ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಬಸ್​ಗಳೇ ಇಲ್ಲ: ನೂರಾರು ಪ್ರಯಾಣಿಕರು ಪರದಾಟ

ಸವದತ್ತಿ ಯಲ್ಲಮ್ಮನಗುಡ್ಡಕ್ಕೆ ಬಸ್​ಗಳೇ ಇಲ್ಲ: ನೂರಾರು ಪ್ರಯಾಣಿಕರು ಪರದಾಟ

ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: Feb 24, 2024 | 7:42 PM

ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರಿದ್ದರು ಸವದತ್ತಿ ಯಲ್ಲಮ್ಮನಗುಡ್ಡ ಕಡೆಗೆ ಬಸ್​ಗಳೆ ಇಲ್ಲ. ದಾವಣಗೆರೆ, ಹಾವೇರಿ ಬೇರೆ ಭಾಗಗಳಿಂದ ಬಂದು ನಾಲ್ಕೈದು ಗಂಟೆ ಕಾದರು ಬಸ್ ಬಂದಿಲ್ಲ. ನಿಮಗ್ಯಾರು ಬಾ ಅಂದಿದ್ದರು, ಬಸ್ ಇಲ್ಲ ಎಲ್ಲಿಂದ ಬಿಡೋದು ಅಂತ ಕಂಟ್ರೋಲರ್ ಜನರ ಮೇಲೆನೇ ಧಮಕಿ ಹಾಕುತ್ತಾರೆ.

ಧಾರವಾಡ, ಫೆಬ್ರವರಿ 24: ಭಾರತ ಹುಣ್ಣಿಮೆ ಎಫೆಕ್ಟ್ ಹಿನ್ನೆಲೆ ಬಸ್ ಇಲ್ಲದೆ ಜನರು ಪರದಾಡಿದ್ದಾರೆ. ಧಾರವಾಡ ಹೊಸ ಬಸ್ ನಿಲ್ದಾಣದಲ್ಲಿ ನೂರಾರು ಪ್ರಯಾಣಿಕರಿದ್ದರು ಸವದತ್ತಿ (Savadatti) ಯಲ್ಲಮ್ಮನಗುಡ್ಡ ಕಡೆಗೆ ಬಸ್​ಗಳೇ ಇಲ್ಲ. ದಾವಣಗೆರೆ, ಹಾವೇರಿ ಬೇರೆ ಭಾಗಗಳಿಂದ ಬಂದು ನಾಲ್ಕೈದು ಗಂಟೆ ಕಾದರು ಬಸ್ ಬಂದಿಲ್ಲ. ನಿಮಗ್ಯಾರು ಬಾ ಅಂದಿದ್ದರು, ಬಸ್ ಇಲ್ಲ ಎಲ್ಲಿಂದ ಬಿಡೋದು ಅಂತ ಕಂಟ್ರೋಲರ್ ಜನರ ಮೇಲೆನೇ ಧಮಕಿ ಹಾಕುತ್ತಾರೆ. ಬಂದ ಮೂರ್ನಾಲ್ಕು ಬಸ್​ಗಳು ಪುಲ್ ಆಗಿವೆ. ಒಂದು ಬಸ್​​ಲ್ಲಿ 100 ರಿಂದ 120 ಪ್ರಯಾಣಿಕರಿರುತ್ತಾರೆ. ಭಾರತ ಹುಣ್ಣಿಮೆ ಇದೆ ಯಲ್ಲಮ್ಮನ ಗುಡ್ಡಕ್ಕೆ ಲಕ್ಷಾಂತರ ಜನ ಬರುತ್ತಾರೆ. ಹಾಗಾಗಿ ವ್ಯವಸ್ಥೆ ಮಾಡಬೇಕು ಅನ್ನುವ ಮುಂಜಾಗ್ರತೆ ಸಾರಿಗೆ ಸಂಸ್ಥೆ ಇಲ್ಲದಂತಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.