ಅಧಿಕಾರದ ಅಮಲಿನಲ್ಲಿರುವ ರಾಜ್ಯ ಸರ್ಕಾರದ ಪ್ರಮಾದಗಳಿಗೆ ಜನ ಪಾಠ ಕಲಿಸಲಿದ್ದಾರೆ: ಬಿವೈ ವಿಜಯೇಂದ್ರ
ಮೊದಲ ಹಂತದ ಚುನಾವಣೆಯ ಬಳಿಕ ಲಬ್ಯವಾಗುತ್ತಿರುವ ಸುಳಿವುಗಳಿಂದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಹೆಚ್ಚು ಕಡಿಮೆ ಎಲ್ಲ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿರುವುದು ಖಚಿತವಾಗುತ್ತಿದೆ, 10-12 ಸ್ಥಾನ ಗೆಲ್ಲುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಭ್ರಮನಿರಸನವಾಗಲಿದೆ ಎಂದು ವಿಜಯೇಂದ್ರ ಹೇಳಿದರು.
ಶಿವಮೊಗ್ಗ: ಮೊದಲ ಹಂತದ ಮತದಾನ ನಡೆದ (first phase polling) ಕ್ಷೇತ್ರಗಳಲ್ಲಿ ನಡೆಸಿದ ಪ್ರಚಾರದಲ್ಲಿ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳ ಕಾರ್ಡನ್ನೇ ಬಳಸಿದೆ, ಅದರೆ ಅದು ಮತದಾರರ ಮೇಲೆ ಪ್ರಭಾವ ಬೀರಿಲ್ಲ, ಸರ್ಕಾರದ ಬೂಟಾಟಿಕೆ, ಅಧಿಕಾರದ ಅಮಲಿನಲ್ಲಿ ತೆಗೆದುಕೊಳ್ಳುತ್ತಿರುವ ತಪ್ಪು ನಿರ್ಣಯಗಳು, ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ (Neha Hiremath murder case) ಕಾಂಗ್ರೆಸ್ ನಾಯಕರು ಪ್ರದರ್ಶಿಸಿದ ಧೋರಣೆ ಮತ್ತು ತುಷ್ಟೀಕರಣದ ರಾಜಕಾರಣದಿಂದ ಬೇಸತ್ತಿರುವ ಜನ ಸಿದ್ದರಾಮಯ್ಯ ಸರ್ಕಾರಕ್ಕೆ ಪಾಠ ಕಲಿಸುವ ನಿರ್ಧಾರ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಇಂದು ಶಿವಮೊಗ್ಗದಲ್ಲಿ ಹೇಳಿದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸೋಲಿನ ಭೀತಿಯಿಂದ ವಿಜಯೇಂದ್ರ ಹತಾಷರಾಗಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ ಎಂದಾಗ ಹೆಚ್ಚು ಕಾಮೆಂಟ್ ಮಾಡಲಿಚ್ಛಿಸದ ಅವರು ದೇವರು ಈಶ್ವರಪ್ಪಗೆ ಒಳ್ಳೇದು ಮಾಡಲಿ ಅಂತಷ್ಟೇ ಹೇಳಿದರು. ಮೊದಲ ಹಂತದ ಚುನಾವನೆಯ ಬಳಿಕ ಲಬ್ಯವಾಗುತ್ತಿರುವ ಸುಳಿವುಗಳಿಂದ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಹೆಚ್ಚು ಕಡಿಮೆ ಎಲ್ಲ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿರುವುದು ಖಚಿತವಾಗುತ್ತಿದೆ, 10-12 ಸ್ಥಾನ ಗೆಲ್ಲುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಭ್ರಮನಿರಸನವಾಗಲಿದೆ ಎಂದು ವಿಜಯೇಂದ್ರ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ತಿದ್ದಿಕೊಳ್ಳಲು ಈಶ್ವರಪ್ಪಗೆ ಸಾಕಷ್ಟು ಸಮಯಾವಕಾಶ ನೀಡಲಾಗಿತ್ತು, ಅವರು ಹಠ ಬಿಡಲಿಲ್ಲ: ಬಿವೈ ವಿಜಯೇಂದ್ರ