ಕುಮಾರಸ್ವಾಮಿಗೆ ಸ್ವಲ್ವವಾದರೂ ಆತ್ಮಗೌರವ ಇದ್ದಿದ್ದರೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ: ಸಿದ್ದರಾಮಯ್ಯ

ಕುಮಾರಸ್ವಾಮಿಗೆ ಸ್ವಲ್ವವಾದರೂ ಆತ್ಮಗೌರವ ಇದ್ದಿದ್ದರೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ: ಸಿದ್ದರಾಮಯ್ಯ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 02, 2024 | 4:57 PM

14 ತಿಂಗಳು ಕಾಲ ಚೆನ್ನಾಗಿ ನಡೆದಿದ್ದ ಸರ್ಕಾರವನ್ನು ಬೀಳಿಸಿದ್ದು ಯಡಿಯೂರಪ್ಪ ಎಂದು ಸಿದ್ದರಾಮಯ್ಯ ಗಟ್ಟಿಧ್ವನಿಯಲ್ಲಿ ಹೇಳಿದರು. ಕುಮಾರಸ್ವಾಮಿ ಮತ್ತು ದೇವೇಗೌಡ ಅವರಿಗೆ ಕೊಂಚವಾದರೂ ಆತ್ಮಗೌರವ ಇದ್ದಿದ್ದರೆ ಬಿಜೆಪಿ ಮೈತ್ರಿ ಬೆಳೆಸುತ್ತಿರಲಿಲ್ಲ. ಆದರೆ ಹಿಂದಿನದೆಲ್ಲವನ್ನು ಮರೆತು ತಾವು ಮತ್ತು ಬಿಜೆಪಿ ನಾಯಕರು ಭಾಯಿ ಭಾಯಿ ಎನ್ನುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕುಹುಕವಾಡಿದರು.

ಮೈಸೂರು: ನಗರದ ಅಭಿಷೇಕ್ ವೃತ್ತದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿಯನ್ನು (BJP-JDS Alliance) ಗೇಲಿ ಮಾಡಿದರು. ಮೊನ್ನೆಯವರೆಗೆ ಬಿಜೆಪಿ ನಾಯಕರನ್ನು ಬೈದಾಡಿಕೊಂಡು ತಿರುಗುತ್ತಿದ್ದ ಕುಮಾರಸ್ವಾಮಿ (HD Kumaraswamy) ಮತ್ತು ಜೆಡಿಎಸ್ ನಾಯಕರು ಈಗ ಅವರ ಜೊತೆ ಶಾಮೀಲಾಗಿದ್ದಾರೆ. 2018 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 80 ಸೀಟು ಸಿಕ್ಕಿದ್ದರೂ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಬಾರದು ಅನ್ನೋ ಒಂದೇ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಮಾಡಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಅದಕ್ಕೆ ದೇವೇಗೌಡರ ಒಪ್ಪಿಗೆ ಸಹ ಇತ್ತು. 14 ತಿಂಗಳು ಕಾಲ ಚೆನ್ನಾಗಿ ನಡೆದಿದ್ದ ಸರ್ಕಾರವನ್ನು ಬೀಳಿಸಿದ್ದು ಯಡಿಯೂರಪ್ಪ ಎಂದು ಸಿದ್ದರಾಮಯ್ಯ ಗಟ್ಟಿಧ್ವನಿಯಲ್ಲಿ ಹೇಳಿದರು. ಕುಮಾರಸ್ವಾಮಿ ಮತ್ತು ದೇವೇಗೌಡ ಅವರಿಗೆ ಕೊಂಚವಾದರೂ ಆತ್ಮಗೌರವ ಇದ್ದಿದ್ದರೆ ಬಿಜೆಪಿ ಮೈತ್ರಿ ಬೆಳೆಸುತ್ತಿರಲಿಲ್ಲ. ಆದರೆ ಹಿಂದಿನದೆಲ್ಲವನ್ನು ಮರೆತು ತಾವು ಮತ್ತು ಬಿಜೆಪಿ ನಾಯಕರು ಭಾಯಿ ಭಾಯಿ ಎನ್ನುತ್ತಿದ್ದಾರೆ ಎಂದು ಸಿದ್ದರಾಮಯ್ಯ ಕುಹುಕವಾಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕುಮಾರಸ್ವಾಮಿಗೆ 500 ರೂ. ಕೊಟ್ಟು ಕೇಂದ್ರ ಸಚಿವರಾಗುವಂತೆ ಆಶೀರ್ವದಿಸಿದ ಅಭಿಮಾನಿ