ಕಾಂಗ್ರೆಸ್ ಏನಾದರೂ ಹೇಳಿಕೊಳ್ಳಲಿ, ರಾಜ್ಯದ ಎಲ್ಲ ಸ್ಥಾನಗಳಲ್ಲಿ ಗೆಲ್ಲೋದು ನಾವೇ: ಬಿಎಸ್ ಯಡಿಯೂರಪ್ಪ

ಕಾಂಗ್ರೆಸ್ ಏನಾದರೂ ಹೇಳಿಕೊಳ್ಳಲಿ, ರಾಜ್ಯದ ಎಲ್ಲ ಸ್ಥಾನಗಳಲ್ಲಿ ಗೆಲ್ಲೋದು ನಾವೇ: ಬಿಎಸ್ ಯಡಿಯೂರಪ್ಪ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 27, 2024 | 1:06 PM

ನಿನ್ನೆ ಮತದಾನ ನಡೆದ ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-ಜೆಡಿಎಸ್ ಗೆ ಎಷ್ಟು ಸ್ಥಾನ ಸಿಗಲಿವೆ ಎಂದು ಕೇಳಿದ್ದಕ್ಕೆ ಅವರು ಹೆಚ್ಚುಕಡಿಮೆ ಎಲ್ಲ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು. ಅವರ ಕೊನೆಯ ಮಾತಿನಲ್ಲಿ ಆತ್ಮವಿಶ್ವಾಸದ ಕೊರತೆ ಇರುವುದನ್ನು ಗಮನಿಸಿ, ಮತದಾನಕ್ಕಿಂತ ಮೊದಲು ಅವರು ಎಲ್ಲ 28 ಸ್ಥಾನಗಳು ತಮಗೆ ಸಿಗಲಿವೆ ಗಟ್ಟಿಧ್ವನಿಯಲ್ಲಿ ಹೇಳುತ್ತಿದ್ದರು.

ಬೆಂಗಳೂರು: ಇಂದು ಬೆಳಗ್ಗೆ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಹಿರಿಯ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಎರಡನೇ ಹಂತದ ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎರಡಂಕಿ (double digit) ದಾಟಲಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿರುವುದಕ್ಕೆ ಪ್ರತಿಕ್ರಿಯಿಸುವ ಗೋಜಿಗೂ ಹೋಗಲಿಲ್ಲ. ಅವರು ಹೇಳುತ್ತಾರೆ, ಹೇಳಿಕೊಳ್ಳಲಿ ಬಿಡಿ ಎಂದ ಅವರು ತಾನೀಗ ವಿಜಯಪುರಕ್ಕೆ ಹೋಗುತ್ತಿದ್ದು, ವಿಜಯಪುರ ನಗರ ಮತ್ತು ಮುದ್ದೇಬಿಹಾಳದಲ್ಲಿ ಇವತ್ತು ಪ್ರಚಾರ ಮಾಡಿ, ನಾಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ರಾತ್ರಿಯೇ ಅಲ್ಲಿಗೆ ಹೋಗುವುದಾಗಿ ಹೇಳಿದರು. ನಿನ್ನೆ ಮತದಾನ ನಡೆದ ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ-ಜೆಡಿಎಸ್ ಗೆ ಎಷ್ಟು ಸ್ಥಾನ ಸಿಗಲಿವೆ ಎಂದು ಕೇಳಿದ್ದಕ್ಕೆ ಅವರು ಹೆಚ್ಚುಕಡಿಮೆ ಎಲ್ಲ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು. ಅವರ ಕೊನೆಯ ಮಾತಿನಲ್ಲಿ ಆತ್ಮವಿಶ್ವಾಸದ ಕೊರತೆ ಇರುವುದನ್ನು ಗಮನಿಸಿ, ಮತದಾನಕ್ಕಿಂತ ಮೊದಲು ಅವರು ಎಲ್ಲ 28 ಸ್ಥಾನಗಳು ತಮಗೆ ಸಿಗಲಿವೆ ಗಟ್ಟಿಧ್ವನಿಯಲ್ಲಿ ಹೇಳುತ್ತಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಯಡಿಯೂರಪ್ಪನೇ ನನ್ನನ್ನು ಪಕ್ಷಕ್ಕೆ ವಾಪಸ್ಸು ಕರೆದೊಯ್ಯುತ್ತಾರೆ: ಈಶ್ವರಪ್ಪ