TV9 Education Summit-2024: ಕಲಬುರಗಿಯಲ್ಲಿ 2 ದಿನ ಟಿವಿ9 ಎಜುಕೇಶನ್ ಸಮ್ಮಿಟ್, ಸಿಎಂ ಚಾಲನೆ
ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಸಿಇಟಿ ಪರೀಕ್ಷೆಗಳು ಮುಕ್ತಾಯವಾಗಿದ್ದು, ಉನ್ನತ ಶಿಕ್ಷಣವನ್ನು ಯಾವ ಕಾಲೇಜಿನಲ್ಲಿ ಮುಂದುವರೆಸಬೇಕು? ವಿದ್ಯಾಭ್ಯಾಸಕ್ಕೆ ಯಾವ ಕಾಲೇಜು ಸೂಕ್ತ? ಕಲಬುರಗಿ ಅಥವಾ ಸುತ್ತಮುತ್ತ ಯಾವ ಕಾಲೇಜು ಚೆನ್ನಾಗಿದೆ? ಎಂಬ ಪ್ರಶ್ನೆ ಕಲ್ಯಾಣ ಕರ್ನಾಟಕದ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕಾಡುತ್ತಿದ್ದರೇ ಇಲ್ಲಿದೆ ಉತ್ತರ. ಹೌದು ನಿಮ್ಮ ಊರು ಕಲಬುರಗಿಯಲ್ಲಿ ಟಿವಿ9 ಎಜುಕೇಶನ್ ಎಕ್ಸಪೋ ಪ್ರಾರಂಭವಾಗಿದೆ.
ಎಸ್ಎಸ್ಎಲ್ಸಿ, ಪಿಯುಸಿ ಮತ್ತು ಸಿಇಟಿ ಪರೀಕ್ಷೆಗಳು ಮುಕ್ತಾಯವಾಗಿದ್ದು, ಉನ್ನತ ಶಿಕ್ಷಣವನ್ನು ಯಾವ ಕಾಲೇಜಿನಲ್ಲಿ ಮುಂದುವರೆಸಬೇಕು? ವಿದ್ಯಾಭ್ಯಾಸಕ್ಕೆ ಯಾವ ಕಾಲೇಜು ಸೂಕ್ತ? ಕಲಬುರಗಿ ಅಥವಾ ಸುತ್ತಮುತ್ತ ಯಾವ ಕಾಲೇಜು ಚೆನ್ನಾಗಿದೆ? ಎಂಬ ಪ್ರಶ್ನೆ ಕಲ್ಯಾಣ ಕರ್ನಾಟಕದ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕಾಡುತ್ತಿದ್ದರೇ ಇಲ್ಲಿದೆ ಉತ್ತರ. ಹೌದು ನಿಮ್ಮ ಊರು ಕಲಬುರಗಿಯಲ್ಲಿ ಟಿವಿ9 ಎಜುಕೇಶನ್ ಎಕ್ಸಪೋ ಪ್ರಾರಂಭವಾಗಿದೆ. ನಗರದ ಪೂಜ್ಯ ಡಾ.ಬಸವರಾಜಪ್ಪ ಅಪ್ಪ ಮೆಮೊರಿಯಲ್ ಹಾಲ್ನಲ್ಲಿ ಇಂದಿನಿಂದ 2 ದಿನಗಳ ಕಾಲ ಎಕ್ಸ್ಪೋ ನಡೆಯಲಿದೆ. ಈ ಎಜುಕೇಶನ್ ಎಕ್ಸಪೋದಲ್ಲಿ ರಾಜ್ಯ, ದೇಶದ ಪ್ರತಿಷ್ಠಿತ 32ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗಿಯಾಗಲಿವೆ. ಈ ಎಜುಕೇಶನ್ ಎಕ್ಸಪೋದಲ್ಲಿ ಭಾಗವಹಿಸಿ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ.
ಇನ್ನು ಕಲಬುರಗಿಯಲ್ಲಿ ಆಯೋಜಿಸಲಾಗಿರುವ ಟಿವಿ9 ಎಜುಕೇಶನ್ ಎಕ್ಸಪೋಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗ್ಗೆ 10.30ಕ್ಕೆ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಸಾಥ್ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ