AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವಲಗುಂದ ಕ್ಷೇತ್ರವನ್ನ ಸಿಎಂ ಸಿದ್ದರಾಮಯ್ಯಗೆ ದತ್ತು ನೀಡ್ತೇವೆ- ಶಾಸಕ ಕೋನರೆಡ್ಡಿ

ಧಾರವಾಡ ಜಿಲ್ಲೆಯ  ನವಲಗುಂದದ ಮಾಡಲ್ ಹೈಸ್ಕೂಲ್​ನಲ್ಲಿ ಆಯೋಜಿಸಿದ್ದ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಹಕ್ಕುಪತ್ರ ವಿತರಣೆ, ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ನವಲಗುಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಿದೆ ಎಂದು ಶಾಸಕ ಕೋನರೆಡ್ಡಿ(Konareddy) ಹೇಳಿದರು.

ನವಲಗುಂದ ಕ್ಷೇತ್ರವನ್ನ ಸಿಎಂ ಸಿದ್ದರಾಮಯ್ಯಗೆ ದತ್ತು ನೀಡ್ತೇವೆ- ಶಾಸಕ ಕೋನರೆಡ್ಡಿ
ಶಾಸಕ ಕೋನರೆಡ್ಡಿ
ಶಿವಕುಮಾರ್ ಪತ್ತಾರ್
| Updated By: ಕಿರಣ್ ಹನುಮಂತ್​ ಮಾದಾರ್|

Updated on: Feb 24, 2024 | 7:44 PM

Share

ಧಾರವಾಡ, ಫೆ.24: ಮಹದಾಯಿ ಯೋಜನೆಗೆ ಸಿಎಂ ಸಿದ್ದರಾಮಯ್ಯ(Siddaramaiah) ಬದ್ಧರಾಗಿದ್ದಾರೆ ಎಂದು ಶಾಸಕ ಕೋನರೆಡ್ಡಿ(Konareddy) ಹೇಳಿದರು. ಧಾರವಾಡ ಜಿಲ್ಲೆಯ  ನವಲಗುಂದದ ಮಾಡಲ್ ಹೈಸ್ಕೂಲ್​ನಲ್ಲಿ ಆಯೋಜಿಸಿದ್ದ ವಿವಿಧ ಯೋಜನೆಗಳ ಶಂಕುಸ್ಥಾಪನೆ, ಹಕ್ಕುಪತ್ರ ವಿತರಣೆ, ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ ಅವರು, ‘ನವಲಗುಂದ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಿದೆ. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಲು ಸಿಎಂ ಸಿದ್ದರಾಮಯ್ಯ ಅವರಿಗೆ ದತ್ತ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರಿಗೆ ನಿನ್ನೆ ಹುಷಾರ ಇರಲಿಲ್ಲ. ಆದರೂ ಬಡವರಿಗಾಗಿ ಅವರು ನವಲಗುಂದಕ್ಕೆ ಬಂದಿದ್ದಾರೆ. ಸುಮಾರು 200 ಕೋಟಿಗೂ ಅಧಿಕ ಕಾಮಗಾರಿಗೆ ಚಾಲನೆ ಕೊಡಲಿದ್ದಾರೆ ಎಂದರು. ಈಗಾಗಲೇ ಬೇಸಿಗೆ ಶುರುವಾಗಿದೆ, ನೀರಿನ ಕೊರತೆ ಇದ್ದು, ನಾವು ಗ್ಯಾರಂಟಿ ಯೋಜನೆ ಮೂಲಕ ಹಣ ಕೊಡುತ್ತಿದ್ದೇವೆ. ಆದರೆ, ಗ್ಯಾರಂಟಿಗಳನ್ನು ಕೆಲವರು ಟೀಕೆ ಮಾಡುತ್ತಿದ್ದಾರೆ. ನಾವು ಗ್ಯಾರಂಟಿ ಕೊಟ್ಟರೂ ಕೂಡ ಅಭಿವೃದ್ಧಿ ಮಾಡಿದ್ದೇವೆ.  ಇಡೀ ಕ್ಷೇತ್ರದಲ್ಲಿ ರಸ್ತೆ ಸುಧಾರಣೆ ಮಾಡಲು ಎರಡು ವರ್ಷ ಬೇಕು. ಅದನ್ನು ನಾವು ಅಭಿವೃದ್ಧಿ ಮಾಡ್ತೀವಿ ಎಂದಿದ್ದಾರೆ.

ಇದನ್ನೂ ಓದಿ:ಲೂಟಿ ಹೊಡೆದಿದ್ದಕ್ಕೇ ಅವರನ್ನು ಜನರು ತಿರಸ್ಕರಿಸಿದ್ದು: ಪ್ರಲ್ಹಾದ್​ ಜೋಶಿ ಹೇಳಿಕೆಗೆ ಸಿದ್ದರಾಮಯ್ಯ ಕೌಂಟರ್

ಮಹದಾಯಿ ಹೋರಾಟಗಾರರ ಮನವಿ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ

ಇನ್ನು ಸಿಎಂ ನವಲಗುಂದ ಪಟ್ಟಣದಲ್ಲಿ ಮಹದಾಯಿ ಹೋರಾಟಗಾರರ ಮನವಿ ಸ್ವೀಕಾರ ಮಾಡಿದರು. ಈ ವೇಳೆ ಹೋರಾಟಗಾರ ಸುಭಾಸಗೌಡ ಮಾತನಾಡಿ, ‘ಶಾಸಕ ಕೊನರಡ್ಡಿ ಹಾಗೂ ಕೇಂದ್ರ ಸಚಿವ ಜೋಶಿ ಮಹದಾಯಿ ಸಮಸ್ಯೆ ಇತ್ಯರ್ಥ ಮಾಡುವ ಮಾತನ್ನ‌ ಹೇಳಿದ್ದರು. ಆದರೆ, ಆಗಿಲ್ಲ. ನಾವು ಹೀಗೆಯೇ ಹೋರಾಟ‌ ಮಾಡುತ್ತಲೇ‌ ಇರಬೇಕಾ ಎಂದು ಸಿಎಂ ಬಳಿ ಹೇಳಿದರು. ಬಳಿಕ ಸಿದ್ದರಾಮಯ್ಯ,‘ಮಹದಾಯಿ ಇತ್ಯರ್ಥ ಮಾಡುವುದು ಕೇಂದ್ರದ ಕೈಯಲ್ಲಿ ಇದೆ. ನಾನು ನಿಮ್ಮ ಹೋರಾಟಕ್ಕೆ ಬೆಂಬಲ ನೀಡ್ತೆನೆ ಎಂದು ಹೇಳಿದರು.

ಸಾಂಕೇತಿಕವಾಗಿ 50 ನೂತನ ಬಸ್‌ಗಳಿಗೆ ಚಾಲನೆ ನೀಡಿದ ಸಿಎಂ

ನಂತರ ಸಾಂಕೇತಿಕವಾಗಿ ನೂತನ 50 ವಾಯವ್ಯ ಕರ್ನಾಟಕ ರಾಜ್ಯ ಸಾರಿಗೆ ಬಸ್‌ಗಳಿಗೆ ಚಾಲನೆ ನೀಡಿದರು. ಈ ವೇಳೆ ಸಚಿವರಾದ ರಾಮಲಿಂಗಾರೆಡ್ಡಿ, ಸಂತೋಷ್ ಲಾಡ್, ಕೆ.ಜೆ.ಜಾರ್ಜ್, ಹೆಚ್​.ಕೆ.ಪಾಟೀಲ್, ಶಾಸಕ ಎನ್​.ಹೆಚ್​.ಕೋನರೆಡ್ಡಿ ಸೇರಿದಂತೆ ಅನೇಕ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶ್ರಾವಣ ಮಾಸದಂದು ಶನಿವಾರ ಆಚರಣೆಯ ಹಿಂದಿನ ಮಹತ್ವ ತಿಳಿಯಿರಿ
ಶನಿ ಭಗವಾನ್, ಹನುಮಂತನ ಆರಾಧನೆಗೆ ಅತ್ಯಂತ ಶುಭಕರ ದಿನ
ಶನಿ ಭಗವಾನ್, ಹನುಮಂತನ ಆರಾಧನೆಗೆ ಅತ್ಯಂತ ಶುಭಕರ ದಿನ
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ