ಉದ್ಯಮಿಗಳಿಗೆ ಹೋಗುತ್ತಿರುವ ಎಥನಾಲ್ ಹಣವನ್ನು ಕಬ್ಬು ಬೆಳೆಗಾರರಿಗೆ ಕೊಡಿಸುವಂತೆ ಯಡಿಯೂರಪ್ಪಗೆ ಲಕ್ಷ್ಮಣ ಸವದಿ ಸವಾಲು!
ಶಿವಾನಂದ ಪಾಟೀಲರು ಜಮಖಂಡಿ, ತೇರದಾಳ ಮತ್ತು ಹುನುಗುಂದದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ವೋಟು ಬೀಳುವ ಬಗ್ಗೆ ಭೀತಿ ವ್ಯಕ್ತಪಡಿಸಿದ್ದಾರೆ ಆದರೆ ಅವರು ಹೆದರುವ ಕಾರಣವಿಲ್ಲ ಎಂದು ಹೇಳಿದ ಸವದಿ, ವಿಜಯಾನಂದ ಕಾಶಪ್ಪನವರ್ ಕಡೆ ನೋಡಿ ಹುನುಗುಂದ ಹುಲಿ ಇಲ್ಲೇ ಕೂತಿದೆ ಅವರ ಜೊತೆ ತಾನೂ ಕೈ ಜೋಡಿಸುವುದಾಗಿ ಭರವಸೆ ನೀಡಿದರು.
ಬಾಗಲಕೋಟೆ: ಜಿಲ್ಲೆಯ ಬನಹಟ್ಟಿಯಲ್ಲಿ ಅಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಸಮಾವೇಶದಲ್ಲಿ ಅಬ್ಬರದ ಭಾಷಣ ಮಾಡಿದ ಶಾಸಕ ಲಕ್ಷ್ಮಣ ಸವದಿ (Laxman Savadi), ಪಕ್ಷದ ಅಭ್ಯರ್ಥಿ ಸಂಯುಕ್ತ ಪಾಟೀಲ್ (Samyukta Patil) ಅವರ ಪರ ಮತ ಯಾಚಿಸುತ್ತಾ ಆ ಭಾಗದ ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯವನ್ನು ಅಂಕಿ ಅಂಶಗಳೊಂದಿಗೆ ವಿವರಿಸದರಲ್ಲದೆ ರೈತರ ಸಂಕಷ್ಟವನ್ನು ಕೇಂದ್ರ ಸರ್ಕಾರಕ್ಕೆ ವಿವರಿಸಿ, ಎಥನಾಲ್ ಗೆ ಸಿಗುವ ನ್ಯಾಯಯುತ ಬೆಲೆಯನ್ನು ಕಬ್ಬು ಬೆಳೆಗಾರರಿಗೆ ಕೊಡಿಸುವಂತೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೆ (BS Yediyurappa) ಸವಾಲು ಎಸೆದರು. ಸಂಯುಕ್ತ ಪಾಟೀಲರನ್ನು ತನ್ನ ಸಹೋದರಿ ಎಂದು ಉಲ್ಲೇಖಿಸಿದ ಸವದಿ, ಹೆಂಚಿನ ಮೇಲೆ ಹಾಕಿರುವ ರೊಟ್ಟಿ ಸೀದು ಹೋಗುತ್ತಿದೆ ಅದನ್ನು ತಿರುವಿ ಹಾಕಬೇಕಿದೆ ಅನ್ನುತ್ತಾ ಹಾಲಿ ಬಿಜೆಪಿ ಸಂಸದರನ್ನು ಬದಲಿಸುವ ಸಮಯ ಬಂದಿದೆ ಎಂದು ಸೂಚ್ಯವಾಗಿ ಹೇಳಿದರು. ಶಿವಾನಂದ ಪಾಟೀಲರು ಜಮಖಂಡಿ, ತೇರದಾಳ ಮತ್ತು ಹುನುಗುಂದದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಡಿಮೆ ವೋಟು ಬೀಳುವ ಬಗ್ಗೆ ಭೀತಿ ವ್ಯಕ್ತಪಡಿಸಿದ್ದಾರೆ ಆದರೆ ಅವರು ಹೆದರುವ ಕಾರಣವಿಲ್ಲ ಎಂದು ಹೇಳಿದ ಸವದಿ, ವಿಜಯಾನಂದ ಕಾಶಪ್ಪನವರ್ ಕಡೆ ನೋಡಿ ಹುನುಗುಂದ ಹುಲಿ ಇಲ್ಲೇ ಕೂತಿದೆ ಅವರ ಜೊತೆ ತಾನೂ ಕೈ ಜೋಡಿಸುವುದಾಗಿ ಭರವಸೆ ನೀಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಇದೆ: ಲಕ್ಷ್ಮಣ ಸವದಿ, ಶಾಸಕ