ಕೊರೊನಾದಿಂದ ನಿಜವಾಗಿಯೂ ಸಂಭವಿಸಿದ ಸಾವುಗಳೆಷ್ಟು? ಅಧಿಕೃತ ಅಂಕಿಗೂ ಆರೋಗ್ಯ ಸಂಸ್ಥೆ ನೀಡಿದ ಲೆಕ್ಕಾಚಾರಕ್ಕೂ ವ್ಯತ್ಯಾಸ ನೋಡಿ!
ವಿಶ್ವ ಆರೋಗ್ಯ ಅಂಕಿ ಅಂಶಗಳನ್ನು ತೆರೆದಿಟ್ಟ ಆರೋಗ್ಯ ಸಂಸ್ಥೆ, 2020ರಲ್ಲಿ ಕೊರೊನಾದಿಂದ ಸಂಭವಿಸಿದ ಸಾವಿನ ಪ್ರಮಾಣ ಅಧಿಕೃತ ಸಾವಿನ ಲೆಕ್ಕಕ್ಕಿಂತ 1.2 ಮಿಲಿಯನ್ನಷ್ಟು (10-12 ಲಕ್ಷ) ಹೆಚ್ಚಿದೆ ಎಂದು ಹೇಳಿದೆ.
ಜೆನೆವಾ: ಕೊರೊನಾ ಎರಡನೇ ಅಲೆ ಏರಿಕೆಯಾಗಿ ದೇಶದಲ್ಲಿ ಉಂಟುಮಾಡಿದ ಸಾವು ನೋವಿನ ಪ್ರಮಾಣ ಎಂಥದ್ದು ಎಂದು ನಾವೆಲ್ಲರೂ ಕಂಡಿದ್ದೇವೆ. ಚಿಕಿತ್ಸೆಗೆ ಸಮಸ್ಯೆ, ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಇತ್ಯಾದಿ ಸಂಕಷ್ಟಗಳನ್ನು ಎದುರಿಸಿದ್ದೇವೆ. ಈಗ ಮತ್ತೆ ಭಾರತದ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯತ್ತ ಸಾಗುತ್ತಿದೆ ಎಂದು ವರದಿಯಾಗುತ್ತಿದೆ. ಈ ಮಧ್ಯೆ ನಿಜವಾಗಿಯೂ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಎಷ್ಟಿರಬಹುದು ಎಂಬ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ತನ್ನ ಹೇಳಿಕೆ ನೀಡಿದೆ. ಅಧಿಕೃತ ಲೆಕ್ಕಕ್ಕೂ ಹಾಗೂ ವಿಶ್ವ ಸಂಸ್ಥೆ ತಿಳಿಸಿರುವ ಅಂದಾಜಿಗೂ ಎಷ್ಟು ವ್ಯತ್ಯಾಸ ಇದೆ ಎಂದು ತಿಳಿದರೆ ಅಚ್ಚರಿಪಡುವುದು ಖಚಿತ.
ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ನೀಡಿರುವ ಹೇಳಿಕೆ ಪ್ರಕಾರ ಕೊರೊನಾ ಸೋಂಕಿನಿಂದ ವಿಶ್ವದಾದ್ಯಂತ ಇದುವರೆಗೆ 7ರಿಂದ 8 ಮಿಲಿಯನ್ನಷ್ಟು ಅಂದರೆ ಸುಮಾರು 70ರಿಂದ 80 ಲಕ್ಷದಷ್ಟು ಮಂದಿ ಸಾವನ್ನಪ್ಪಿದ್ದಾರೆ. ಅಂದರೆ, ಅಧಿಕೃತವಾಗಿ ಇರುವ ಸಾವಿನ ಅಂಕಿ ಅಂಶಗಳಿಗಿಂತ ಈ ಲೆಕ್ಕಾಚಾರ ಎರಡು ಪಟ್ಟು ಹೆಚ್ಚಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ ಕೊರೊನಾ ಮೃತರ ಅಧಿಕೃತ ಲೆಕ್ಕಾಚಾರ ಕಡಿಮೆ ಇದೆ.
ವಿಶ್ವ ಆರೋಗ್ಯ ಅಂಕಿ ಅಂಶಗಳನ್ನು ತೆರೆದಿಟ್ಟ ಆರೋಗ್ಯ ಸಂಸ್ಥೆ, 2020ರಲ್ಲಿ ಕೊರೊನಾದಿಂದ ಸಂಭವಿಸಿದ ಸಾವಿನ ಪ್ರಮಾಣ ಅಧಿಕೃತ ಸಾವಿನ ಲೆಕ್ಕಕ್ಕಿಂತ 1.2 ಮಿಲಿಯನ್ನಷ್ಟು (10-12 ಲಕ್ಷ) ಹೆಚ್ಚಿದೆ ಎಂದು ಹೇಳಿದೆ. ಅಂದರೆ, 2020ರಲ್ಲಿ ಕೊರೊನಾದಿಂದ ಕನಿಷ್ಠ 3 ಲಕ್ಷ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕೊರೊನಾದಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಂಭವಿಸಿದ ಮರಣ ಪ್ರಮಾಣ ನಿಜವಾಗಿ ಅಧಿಕೃತ ಅಂಕಿ ಅಂಶಗಳಿಗಿಂತ ಅಧಿಕವಾಗಿದೆ ಎಂದು ತಿಳಿಸಿದ್ದಾರೆ. ಯುಎನ್ ಏಜೆನ್ಸಿಯ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ 3.4 ಮಿಲಿಯನ್ (30-34 ಲಕ್ಷ ಮಂದಿ) ಜನರು ನೇರವಾಗಿ ಕೊವಿಡ್-19 ಕಾರಣದಿಂದ ಮೇ 2021ರ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಕೊರೊನಾದಿಂದ ಮೃತರ ಪ್ರಮಾಣ ಅಧಿಕೃತ ಅಂಕಿ ಅಂಶಗಳಿಗಿಂತ ಎರಡರಿಂದ ಮೂರು ಪಟ್ಟು ಅಧಿಕವಾಗಿದೆ. ಹಾಗಾಗಿ, ಸುಮಾರು 6ರಿಂದ 8 ಮಿಲಿಯನ್ (60ರಿಂದ 80 ಲಕ್ಷ) ಜನರು ಮರಣಿಸಿದ್ದಾರೆ ಎಂದು ಅಂದಾಜಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಹಾಯಕ ನಿರ್ದೇಶಕಿ ಸಮೀರಾ ಆಸ್ಮಾ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಡಾಟಾ ಅನಾಲಿಸ್ಟ್ ವಿಲಿಯಮ್ ಸೆಂಬುರಿ ನೀಡಿದ ಮಾಹಿತಿಯಂತೆ, ವರದಿಯಾಗದ ಕೊರೊನಾ ಸಾವುಗಳು, ಪರೋಕ್ಷವಾಗಿ ಕೊರೊನಾ ಪರಿಣಾಮದಿಂದ ಉಂಟಾದ ಸಾವು, ಆಸ್ಪತ್ರೆ, ವೈದ್ಯಕೀಯ ಸೌಲಭ್ಯದ ಕೊರತೆಯಿಂದ ಉಂಟಾದ ಸಾವು ಇತ್ಯಾದಿಗಳನ್ನು ಸೇರಿ ಈ ಮರಣ ಪ್ರಮಾಣ ಹೇಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಧಿಕೃತ ಮಾಹಿತಿಯ ಪ್ರಕಾರ ಕೊರೊನಾದಿಂದ ಇಂದಿಗೆ ಸುಮಾರು 34 ಲಕ್ಷದಷ್ಟು ಸಾವು ಸಂಭವಿಸಿದೆಯಷ್ಟೆ.
ಇದನ್ನೂ ಓದಿ: ಹೋಮ್ ಕ್ವಾರೆಂಟೈನ್ ಆಗಿರುವ ಕೊರೊನಾ ಸೋಂಕಿತರು ಗಮನಿಸಿ: ಬೇಗ ಗುಣವಾಗಲು ಆಯುಷ್-64 ಔಷಧ ಸಹಕಾರಿ; ವಿವರ ಇಲ್ಲಿದೆ
Steroids in Covid: ಸ್ಟಿರಾಯ್ಡ್ ಎಂದರೇನು? ಕೊರೊನಾ ಸೋಂಕು ಚಿಕಿತ್ಸೆಯಲ್ಲಿ ಈ ಔಷಧವನ್ನು ಹೇಗೆ ಬಳಸಲಾಗುತ್ತದೆ?
Published On - 9:57 pm, Fri, 21 May 21