Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಮುಂಭಾಗದ ಪೋಸ್ಟರ್ ನಲ್ಲಿ ಲಕ್ಷ್ಮಣ ಸವದಿ ಫೋಟೋ ಇಲ್ಲದಿರುವುದು ಪ್ರಮಾದವೋ?

ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ ಮುಂಭಾಗದ ಪೋಸ್ಟರ್ ನಲ್ಲಿ ಲಕ್ಷ್ಮಣ ಸವದಿ ಫೋಟೋ ಇಲ್ಲದಿರುವುದು ಪ್ರಮಾದವೋ?

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 20, 2024 | 11:21 AM

ಪೋಸ್ಟರ್ ಮೇಲ್ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕ ಫೋಟೋಗಳಿದ್ದರೆ, ಕೆಳಗಿನ ಸಾಲಿನಲ್ಲಿ ಪ್ರಕಾಶ್ ಹುಕ್ಕೇರಿ ಮತ್ತು ಬೇರೆ ಕೆಲವು ಸ್ಥಳೀಯ ನಾಯಕರ ಭಾವಚಿತ್ರಗಳಿವೆ, ಸವದಿ ಮಾತ್ರ ನಾಪತ್ತೆ!

ಬೆಳಗಾವಿ: ಹೀಗೂ ಆಗುತ್ತಾ ಅಥವಾ ಹಾಗೆ ಉದ್ದೇಶಪೂರ್ವಕವಾಗಿ ಹಾಗೆ ಮಾಡಲಾಗುತ್ತಾ? ವಿಷಯ ಏನು ಅನ್ನೋದು ಇಲ್ಲಿರುವ ಪೋಸ್ಟರ್ ನೋಡಿದರೆ ಗೊತ್ತಾಗುತ್ತದೆ. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿ (Chikkodi District Congress Committee office) ಮುಂಭಾಗದಲ್ಲಿರುವ ಪೋಸ್ಟರ್ ನಲ್ಲ್ಲಿ ಪಕ್ಷದ ರಾಷ್ಟ್ರೀಯ, ರಾಜ್ಯದ ಮತ್ತು ಸ್ಥಳೀಯ ನಾಯಕರ ಫೋಟೋಗಳಿವೆ ಆದರೆ, ಈ ಭಾಗದ ಪ್ರಮುಖ ನಾಯಕ ಮತ್ತು ಅಥಣಿ ಶಾಸಕ ಲಕ್ಷ್ಮಣ ಸವದಿ (Laxman Savadi) ಅವರ ಫೋಟೋ ಇಲ್ಲ. ಪೋಸ್ಟರ್ ಮೇಲ್ಭಾಗದಲ್ಲಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕ ಫೋಟೋಗಳಿದ್ದರೆ, ಕೆಳಗಿನ ಸಾಲಿನಲ್ಲಿ ಪ್ರಕಾಶ್ ಹುಕ್ಕೇರಿ ಮತ್ತು ಬೇರೆ ಕೆಲವು ಸ್ಥಳೀಯ ನಾಯಕರ ಭಾವಚಿತ್ರಗಳಿವೆ, ಸವದಿ ಮಾತ್ರ ನಾಪತ್ತೆ!

ಇದು ಕಣ್ತಪ್ಪಿನಿಂದ ಆಗಿದೆಯೋ ಅಥವಾ ಜಿಲ್ಲಾ ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಅವರನ್ನು ಕಡೆಗಣಿಸಿದೆಯೋ ಅಂತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೇ ಹೇಳಬೇಕು. ಸವದಿ ವಲಸಿಗ ನಿಜ, ಆದರೆ ಅವರು ಕಾಂಗ್ರೆಸ್ ಸೇರಿದಾಗಿನಿಂದ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ ಮತ್ತು ಜಗದೀಶ್ ಶೆಟ್ಟರ್ ಅವರಂತೆ ಚಂಚಲ ಸ್ವಭಾವ ಪ್ರದರ್ಶಿಸಿಲ್ಲ. ಲೋಕಸಭಾ ಚುನಾವಣೆ ತಲೆಮೇಲಿರುವಾಗ ಇಂಥ ಸಣ್ಣಪುಟ್ಟ ಪ್ರಮಾದಗಳು ಪಕ್ಷಕ್ಕೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ಇರುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ವಾಪಸ್ಸು ಹೋಗಲು ನಂಗೇನು ಹುಚ್ಚಾ? ಲಕ್ಷ್ಮಣ ಸವದಿ, ಅಥಣಿ ಶಾಸಕ