ರಾಜ್ಯಸರ್ಕಾರದ ವಿರುದ್ಧ ಅಧಿಕೃತವಾಗಿ ಸಮರ ಸಾರಿದ್ದೇನೆ, ಇನ್ನು ಸುಮ್ಮನಿರಲ್ಲ: ಹೆಚ್ ಡಿ ಕುಮಾರಸ್ವಾಮಿ
ದೇವೇಗೌಡರ ಕುಟುಂಬ ದ್ವೇಷದ ರಾಜಕಾರಣಕ್ಕೆ ಗುರಿಯಾಗುವುದು, ಹಿಂಸೆ ಅನುಭವಿಸುವುದು ಹೊಸತೇನಲ್ಲ, ಮಾಧ್ಯಮಗಳು ಸಹ ನನ್ನ ಜಮೀನು ಸರ್ವೇ ನಡೆಸಿದ್ದನ್ನು ತೋರಿಸಿದ್ದಾರೆ, ಅದಕ್ಕೆ ತನ್ಮ ಅಭ್ಯಂತರವೇನೂ ಇಲ್ಲ, ತಮ್ಮ ಹೆಸರಲ್ಲಿರೋದೇ 40 ಎಕರೆ ಜಮೀನು, ಅದರೆ 71 ಎಕರೆ ಗೋಮಾಳ ಜಮೀನು ಒತ್ತುವರಿಯಾಗಿದೆ ಅಂತ ಅರೋಪ ಮಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು, ಏಪ್ರಿಲ್ 5: ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು, 40 ವರ್ಷಗಳ ಹಿಂದೆ ತನು ಖರೀದಿಸಿದ ಜಮೀನ್ನು ಒತ್ತುವರಿ ಮಾಡಿಕೊಂಡಿದ್ದೇನೆ ಅಂತ ಸರ್ಕಾರ ಸರ್ವೇ ಮಾಡಿಸಿದೆ, ಒಬ್ಬ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಪ್ರಧಾನಿಯ ಮಗನಾಗಿರುವ ತನಗೆ ಸರ್ಕಾರೀ ಜಮೀನು ಒತ್ತುವರಿ ಮಾಡಿಕೊಳ್ಳುವ ಅವಶ್ಯಕತೆಯಿದೆಯೇ ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತನ್ನ ವಿರುದ್ಧ ರಾಜಕೀಯ ದ್ವೇಷ ಸಾಧಿಸುತ್ತಿದ್ದಾರೆ, ಇಷ್ಟು ದಿನ ಸುಮ್ಮನಿದ್ದೆ, ಆದರೆ ಈಗ ಅವರ ವಿರುದ್ಧ ಯುದ್ದ ಸಾರಿರುವೆನೆಂದು ಮಾಧ್ಯಮಗಳ ಮೂಲಕ ಹೇಳುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: ಮುಸ್ಲಿಮರ ಮೀಸಲಾತಿ ಬಗ್ಗೆ ಜೆಡಿಎಸ್ ನಿಲುವೇನು? ಕೊನೆಗೂ ಸ್ಪಷ್ಟನೆ ನೀಡಿದ ಹೆಚ್ಡಿ ಕುಮಾರಸ್ವಾಮಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ