Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಕ್ಷೇತ್ರ ಮೈಸೂರಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು!

ಸ್ವಕ್ಷೇತ್ರ ಮೈಸೂರಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 03, 2024 | 10:31 AM

ಗುಂಪು ವೇದಿಕೆಯ ಪಕ್ಕದಲ್ಲಿದ್ದ ಮುಖಂಡರೊಬ್ಬರ ವಿರುದ್ಧ ಕೂಗಾಡಲಾರಂಭಿಸಿತು. ವಿಷಯ ಏನು ಅಂತ ಗೊತ್ತಾಗಲಿಲ್ಲ, ವೇದಿಕೆಯ ಮೇಲೆ ಸಿದ್ದರಾಮಯ್ಯ ಕೂತಿರುವ ಅಂಶವನ್ನು ಸಹ ಕಾರ್ಯಕರ್ತರು ಗಣನೆಗೆ ತೆಗೆದುಕೊಳ್ಳಲಿಲ್ಲ. ಕೊನೆಗೆ ಮುಖ್ಯಮಂತ್ರಿಯವರೇ ಕೈಯಲ್ಲಿ ಮೈಕ್ ಹಿಡಿದು ರೊಚ್ಚಿಗೆದ್ದ ಕಾರ್ಯಕರ್ತರನ್ನು ಸುಮ್ಮನಾಗಿಸಬೇಕಾಯಿತು.

ಮೈಸೂರು: ಚುನಾವಣಾ ಪ್ರಚಾರ ಕಾರ್ಯದಲ್ಲಿ ಪಕ್ಷದ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸುವುದು ಹೊಸದೇನಲ್ಲ. ಎಲ್ಲ ಪಕ್ಷಗಳಲ್ಲೂ ಇಂಥ ಘಟನೆಗಳು ನಡೆಯುತ್ತಿರತ್ತವೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ತವರು ಜಿಲ್ಲೆ ಮೈಸೂರಲ್ಲಿ (Mysuru) ಮತ್ತು ಅವರ ಸಮ್ಮುಖದಲ್ಲೇ ಕಾರ್ಯಕರ್ತರು (party workers) ಯಾವುದೋ ಒಂದು ವಿಷಯದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದರೆ ಅದು ಖಂಡಿತ ವಿಶೇಷ ಅನಿಸುತ್ತೆ. ಚಾಮುಂಡೇಶ್ವರಿ ಕ್ಷೆತ್ರದಲ್ಲಿ ಸಿದ್ದರಾಮಯ್ಯ ಕಾರ್ಯಕರ್ತರ ಸಭೆಯೊಂದನ್ನು ನಡೆಸುವಾಗ ಕಾರ್ಯಕರ್ತರ ಒಂದು ಗುಂಪು ವೇದಿಕೆಯ ಪಕ್ಕದಲ್ಲಿದ್ದ ಮುಖಂಡರೊಬ್ಬರ ವಿರುದ್ಧ ಕೂಗಾಡಲಾರಂಭಿಸಿತು. ವಿಷಯ ಏನು ಅಂತ ಗೊತ್ತಾಗಲಿಲ್ಲ, ವೇದಿಕೆಯ ಮೇಲೆ ಸಿದ್ದರಾಮಯ್ಯ ಕೂತಿರುವ ಅಂಶವನ್ನು ಸಹ ಕಾರ್ಯಕರ್ತರು ಗಣನೆಗೆ ತೆಗೆದುಕೊಳ್ಳಲಿಲ್ಲ. ಕೊನೆಗೆ ಮುಖ್ಯಮಂತ್ರಿಯವರೇ ಕೈಯಲ್ಲಿ ಮೈಕ್ ಹಿಡಿದು ರೊಚ್ಚಿಗೆದ್ದ ಕಾರ್ಯಕರ್ತರನ್ನು ಸುಮ್ಮನಾಗಿಸಬೇಕಾಯಿತು. ಬೇರೆ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರಿ ಮೂಲ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೌಲತ್ತು ನಡೆಸುವ ಪ್ರಯತ್ನ ಮಾಡಿದರೆ ಹೀಗಾಗೋದು ಸಹಜ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರು-ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಅಪ್ಪಟ ಒಕ್ಕಲಿಗ: ಸಿದ್ದರಾಮಯ್ಯ