ಕುಮಾರಸ್ವಾಮಿ ಈಗ ಫ್ರೀಯಾಗಿದ್ದಾರೆ, ಎಲ್ಲ ವಿಷಯಗಳ ಬಗ್ಗೆ ಮಾತಾಡಲಿ: ಡಿಕೆ ಶಿವಕುಮಾರ್
ಡಾ ಮಂಜುನಾಥ್ ಅವರನ್ನು ಸ್ಪರ್ಧೆಗಿಳಿಸಿದ್ದಕ್ಕೆ ಬಹಳ ಸಂತೋಷ, ಕುಮಾರಸ್ವಾಮಿ ಏನಾದರೂ ಮಾತಾಡೋದಿದ್ದರೆ ಬೇಗ ಮಾತಾಡಲಿ, ತಡಮಾಡುವುದು ಬೇಡ, ಅವರೀಗ ಫ್ರೀ ಆಗಿರುವುದರಿಂದ ಕೇವಲ ಇದೊಂದೇ ವಿಚಾರ ಅಲ್ಲ, ಎಲ್ಲ ವಿಚಾರಗಳ ಬಗ್ಗೆ ಮಾತಾಡಲಿ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಸೇರಿದಂತೆ ರಾಜ್ಯ 14 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಮುಗಿದು ಮತದಾರರ ತೀರ್ಮಾನ ಈವಿಎಂಗಳಲ್ಲಿ ಸೀಲ್ ಆಗಿದ್ದರೂ ಡಿಕೆ ಶಿವಕುಮಾರ್ (DK Shivakumar) ಮತ್ತು ಹೆಚ್ ಡಿ ಕುಮಾರಸ್ವಾಮಿ (HD Kumaraswamy) ನಡುವಿನ ಗುದ್ದಾಟ ಮುಗಿಯುತ್ತಿಲ್ಲ. ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಶಿವಕುಮಾರ್, ಚುನಾವಣಾ ಫಲಿತಾಂಶ ಬಂದ ಬಳಿಕ ಡಾ ಸಿಎನ್ ಮಂಜುನಾಥ್ (Dr CN Manjunath) ಅವರನ್ನು ಯಾಕೆ ಬೆಂಗಳೂರು ರೂರಲ್ ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ದು ಅಂತ ಗೊತ್ತಾಗಲಿದೆ ಅಂತ ಕುಮಾರಸ್ವಾಮಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿ, ಓಕೆ ಅವರನ್ನು ಸ್ಪರ್ಧೆಗಿಳಿಸಿದ್ದಕ್ಕೆ ಬಹಳ ಸಂತೋಷ, ಕುಮಾರಸ್ವಾಮಿ ಏನಾದರೂ ಮಾತಾಡೋದಿದ್ದರೆ ಬೇಗ ಮಾತಾಡಲಿ, ತಡಮಾಡುವುದು ಬೇಡ, ಅವರೀಗ ಫ್ರೀ ಆಗಿರುವುದರಿಂದ ಕೇವಲ ಇದೊಂದೇ ವಿಚಾರ ಅಲ್ಲ, ಎಲ್ಲ ವಿಚಾರಗಳ ಬಗ್ಗೆ ಮಾತಾಡಲಿ ಎಂದು ಹೇಳಿದರು. ನಿನ್ನೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆದ ಮತದಾನದ ಬಗ್ಗೆ ಮಾತಾಡಿದ ಅವರು, ಮತದಾನ ಪ್ರಮಾಣ ಮತ್ತು ಲಭ್ಯವಿರುವ ಮಾಹಿತಿಯನ್ನು ಆಧರಿಸಿ ಹೇಳುವುದಾದರೆ, ಕಾಂಗ್ರೆಸ್ ಪಕ್ಷಕ್ಕೆ ಡಬಲ್ ಡಿಜಿಟ್ ನಲ್ಲಿ ಸ್ಥಾನಗಳು ದಕ್ಕಲಿವೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಶಾಲೆಗಳನ್ನು ಕಟ್ಟಲು ಕೋಟ್ಯಾಂತರ ಬೆಲೆಬಾಳುವ ಜಮೀನುಗಳನ್ನು ದೇಣಿಗೆ ನೀಡಿದ್ದೇನೆ, ಕುಮಾರಸ್ವಾಮಿ ನೀಡಿದ್ದಾರಾ? ಶಿವಕುಮಾರ್
ಆಗ ವೀರಪ್ಪನ್ ಕೇಸ್ನಲ್ಲಿ ಗಿಫ್ಟ್: ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್
ಬಾಂಗ್ಲಾ ಜೊತೆಗೆ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್ನಿಂದ ಔಟ್?
ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ
ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ!

