ತಂದೆ ನಾಗನಗೌಡ ಅಂತ್ಯಕ್ರಿಯೆಯಲ್ಲಿ ಭಾಗಿಯಾಗದ ಕುಮಾರಸ್ವಾಮಿ: ಕಾಲಾಯ ತಸ್ಮೈ ನಮಃ ಎಂದ ಜೆಡಿಎಸ್ ಶಾಸಕ ಶರಣಗೌಡ
ಜೆಡಿಎಸ್ನ ಮಾಜಿ ಶಾಸಕ ನಾಗನಗೌಡ ಕಂದಕೂರ್ ಅವರು ಜನವರಿ 28 ರಂದು ನಿಧನ ಹೊಂದಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಭಾಗವಹಿಸದ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಶರಣಗೌಡ ಕಂದಕೂರ, ಕಾಲಾಯ ತಸ್ಮೈ ನಮಃ ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ. ಸಮಯ ಬಂದಾಗ ನಾನು ಉತ್ತರ ಕೊಟ್ಟೇ ಕೊಡುತ್ತೇನೆ ಎಂದಿದ್ದಾರೆ.
ಯಾದಗಿರಿ, ಫೆ.24: ಮಾಜಿ ಶಾಸಕ ನಾಗನಗೌಡ (Nagana Gowda) ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರು ಭಾಗವಹಿಸದ ಬಗ್ಗೆ ಗುರುಮಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ (Sharanagouda Kandakur) ಅವರು ಕೊನೆಗೂ ಮೌನ ಮುರಿದಿದ್ದಾರೆ. ಕುಮಾರಸ್ವಾಮಿ ಅವರು ಯಾಕೆ ಭಾಗವಹಿಸಿಲ್ಲ ಅಂತಾ ಅವರನ್ನೇ ಕೇಳಬೇಕು. ಕಾಲಾಯ ತಸ್ಮೈ ನಮಃ, ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ. ಸಮಯ ಬಂದಾಗ ನಾನು ಉತ್ತರ ಕೊಟ್ಟೇ ಕೊಡುತ್ತೇನೆ ಎಂದಿದ್ದಾರೆ.
ಯಾದಗಿರಿಯಲ್ಲಿ ಮಾತನಾಡಿದ ಶರಣಗೌಡ ಕಂದಕೂರ, ನಮ್ಮ ತಂದೆಯವರು ನಿಧನರಾಗಿ 20 ದಿನಗಳು ಆದಮೇಲೆ ಕುಮಾರಸ್ವಾಮಿ ಅವರು ದೂರವಾಣಿ ಕರೆ ಮಾಡಿದ್ದರು. ಬಂದು ಭೇಟಿಯಾಗಿ ಬ್ರದರ್ ಅಂತ ಹೇಳಿದ್ದರು. ಬರುತ್ತೇನೆ ಸರ್ ಅಂತ ಹೇಳಿದ್ದೆ. ನಿಖಿಲ್ ಕುಮಾರಸ್ವಾಮಿ ಅವರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ ಎಂದರು.
ಇದನ್ನೂ ಓದಿ: ಮಂಡ್ಯ, ಹಾಸನ, ಕೋಲಾರ ಟಿಕೆಟ್ ಜೆಡಿಎಸ್ಗೆ ಫಿಕ್ಸ್; ಹೆಚ್ಡಿ ಕುಮಾರಸ್ವಾಮಿ, ಅಮಿತ್ ಶಾ ಮಾತುಕತೆ
ರಾಜಕೀಯ ಹೊರತು ಆತ್ಮೀಯ ಸ್ನೇಹಿತರು, ಸಹೋದರತೆ ಮನೋಭಾವದಿಂದ ನಿಖಿಲ್ ಅವರ ಜೊತೆ ಇದ್ದೇವೆ. ನಮ್ಮ ತಂದೆ ಅವರ ಅಂತಿಮಯಾತ್ರೆಯಲ್ಲಿ ಕುಮಾರಸ್ವಾಮಿ ಅವರು ಯಾಕೇ ಭಾಗವಹಿಸಿಲ್ಲ ಅಂತಾ ಅವರನ್ನೇ ಕೇಳಬೇಕು. ಅದಕ್ಕೆ ನಾನೇನು ಹೇಳಲಿ? ಕಾಲಾಯ ತಸ್ಮೈ ನಮಃ, ಕಾಲವೇ ಉತ್ತರ ಕೊಡುತ್ತೆ ಎಂದರು.
ನಮ್ಮ ತಂದೆ ನಾಗನಗೌಡ ಹಾಗೂ ನಮ್ಮ ಇಡೀ ಕುಟುಂಬ ಜೆಡಿಎಸ್ ಪಕ್ಷದ ಸಂಘಟನೆಗಾಗಿ ಇಡೀ ಜೀವನವನ್ನೇ ಸವಿಸಿದ್ದೇವೆ. ಇದಕ್ಕೆ ಖಂಡಿತವಾಗಿ ಕಾಲವೇ ಉತ್ತರ ನೀಡುತ್ತೇನೆ. ಆ ಸಮಯ ಬಂದಾಗ ನಾನು ಉತ್ತರ ಕೊಟ್ಟೆ ಕೊಡುತ್ತೇನೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ