ವಿದ್ಯಾರ್ಥಿಗಳ ಎಲ್ಲ ಗೊಂದಲಗಳಿಗೆ ಪರಿಹಾರ ಸಿಗುವ ಎಜುಕೇಶನ್ ಎಕ್ಸ್ಪೋ ಟಿವಿ9 ಆಯೋಜಿಸಿದೆ: ಹೆಚ್ ಪ್ರಸನ್ನ, ಸಿಇಒ, ಕೆಇಎ
ಸಿಈಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಒಎಂಅರ್ ಶೀಟ್ ನೋಡಿದಾಗ ಗಲಬಿಲಿಯಾಗೋದು ಸಹಜ, ವಿದ್ಯಾರ್ಥಿಗಳು ವರ್ಷನ್ ಕೋಡ್ ತಪ್ಪಾಗಿ ಎಂಟ್ರಿ ಮಾಡುತ್ತಾರೆ, ಹಾಗಾಗೇ ಅವರು ಹಾಲ್ ಟಿಕೆಟ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವಾಗ, ಅದರೊಂದಿಗೆ ಒಂದು ಒಎಂಆರ್ ಶೀಟ್ ಕೂಡ ಡೌನ್ ಲೋಡ್ ಆಗುವ ವ್ಯವಸ್ಥೆ ಮಾಡಲಾಗಿದೆ, ಪ್ರ್ಯಾಕ್ಟೀಸ್ ಮಾಡಲು ವಿದ್ಯಾರ್ಥಿಗಳನ್ನು ಅದನ್ನು ಬಳಸಬಹದು ಎಂದು ಪ್ರಸನ್ನ ಹೇಳಿದರು.
ಬೆಂಗಳೂರು, ಏಪ್ರಿಲ್ 5: ಟಿವಿ9 ನೆಟ್ವರ್ಕ್ ಆಯೋಜಿಸಿರುವ ಎಜುಕೇಶನ್ ಎಕ್ಸ್ಪೋಗೆ ಬಹಳ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವೂ ಎಕ್ಸ್ಪೋನಲ್ಲಿ ಭಾಗವಹಿಸಿದ್ದು ಅದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್ ಪ್ರಸನ್ನ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡುತ್ತ ಕಾರ್ಯಕ್ರಮವನ್ನು ಶ್ಲಾಘಿಸಿದ್ದಾರೆ. ಎಕ್ಸ್ಪೋನಿಂದ ಬಹಳಷ್ಟು ವಿದ್ಯಾರ್ಥಿ ಮತ್ತು ಪೋಷಕರಿಗೆ ಅನುಕೂಲವಾಗುತ್ತದೆ, ಎಲ್ಲ ವೆಬ್ಸೈಟ್ಗಳು ಆನ್ಲೈನ್ನಲ್ಲಿ ಲಭ್ಯವಿದ್ದರೂ ಮುಂದಿನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪ್ರತಿಯೊಂದು ವಿವರ ಸಿಗದೆ ವಿದ್ಯಾರ್ಥಿಗಳಿ ಗೊಂದಲಕ್ಕೀಡಾಗುತ್ತಾರೆ. ಹಾಗಾಗಿ, ವಿದ್ಯಾರ್ಥಿಗಳ ಎಲ್ಲ ಗೊಂದಲ, ಪ್ರಶ್ನೆಗಳಿಗೆ ಒಂದೇ ಸೂರಿನಡಿ ಸಮಾಧಾನ ಸಿಗುವ ವ್ಯವಸ್ಥೆಯನ್ನು ಟಿವಿ9 ಮಾಡಿರುವದು ಅತ್ಯಂತ ಪ್ರಶಂಸನೀಯ ಎಂದು ಪ್ರಸನ್ನ ಹೇಳಿದರು.
ಇದನ್ನೂ ಓದಿ: TV9 Education Summit-2024: ಕಲಬುರಗಿಯಲ್ಲಿ 2 ದಿನ ಟಿವಿ9 ಎಜುಕೇಶನ್ ಸಮ್ಮಿಟ್, ಸಿಎಂ ಚಾಲನೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ