ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಸಾವು ಪ್ರಕರಣ, ಮಡಿಕೇರಿಯಲ್ಲಿ ಉಗ್ರ ಪ್ರತಿಭಟನೆ
ಬಿಜೆಪಿ ನಾಯಕರ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರು ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದರು. ಎಫ್ಐಅರ್ ನಲ್ಲಿ ದಾಖಲಾಗಿರುವ ತನ್ನೆರಾ ಮೈನಾ ಹೆಸರಿನ ವ್ಯಕ್ತಿ ಪೊನ್ನಣ್ಣರ ಆಪ್ತನೆಂದು ಹೇಳಲಾಗುತ್ತಿದೆ. ಶಾಸಕರ ದಬ್ಬಾಳಿಕೆಯಿಂದ ತಮ್ಮ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿರುವರೆಂದು ವಿಜಯೇಂದ ನೇರ ಆರೋಪ ಮಾಡಿದರು.
ಬೆಂಗಳೂರು, ಏಪ್ರಿಲ್ 5: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರು ಇವತ್ತು ಮಡಿಕೇರಿಯಲ್ಲಿ ಉಗ್ರ ಪ್ರತಿಭಟನೆ ನಡೆಸಿದರು ಮತ್ತು ಅಲ್ಲಿನ ಡಿಸಿಪಿ ಕಚೇರಿಯನ್ನು ಮುತ್ತಿಗೆ ಹಾಕುವ ಪ್ರಯತ್ನವನ್ನೂ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra), ಹಲವಾರು ಬಿಜೆಪಿ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ದೂರಿನಲ್ಲಿ ಕೊಡಗು ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರಾದ ಎಎಸ್ ಪೊನ್ನಣ್ಣ ಮತ್ತು ಮಂತರ್ಗೌಡ ಇಬ್ಬರ ಹೆಸರಿದ್ದರೂ ಎಫ್ಐಅರ್ ನಲ್ಲಿ ಅವರ ಹೆಸರು ದಾಖಲಾಗಿಲ್ಲ ಎಂದು ಹೇಳಿದ ನಾಯಕರು ಅವರ ಹೆಸರು ದಾಖಲಾಗಬೇಕು ಮತ್ತು ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಕೈ ಶಾಸಕರ ಹೆಸರೇಳಿ ಆತ್ಮಹತ್ಯೆಗೆ ಶರಣಾದ ವಿನಯ್ ಯಾರು? ಬಿಜೆಪಿ ನಾಯಕರು ಸಿಡಿದೇಳಲು ಕಾರಣವೇನು?
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ