ಕರ್ನಾಟಕದ ಬಗ್ಗೆ ಅಸ್ಸಾಂ ಮುಖ್ಯಮಂತ್ರಿಗೇನು ಗೊತ್ತು? ನನ್ನ ಮತ್ತು ಶಿವಕುಮಾರ್ ನಡುವೆ ಶೀತಲ ಸಮರ ಇಲ್ಲ: ಸಿದ್ದರಾಮಯ್ಯ
ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರ್ಮ ಅವರು; ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಜಾರಿಯಲ್ಲಿರುವ ಶೀತಲ ಸಮರದಿಂದ ಕರ್ನಾಟಕ ಸರ್ಕಾರ ಪತನಗೊಳ್ಳಲಿದೆ ಅಂತ ಹೇಳಿರುವುದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಾಗ, ಎಲ್ಲೋ ಕೂತು ಮಾತಾಡುವ ಸರ್ಮಗೆ ಕರ್ನಾಟಕದ ಬಗ್ಗೆ ಏನು ಗೊತ್ತು? ಅವರೇನು ಪ್ರಧಾನ ಮಂತ್ರಿಯೇ ಅಥವಾ ಬಿಜೆಪಿ ರಾಷ್ಟ್ರಾಧ್ಯಕ್ಷರೇ? ಎಂದು ಪ್ರಶ್ನಿಸಿದರು.
ಕಲಬುರಗಿ: ನಗರದಲ್ಲಿಂದು ಮಾಧ್ಯಮ ಗೋಷ್ಟಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದರು. ಮತದಾರರು ನಾವು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಅದನ್ನು ನಂಬುತ್ತಾರೆ ಅಂತ ಅಂಡರ್ ಎಸ್ಟಿಮೇಟ್ ಮಾಡಿದರೆ ಅದು ನಮ್ಮ ದಡ್ಡತನ ಎಂದ ಸಿದ್ದರಾಮಯ್ಯ, ಅವರು ನಾವು ಹೇಳಿದ್ದನ್ನು ಕೇಳುತ್ತಾರೆ, ಬಿಜೆಪಿ ನಾಯಕರು (BJP leaders) ಹೇಳಿದ್ದನ್ನೂ ಕೇಳುತ್ತಾರೆ, ಇಬ್ಬರ ಮಾತುಗಳನ್ನು ತುಲನೆ ಮಾಡಿ ವಿವೇಚನೆಯಿಂದ ಮತ ಚಲಾಯಿಸುತ್ತಾರೆ ಎಂದರು. ತಮ್ಮ ಸರ್ಕಾರ ಜಾರಿ ಮಾಡಿದ ಗ್ಯಾರಂಟಿ ಯೋಜನೆಗಳಿಂದ ಮತದಾರರಿಗೆ ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಮೂಡಿದೆ ಎಂದು ಮುಖ್ಯಮಂತ್ರಿ ಹೇಳಿದರು. ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವ ಸರ್ಮ (Himanta Biswa Sarma) ಅವರು; ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಜಾರಿಯಲ್ಲಿರುವ ಶೀಲತ ಸಮರದಿಂದ ಕರ್ನಾಟಕ ಸರ್ಕಾರ ಪತನಗೊಳ್ಳಲಿದೆ ಅಂತ ಹೇಳಿರುವುದನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಾಗ, ಎಲ್ಲೋ ಕೂತು ಮಾತಾಡುವ ಸರ್ಮಗೆ ಕರ್ನಾಟಕದ ಬಗ್ಗೆ ಏನು ಗೊತ್ತು? ಅವರೇನು ಪ್ರಧಾನ ಮಂತ್ರಿಯೇ ಅಥವಾ ಬಿಜೆಪಿ ರಾಷ್ಟ್ರಾಧ್ಯಕ್ಷರೇ? ಕರ್ನಾಟಕ ರಾಜಕಾರಣದ ಬಗ್ಗೆ ಮಾತಾಡಲು ಅವರು ಯಾರೂ ಅಲ್ಲ, ತನ್ನ ಮತ್ತು ಶಿವಕುಮಾರ್ ನಡುವೆ ಶೀತಲ ಸಮರ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟ ನುಡಿಗಳಲ್ಲಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಸ್ವಕ್ಷೇತ್ರ ಮೈಸೂರಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು!