Sign In

By signing in or creating an account, you agree with Associated Broadcasting Company's Terms & Conditions and Privacy Policy.

VIDEO: ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್

VIDEO: ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್

ಝಾಹಿರ್ ಯೂಸುಫ್
|

Updated on: Apr 05, 2025 | 11:51 AM

IPL 2025 LSG vs MI: ಲಕ್ನೋದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 203 ರನ್​ ಕಲೆಹಾಕಿದೆ. ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 20 ಓವರ್​ಗಳಲ್ಲಿ 191 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಲಕ್ನೋ ಪಡೆ 12 ರನ್​ಗಳ ಗೆಲುವು ದಾಖಲಿಸಿದೆ.

ಲಕ್ನೋನಲ್ಲಿ ನಡೆದ ಐಪಿಎಲ್​ನ 16ನೇ ಪಂದ್ಯವು ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಯುವ ದಾಂಡಿಗ ತಿಲಕ್ ವರ್ಮಾ ಅವರನ್ನು ರಿಟೈರ್ಡ್ ಔಟ್ ಆಗಿ ಹೋಗುವಂತೆ ಸೂಚಿಸಿದ್ದು ಅಚ್ಚರಿಗೆ ಕಾರಣವಾಗಿತ್ತು.

23 ಎಸೆತಗಳಲ್ಲಿ 25 ರನ್ ಬಾರಿಸಿದ್ದ ತಿಲಕ್ ವರ್ಮಾ ಅವರನ್ನು ಪಾಂಡ್ಯ 19ನೇ ಓವರ್​ ವೇಳೆ ಡಗೌಟ್​ಗೆ ತೆರಳುವಂತೆ ಸೂಚಿಸಿದರು. ಅದರಂತೆ ತಿಲಕ್ ವರ್ಮಾ ತಮ್ಮ ಇನಿಂಗ್ಸ್ ಅನ್ನು ಅರ್ಧದಲ್ಲೇ ಕೊನೆಗೊಳಿಸಿ ಪೆವಿಲಿಯನ್​ಗೆ ಹಿಂತಿರುಗಿದ್ದರು.

ತಿಲಕ್ ವರ್ಮಾ ಔಟಾಗದೇ ಪೆವಿಲಿಯನ್​ನತ್ತ ಬರುತ್ತಿದ್ದರೆ, ಅತ್ತ ಡಗೌಟ್​ನಲ್ಲಿದ್ದ ಸೂರ್ಯಕುಮಾರ್ ಯಾದವ್ ಪಾಂಡ್ಯ ನಡೆಗೆ ಅಸಮಾಧಾನ ಹೊರಹಾಕಿದರು.
ಸೂರ್ಯಕುಮಾರ್ ಯಾದವ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಎದ್ದು ಬಂದ ಮುಂಬೈ ಇಂಡಿಯನ್ಸ್ ಕೋಚ್ ಮಹೇಲ ಜಯವರ್ಧನೆ ಮನವೊಲಿಸುವ ಪ್ರಯತ್ನ ಮಾಡಿದರು. ಇದಾಗ್ಯೂ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್ ತಂಡದ ನಾಯಕನ ನಡೆಯಿಂದ ಸಂತುಷ್ಟರಾಗಿರಲಿಲ್ಲ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ.