ಎಲ್ಲ 28 ಕ್ಷೇತ್ರ ಗೆಲ್ಲುವ ಟಾರ್ಗೆಟ್ ರಾಜ್ಯ ಬಿಜೆಪಿ ನಾಯಕರಿಗೆ ನೀಡಲಾಗಿದೆ ಹಾಗಾಗೇ ಅವರೆಲ್ಲ ಹತಾಶರಾಗಿದ್ದಾರೆ: ಲಕ್ಷ್ಮಣ ಸವದಿ

ಎಲ್ಲ 28 ಕ್ಷೇತ್ರ ಗೆಲ್ಲುವ ಟಾರ್ಗೆಟ್ ರಾಜ್ಯ ಬಿಜೆಪಿ ನಾಯಕರಿಗೆ ನೀಡಲಾಗಿದೆ ಹಾಗಾಗೇ ಅವರೆಲ್ಲ ಹತಾಶರಾಗಿದ್ದಾರೆ: ಲಕ್ಷ್ಮಣ ಸವದಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Feb 24, 2024 | 6:09 PM

28 ಸ್ಥಾನ ಗೆಲ್ಲದಿದ್ದರೆ ರಾಜ್ಯ ಬಿಜೆಪಿಯಲ್ಲಿ ಏನಾದರೂ ಬದಲಾವಣೆ ಆಗಲಿವೆಯೇ ಎಂದು ಪತ್ರಕರ್ತರು ಕೇಳಿದಾಗ ಬದಲಾವಣೆ ಅಗಲು ಅಲ್ಲಿ ಉಳಿದಿರೋದಾದರೂ ಏನು? ಯಾರನ್ನು ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ ಅಂತ ವ್ಯಂಗ್ಯವಾಗಿ ಹೇಳಿದರು. ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡು ಸವದಿ ಹಾಗೆ ಹೇಳಿದರೋ ಅಥವಾ ಅವರ ಟಾರ್ಗೆಟ್ ಬೇರೆ ನಾಯಕರಾಗಿದ್ದರೋ ಗೊತ್ತಾಗಲಿಲ್ಲ.

ವಿಜಯಪುರ: ರಾಜ್ಯದ ಬಿಜೆಪಿ ನಾಯಕರು ಭ್ರಮನಿರನಗೊಂಡಿದ್ದಾರೆ, ಹತಾಶೆಯಲ್ಲಿದ್ದಾರೆ ಎಂದು ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ (Laxman Savadi) ಹೇಳಿದರು. ನಗರದಲ್ಲಿಂದು ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸವದಿ ದೆಹಲಿಯ ವರಿಷ್ಠರು (BJP high command) ರಾಜ್ಯ ಬಿಜೆಪಿ ನಾಯಕರಿಗೆ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲುವ ಟಾರ್ಗೆಟ್ ನೀಡಿದ್ದಾರೆ ಹಾಗಾಗೇ ಅವರೆಲ್ಲ ಹತಾಶರಾಗಿದ್ದಾರೆ (desperate), ಅದೇ ಹತಾಶೆಯಲ್ಲೇ ಎಲ್ಲ ಸ್ಥಾನಗಳನ್ನು ಗೆಲ್ಲುತ್ತೇವೆ ಅನ್ನುತ್ತಿದ್ದಾರೆ, ಪಕ್ಕದ ರಾಜ್ಯದ ಎರಡು ಸೀಟುಗಳನ್ನು ಸೇರಿಸಿಕೊಂಡು ಎಲ್ಲ 30 ಸ್ಥಾನ ಗೆಲ್ತೀವಿ ಅಂತ ಅವರು ಹೇಳಿದರೂ ಆಶ್ಚರ್ಯವಿಲ್ಲ ಎಂದು ಸವದಿ ಹೇಳಿದರು. 28 ಸ್ಥಾನ ಗೆಲ್ಲದಿದ್ದರೆ ರಾಜ್ಯ ಬಿಜೆಪಿಯಲ್ಲಿ ಏನಾದರೂ ಬದಲಾವಣೆ ಆಗಲಿವೆಯೇ ಎಂದು ಪತ್ರಕರ್ತರು ಕೇಳಿದಾಗ ಬದಲಾವಣೆ ಅಗಲು ಅಲ್ಲಿ ಉಳಿದಿರೋದಾದರೂ ಏನು? ಯಾರನ್ನು ಎಲ್ಲಿ ಕೂರಿಸಬೇಕೋ ಅಲ್ಲಿ ಕೂರಿಸಿದ್ದಾರೆ ಅಂತ ವ್ಯಂಗ್ಯವಾಗಿ ಹೇಳಿದರು. ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ದೃಷ್ಟಿಯಲ್ಲಿಟ್ಟುಕೊಂಡು ಸವದಿ ಹಾಗೆ ಹೇಳಿದರೋ ಅಥವಾ ಅವರ ಟಾರ್ಗೆಟ್ ಬೇರೆ ನಾಯಕರಾಗಿದ್ದರೋ ಗೊತ್ತಾಗಲಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ