ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಇದೆ: ಲಕ್ಷ್ಮಣ ಸವದಿ, ಶಾಸಕ

ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಒಂದೂವರೆ ಲಕ್ಷ ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಇದೆ: ಲಕ್ಷ್ಮಣ ಸವದಿ, ಶಾಸಕ

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 25, 2024 | 5:22 PM

ಅಥಣಿ ಶಿವಯೋಗಿಗಳ ಪುಣ್ಯಭೂಮಿಯಾಗಿರುವುದರಿಂದ ಇಲ್ಲಿಂದಲೇ ಪ್ರಚಾರ ಕಾರ್ಯ ಆರಂಭಿಸಿರುವುದಾಗಿ ಹೇಳುವ ಶಾಸಕ; ಚುನಾವಣೆ ಯಾವುದೇ ಆಗಿರಲಿ, ಕಾರ್ಯಕರ್ತರು ಬಹು ದೊಡ್ಡ ಕಾರ್ಯ ನಿರ್ವಹಿಸುತ್ತಾರೆ, ಉಮೇದುವಾರನ ಸಂಕಲ್ಪ ಸಿದ್ಧಿಯಾಗಬೇಕಾದರೆ ಅದು ಕಾರ್ಯಕರ್ತರಿಂದ ಮಾತ್ರ ಸಾಧ್ಯ ಎನ್ನುತ್ತಾರೆ.

ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮತ್ತು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಪುತ್ರಿ ಪ್ರಿಯಾಂಕಾ ಜಾರಕಿಹೊಳಿ (Priyanka Jarkiholi) ಪರ ಅಥಣಿ ಶಾಸಕ ಲಕ್ಷ್ಮಣ ಸವದಿ (Laxman Savadi) ಪ್ರಚಾರ ಆರಂಭಿಸಿದ್ದಾರೆ. ಒಂದು ಉತ್ತಮ ಯೋಜನೆಯ ಮೂಲಕ ಅವರು ಪ್ರಚಾರ ಅರಂಭಿಸಿರುವುದು ಗಮನಾರ್ಹ. ಸವದಿಯವರೇ ಹೇಳುವ ಪ್ರಕಾರ ಮೊದಲಿಗೆ ಅವರು ಚಿಕ್ಕೋಡಿ ಲೋಕಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆಗಳನ್ನು ನಡೆಸಲಿದ್ದಾರೆ. ಕಾರ್ಯಕರ್ತರಿಗೆ ಸಲಹೆ ಸೂಚನೆಗಳನ್ನು ನೀಡಿದ ಬಳಿಕ ಅವರು ಸಾರ್ವಜನಿಕ ಸಬೆಗಳನ್ನು ನಡೆಸುತ್ತಾರಂತೆ. ಅಥಣಿ ಶಿವಯೋಗಿಗಳ ಪುಣ್ಯಭೂಮಿಯಾಗಿರುವುದರಿಂದ ಇಲ್ಲಿಂದಲೇ ಪ್ರಚಾರ ಕಾರ್ಯ ಆರಂಭಿಸಿರುವುದಾಗಿ ಹೇಳುವ ಶಾಸಕ; ಚುನಾವಣೆ ಯಾವುದೇ ಆಗಿರಲಿ, ಕಾರ್ಯಕರ್ತರು ಬಹು ದೊಡ್ಡ ಕಾರ್ಯ ನಿರ್ವಹಿಸುತ್ತಾರೆ, ಉಮೇದುವಾರನ ಸಂಕಲ್ಪ ಸಿದ್ಧಿಯಾಗಬೇಕಾದರೆ ಅದು ಕಾರ್ಯಕರ್ತರಿಂದ ಮಾತ್ರ ಸಾಧ್ಯ ಎನ್ನುತ್ತಾರೆ.

ಹಾಗೆ ಮಾತಾಡುತ್ತಲೇ ಸವದಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಫಲಿತಾಂಶವನ್ನು ಹೇಳಿಬಿಡುತ್ತಾರೆ! ವಿಧಾನ ಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದ ಮತದಾರ ಪ್ರದರ್ಶಿಸಿದ ದೋರಣೆ ಗಮನಿಸಿದರೆ ಪ್ರಿಯಾಂಕಾ ಕನಿಷ್ಟ ಒಂದೂವರೆ ಲಕ್ಷ ಮತಗಳ ಅಂತರದಿಂದ ಜಯಶಾಲಿಯಾಗುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಸವದಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:     ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನನ್ನು​ ಗೆಲ್ಲಿಸುವ ಹೊಣೆ ಜಾರಕಿಹೊಳಿಗೆ, ಪ್ರಿಯಾಂಕಾರನ್ನ ಗೆಲ್ಲಿಸುವ ಜವಾಬ್ದಾರಿ ಹೆಬ್ಬಾಳ್ಕರ್​ಗೆ !