AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ನಡೆಸುತ್ತಿರೋದು ಒಂದು ದೊಡ್ಡ ಶೈಕ್ಷಣಿಕ ಹಬ್ಬ: ಉಮೇಶ್, ಸಪ್ತಗಿರಿ ಎನ್​ಪಿಎಸ್ ವಿಶ್ವವಿದ್ಯಾಲಯ

ಟಿವಿ9 ನಡೆಸುತ್ತಿರೋದು ಒಂದು ದೊಡ್ಡ ಶೈಕ್ಷಣಿಕ ಹಬ್ಬ: ಉಮೇಶ್, ಸಪ್ತಗಿರಿ ಎನ್​ಪಿಎಸ್ ವಿಶ್ವವಿದ್ಯಾಲಯ

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 07, 2025 | 3:07 PM

ಸಪ್ತಗಿರಿ ಎನ್​ಪಿಎಸ್ ವಿಶ್ವವಿದ್ಯಾಲಯದ ಬಗ್ಗೆ ಮಾತಾಡಿದ ಉಮೇಶ್, ತಮ್ಮ ಶೈಕ್ಷಣಿಕ ಸಂಸ್ಥೆಗಳ ಟ್ಯಾಗ್ ಲೈನ್ Unmatched Excellence, Unlimited Potential ಅಂತಿದೆ, ಅದಕ್ಕೆ ತಕ್ಕನಾಗೇ ತಾವು ಮೆಡಿಕಲ್, ಇಂಜಿನೀಯರಿಂಗ್, ಮ್ಯಾನೇಜ್ಮೆಂಟ್ ಮತ್ತ್ತು ಸ್ಟ್ರೀಮ್​ಗಳಲ್ಲಿ ಶಿಕ್ಷಣವನ್ನು ಒದಗಿಸುತ್ತಿದ್ದೇವೆ, ವಿದ್ಯಾರ್ಥಿಗಳು ಮತ್ತು ಪೋಷಕರು ಒಮ್ಮೆ ತಮ್ಮ ಕ್ಯಾಂಪಸ್​​ಗೆ ಭೇಟಿ ನೀಡಿ ಶಿಕ್ಷಣದ ಗುಣಮಟ್ಟದ ಬಗ್ಗೆ ತಿಳಿದುಕೊಳ್ಳಲಿ ಅಂತ ಮನವಿ ಮಾಡಿದರು.

ಬೆಂಗಳೂರು, ಏಪ್ರಿಲ್ 5: ನಗರ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಟಿವಿ9 ನೆಟ್ವರ್ಕ್ ಆಯೋಜಿಸಿರುವ ಮೂರು-ದಿನಗಳ ಎಜುಕೇಶನ್ ಎಕ್ಪ್​ಪೋ ನಲ್ಲಿ ಇವತ್ತು ಭಾರೀ ಜನಸಾಗರ. ನಮ್ಮ ಪ್ರತಿನಿಧಿಯೊಂದಿಗೆ ಸಪ್ತಗಿರಿ ಎನ್​ಪಿಎಸ್ ಯೂನಿವರ್ಸಿಟಿಯ ಉಮೇಶ್ ಅನ್ನುವವರು ಮಾತಾಡಿದ್ದು, ಟಿವಿ9 ನೆಟ್ವರ್ಕ್ ಕೇವಲ ಎಜುಕೇಷನ್ ಎಕ್ಸ್​ಪೋ ನಡೆಸುತ್ತಿಲ್ಲ, ಒಂದು ಮಹಾ ಶೈಕ್ಷಣಿಕ ಹಬ್ಬವನ್ನೇ ಅಯೋಜಿಸಿದೆ, ಬೆಂಗಳೂರಿನ ಎಲ್ಲ ಕಾಲೇಜು ಮತ್ತು ಯೂನಿವರ್ಸಿಟಿಗಳನ್ನು ಒಂದೇ ಸೂರಿನಡಿ ತರೋದು ಸಾಮಾನ್ಯ ಸಂಗತಿಯಲ್ಲ, ಇದರಿಂದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:   TV9 Education Summit 2025: CET ಪರೀಕ್ಷೆ ಬಗ್ಗೆ ಭಯ ಬೇಡ; ಟಿವಿ9 ಎಜುಕೇಷನ್ EXPOದಲ್ಲಿ ತಜ್ಞರು ನೀಡಿದ ಸಲಹೆ ಇಲ್ಲಿದೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Apr 05, 2025 05:29 PM