಹೇಳಿದರು.
ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ: ಡೆತ್ ನೋಟ್ ಮೇಲೆಯೇ ಅನುಮಾನ ವ್ಯಕ್ತಪಡಿಸಿದ ಪೊನ್ನಣ್ಣ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ