KSRTC ಬಸ್‌ನಲ್ಲಿ ಅಕ್ರಮ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ವಶಕ್ಕೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಗಲಕೋಟೆ ನಗರದ ಬಸ್ ನಿಲ್ದಾಣದಲ್ಲಿ ಸಿಮೆಂಟ್ ಚೀಲದಲ್ಲಿ ಮಹಿಳೆ ಗೋಮಾಂಸ ಸಾಗಿಸುತ್ತಿದ್ದರು. ಮಹಿಳೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.
ಬಾಗಲಕೋಟೆ, ಏಪ್ರಿಲ್ 05: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್‌ನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಶಕೀರಾ ಬೇಪಾರಿ ಎಂಬುವರನ್ನು ಹಿಂದೂ ಸಂಘಟನೆ (Hindu Activist) ಕಾರ್ಯಕರ್ತರು ಹಿಡಿದು ನವನಗರದ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಾಗಲಕೋಟೆ ನಗರದ ಬಸ್ ನಿಲ್ದಾಣದಲ್ಲಿ ಸಿಮೆಂಟ್ ಚೀಲದಲ್ಲಿ ಗೋಮಾಂಸ ತುಂಬಿಕೊಂಡು ಬಸ್ ಏರಿದ್ದ ಶಕೀರಾರನ್ನು ಚಾಲಕ ಕೆಳಗೆ ಇಳಿಸಿದ್ದಾರೆ. ಬಳಿಕ, ಬಸ್ ನಿರ್ವಾಹಕ ಟಂಟಂ ವಾಹನದಲ್ಲಿ ಗೋಮಾಂಸ ಸಾಗಿಸಲು ಯತ್ನಿಸುತ್ತಿದ್ದರು. ಈ ವಿಚಾರ ತಿಳಿದು ಬಸ್ ಚಾಲಕ ಶಕೀಲಾರನ್ನು ಬಸ್ನಿಂದ ಕೆಳಗೆ ಇಳಿಸಿದ್ದಾರೆ. ನಂತರ, ಹಿಂದೂ ಸಂಘಟನೆ ಕಾರ್ಯಕರ್ತರು ಶಕೀರಾರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
Published On - 2:35 pm, Sat, 5 April 25