ನಮ್ಮ ಕಾರ್ಯಕರ್ತನ ಕುಟುಂಬಕ್ಕೆ ಪೊನ್ನಣ್ಣ ನೀಡುವ ಭಿಕ್ಷೆಯ ಅಗತ್ಯವಿಲ್ಲ: ಪ್ರತಾಪ್ ಸಿಂಹ
ಪೋಲೀಸರು ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿದ್ದಾರೆ, ಇಂಥ ಘಟನೆಗಳು ನಡೆದಾಗ ಅವರನ್ನು ಟ್ರಾನ್ಸಫರ್ ಇಲ್ಲವೇ ಸಸ್ಪೆಂಡ್ ಮಾಡುತ್ತಾರೆ, ಆವರಾದರೂ ಏನು ಮಾಡಿಯಾರು? ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡುವ ಸನ್ನಿವೇಶ ಬೇಕು, ಮಿನಿಟ್ಸ್ ವ್ಯವಸ್ಥೆಯನ್ನು ತೆಗೆದುಹಾಕಿ ಪೊಲೀಸ್ ಎಸ್ಟ್ಯಾಬ್ಲಿಷ್ಮೆಂಟ್ ಬೋರ್ಡನ್ನು ಸಕ್ರಿಯಗೊಳಿಸಿ ಅಂತ ತಮ್ಮ ಹಿಂದಿನ ಸರ್ಕಾರಕ್ಕೆ ತಿಳಿಸಿದ್ದೆ ಎಂದು ಪ್ರತಾಪ್ ಹೇಳಿದರು.
ಮಡಿಕೇರಿ, ಏಪ್ರಿಲ್ 5: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಸಾವಿನ ವಿರುದ್ಧ ಬಿಜೆಪಿ ಕಾರ್ಯಕರ್ತರು ಉಗ್ರ ಪ್ರತಿಭಟನೆ ಮುಂದುವರಿಸಿದ್ದಾರೆ. ಕುಶಲನಗರದಲ್ಲಿ ಮಾತಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಸ್ಥಳೀಯ ಶಾಸಕ ಎಎಸ್ ಪೊನ್ನಣ್ಣ (AS Ponnanna) ಮೇಲೆ ಹರಿಹಾಯ್ದರು. ತನ್ನ ಸಾವಿಗೆ ಯಾರು ಕಾರಣ ವಿನಯ್ ಸ್ಪಷ್ಟವಾಗಿ ಬರೆದಿದ್ದಾರೆ, ಪೊನ್ನಣ್ಣ ಸಹಾಯದ ರೂಪದಲ್ಲಿ ವಿನಯ್ ಕುಟುಂಬಕ್ಕೆ ನೀಡುವ ಭಿಕ್ಷೆ ಬೇಕಿಲ್ಲ, ಪೊನ್ನಣ್ಣ ದುಡ್ಡು ಹೇಗೆ ಸಂಪಾದನೆ ಮಾಡಿದ್ದು ಅಂತ ಚೆನ್ನಾಗಿ ಗೊತ್ತು, ಸಾರ್ವಜನಿಕರಿಂದ ಒಂದೊಂದು ರೂಪಾಯಿ ತಮ್ಮ ಕುಟುಂಬಕ್ಕೆ ನೆರವಾಗಿ ಅಂತ ವಿನಯ್ ಹೇಳಿದ್ದಾರೆ ಎಂದ ಪ್ರತಾಪ್ ಹೇಳಿದರು.
ಇದನ್ನೂ ಓದಿ: ಮುಸ್ಲಿಮರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ಪ್ರತಾಪ್ ಸಿಂಹ ವಿರುದ್ಧ ಎಫ್ಐಆರ್ ದಾಖಲು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos