2ಎ ಮೀಸಲಾತಿಯಿಂದ ಗಾಣಿಗ ಸಮುದಾಯ ತೆಗೆಯಲ್ಲ: ಶಾಸಕ ಲಕ್ಷ್ಮಣ ಸವದಿ ಭರವಸೆ
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಸಿದ್ದೇಶ್ವರ ಸ್ವಾಮೀಜಿ ಸಭಾಭವನದ ಶಂಕುಸ್ಥಾಪನೆ ಬೃಹತ್ ಸಮಾವೇಶ ಮಾತನಾಡಿದ ಶಾಸಕ ಲಕ್ಷ್ಮಣ ಸವದಿ, 2ಎ ಮೀಸಲಾತಿಯಿಂದ ಗಾಣಿಗ ಸಮುದಾಯ ತೆಗೆಯಲ್ಲವೆಂದು ಭರವಸೆ ನೀಡಿದ್ದಾರೆ. ಗಾಣಿಗ ಸಮುದಾಯ ಎಂದಿಗೂ ನಂಬಿದವರ ಬೆನ್ನಿಗೆ ಚೂರಿ ಹಾಕುವುದಿಲ್ಲ. ಗಾಣಿಗ ಸಮುದಾಯ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದೆ ಎಂದು ಹೇಳಿದ್ದಾರೆ.
ವಿಜಯಪುರ, ಫೆಬ್ರವರಿ 24: ಬಿಜೆಪಿಯವರು ಅನ್ಯಾಯಮಾಡಿದಾಗ ಸಮಾಜ ನನ್ನ ಜೊತೆಗೆ ನಿಂತಿದೆ. ಗಾಣಿಗ ಸಮುದಾಯವನ್ನು 2ಎ ಮೀಸಲಾತಿಯಿಂದ ತೆಗೆಯಲ್ಲ ಎಂದು ಶಾಸಕ ಲಕ್ಷ್ಮಣ ಸವದಿ (Laxman Savadi) ಹೇಳಿದ್ದಾರೆ. ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಸಿದ್ದೇಶ್ವರ ಸ್ವಾಮೀಜಿ ಸಭಾಭವನದ ಶಂಕುಸ್ಥಾಪನೆ ಬೃಹತ್ ಸಮಾವೇಶ ಮಾತನಾಡಿದ ಅವರು, 2ಎ ಮೀಸಲಾತಿಯಿಂದ ಗಾಣಿಗ ಸಮುದಾಯ ತೆಗೆಯಲ್ಲವೆಂದು ಭರವಸೆ ನೀಡಿದ್ದಾರೆ. ಸಿದ್ದೇಶ್ವರ ಸ್ವಾಮೀಜಿ ಸಭಾಭವನಕ್ಕೆ 5 ಕೋಟಿ ರೂ. ಹಣ ನೀಡಿದ್ದೀರಿ. ನಮ್ಮ ಸಮುದಾಯ ನಿಮ್ಮನ್ನು 5 ಬಾರಿ ಎಂಎಲ್ಎ ಮಾಡಲಿದೆ ಎಂದು ಹೇಳಿದ್ದಾರೆ.
ಗಾಣಿಗ ಸಮುದಾಯ ಎಂದಿಗೂ ನಂಬಿದವರ ಬೆನ್ನಿಗೆ ಚೂರಿ ಹಾಕುವುದಿಲ್ಲ
ಗಾಣಿಗ ಸಮಾಜದ 90% ಮತ ಬಂದಿದ್ದರಿಂದ ಗೆದ್ದಿದ್ದೇನೆ ಅಂದಿದ್ದರು. ಗಾಣಿಗ ಸಮುದಾಯ ಎಂದಿಗೂ ನಂಬಿದವರ ಬೆನ್ನಿಗೆ ಚೂರಿ ಹಾಕುವುದಿಲ್ಲ. ಗಾಣಿಗ ಸಮುದಾಯ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದೆ. ಬೇರೆ ಸಮುದಾಯಕ್ಕೆ ಅವಮಾನವಾಗದಂತೆ ಸಂಘಟನೆ ಮಾಡಬೇಕು. ಬೇರೆ ಸಮಾಜದವರು ನಮ್ಮನ್ನು ಗೌರವಿಸುವಂತಹ ಕೆಲಸವಾಗಬೇಕು. ವಿಜಯಪುರದ ವನಶ್ರೀ ಮಠ ಅಭಿವೃದ್ಧಿ ಮಾಡಿ ಶಿಕ್ಷಣ ಕೊಡಬೇಕಿದೆ ಎಂದಿದ್ದಾರೆ.
ಇದನ್ನೂ ಓದಿ: ನವಲಗುಂದ ಕ್ಷೇತ್ರವನ್ನ ಸಿಎಂ ಸಿದ್ದರಾಮಯ್ಯಗೆ ದತ್ತು ನೀಡ್ತೇವೆ- ಶಾಸಕ ಕೋನರೆಡ್ಡಿ
ಇಡೀ ರಾಜ್ಯದಲ್ಲಿ ಗಾಣಿಗ ಸಮುದಾಯ ನನಗೆ ಬೆಂಬಲ ವ್ಯಕ್ತಪಡಿಸಿದೆ. ಗಾಣಿಗ ಸಮುದಾಯಕ್ಕೆ ಕಳಂಕಬಾರದಂತೆ ಕೆಲಸ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ನನ್ನ ಅಂತರಂಗದ ಮಾತುಗಳನ್ನು ಹೇಳುತ್ತೇನೆ ಎಂದು ಹೇಳಿದ್ದಾರೆ.
ನಿಮ್ಮ ಸಮಾಜದ ಜೊತೆಗೆ ಇರುತ್ತೇನೆ: ಸಚಿವ ಎಂಬಿ ಪಾಟೀಲ್
ಸಚಿವ ಎಂಬಿ ಪಾಟೀಲ್ ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿ ನೆನಪಿನಲ್ಲಿ ಸಭಾ ಭವನ ಮಾಡಲಾಗುತ್ತಿದೆ. ಸಿದ್ದೇಶ್ವರ ಮಹಾಸ್ವಾಮೀಗಳು ನಮ್ಮ ಪಾಲಿನ ನಡೆದಾಡುವ ದೇವರು. ಸಂತ ಪದದ ಅರ್ಥವೇ ಸಿದ್ದೇಶ್ವರ ಸ್ವಾಮೀಜಿಗಳು. ಸಿದ್ದೇಶ್ವರ ಸ್ವಾಮೀಜಿಗಳು ಬಾಲ್ಯದಲ್ಲೇ ಆಧ್ಯಾತ್ಮಿಕ ಭಾವ ಹೊಂದಿದ್ದರು. ನಮ್ಮ ಭೂಮಿಗೆ ಒಂದು ಬೊಗಸೆ ನೀರು ಕೊಡಿ ಎಂದು ಸಿದ್ದೇಶ್ವರ ಶ್ರೀಗಳ ಕೇಳಿದ್ದರು.
ಇದನ್ನೂ ಓದಿ: ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇದೆ ಎಂಬುದಕ್ಕೆ ಈ ಶಂಕುಸ್ಥಾಪನೆ ಸಾಕ್ಷಿ; ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ತಿರುಗೇಟು
ಸಿದ್ದೇಶ್ವರ ಶ್ರೀಗಳಿಗೆ ಸಮಾಜದ ಬಗ್ಗೆ ಕಳಕಳಿಯಿತ್ತು. ಸಿದ್ದೇಶ್ವರ ಶ್ರೀಗಳ ಬಹಳ ಇಂಗ್ಲಿಷ್ ಪಾಂಡಿತ್ಯವಿತ್ತು. ವನಶ್ರಿ ಮಠವನ್ನು ಜಯದೇವ ಸ್ವಾಮೀಜಿಗಳು ಬಹಳ ಕಷ್ಟಪಟ್ಟು ಕಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ವನಶ್ರಿ ಮಠ ಉತ್ತಮವಾಗಿ ಬೆಳೆಯಲಿದೆ. ತಮ್ಮ ತಮ್ಮ ಸಮುದಾಯ ಬೆಳವಣಿಗೆಗಾಗಿ ಎಲ್ಲರೂ ಸಂಘಟನೆ ಮಾಡುತ್ತಾರೆ. ಗಾಣಿಗ ಸಮುದಾಯದ ನಿಗಮ ಬೇಕು ಎಂದು ಕೇಳಿದ್ದೀರಿ. ಕೇವಲ ನಿಗಮ ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಸ್ಥಾನ ದೊರೆಯಲಿ. ನಿಮ್ಮ ಸಮಾಜದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಜೊತೆ ಮಾತನಾಡುತ್ತೇನೆ. ನಾನು ನಿಮ್ಮ ಸಮಾಜದ ಜೊತೆಗೆ ಇರುತ್ತೇನೆಂದು ಗಾಣಿಗ ಸಮುದಾಯಕ್ಕೆ ಭರವಸೆ ನೀಡಿದ್ದಾರೆ.
ಸಚಿವ ಸ್ಥಾನಕ್ಕೆ ಒತ್ತಾಯ
ಗಾಣಿಗ ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಲಾಗಿದೆ. ಸ್ವಾತಂತ್ರ್ಯ ಬಂದ ಬಳಿಕ ಕಾಂಗ್ರೆಸ್ ಆಡಳಿತದಲ್ಲಿ ಸಚಿವ ಸ್ಥಾನ ನೀಡಿಲ್ಲ. ನಮ್ಮ ಸಮಾಜಕ್ಕೆ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಾತಿನಿಧ್ಯ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಬಿ ಪಾಟೀಲ್ ಮತ್ತು ಶಾಸಕ ಯಶವಂತರಾಯಗೌಡ ಪಾಟೀಲ್ ನೇತೃತ್ವ ವಹಿಸಬೇಕೆಂದು ಒತ್ತಾಯಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.