ಡ್ರೆಸ್ ಮಾಡಿಕೊಂಡು ಕಾರಲ್ಲಿ ಸುತ್ತೋದು ಬಿಟ್ಟರೆ ಪೊನ್ನಣ್ಣ ಮತ್ತು ಮಂಥರ್ ಗೌಡಗೆ ಬೇರೇನೂ ಗೊತ್ತಿಲ್ಲ: ಪ್ರತಾಪ್ ಸಿಂಹ
ಎಫ್ಐಅರ್ ನಲ್ಲಿ ಪೊನ್ನನ್ಣ ಮತ್ತು ಮಂಥರ್ ಗೌಡ ಹೆಸರು ಸೇರಿಸಿದ ಬಳಿಕವೇ ವಿನಯ್ ಸೋಮಯ್ಯ ಅವರ ಅಂತಿಮ ಸಂಸ್ಕಾರ ನಡೆಸಬೇಕೆಂದು ವಿನಯ್ ಕುಟುಂಬಕ್ಕೆ ಮನವಿ ಮಾಡುತ್ತೇನೆ, ಹಿಂದೆ 2015ರಲ್ಲಿ ಇದೇ ತೆರನಾದ ಸಾವೊಂದು ಮೈಸೂರಲ್ಲಿ ಸಂಭವಿಸಿದಾಗ ಸರ್ಕಾರದಿಂದ ಪರಿಹಾರ ಸಿಕ್ಕ ನಂತರವೇ ಅಂತಿಮ ಸಂಸ್ಕಾರ ಮಾಡಿಸಿದ್ದೆ ಎಂದು ಪ್ರತಾಪ್ ಸಿಂಹ ಹೇಳಿದರು.
ಮಡಿಕೇರಿ ಏಪ್ರಿಲ್ 4: ಸಾವಿಗೆ ಶರಣಾದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ಟಿವಿ9ನೊಂದಿಗೆ ಮಾತಾಡಿದ ಈ ಭಾಗದ ಮಾಜಿ ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ಶಾಸಕರಾದ ಎಎಸ್ ಪೊನ್ನಣ್ಣ ಮತ್ತು ಮಂಥರ್ ಗೌಡ ಅವರನ್ನು ತೊಲಗಿಸದ ಹೊರತು ಜಿಲ್ಲೆಗೆ ನೆಮ್ಮದಿ ಇಲ್ಲ ಎಂದು ರೋಷದಲ್ಲಿ ಹೇಳಿದರು. ನೀಟಾಗಿ ಡ್ರೆಸ್ ಮಾಡಿಕೊಂಡು ಕೈಗೆ ದುಬಾರಿ ವಾಚ್ಗಳನ್ನು ಧರಿಸಿ ಕಾರಲ್ಲಿ ಸುತ್ತುವುದನ್ನು ಬಿಟ್ಟರೆ ಇವರು ಜನರಿಗಾಗಿ ಏನೂ ಮಾಡಿಲ್ಲ, ಬಿಟ್ಟೀ ಕಾಸು ಜಮಾಯಿಸಿಕೊಂಡು, ರಿಯಲ್ ಎಸ್ಟೇಟ್ ಮಾಡಿಕೊಂಡು ಶಾಸಕರಾದವರಿಗೆ ಜನರ ಕಷ್ಟಗಳಿಗೆ ಸ್ಪಂದಿಸುವುದು ಹೇಗೆ ಗೊತ್ತಾದೀತು? ಐದು ಪೈಸೆಯ ಅಭಿವೃದ್ಧಿ ಕಾರ್ಯವನ್ನೇನಾದರೂ ಮಾಡಿದ್ದಾರಾ? ಎಂದು ಪ್ರತಾಪ್ ಜರಿದರು.
ಇದನ್ನೂ ಓದಿ: ಯತ್ನಾಳ್ ಬಣದವರೆಂದು ಗುರುತಿಸಿಕೊಂಡಿರುವ ಪ್ರತಾಪ್ ಸಿಂಹ ಇವತ್ತಿನ ಬಿಜೆಪಿ ಸಭೆಯಲ್ಲಿ ಪಾಲ್ಗೊಂಡರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು

‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ

‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ

ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
