ಶ್ವೇತ ಭವನದಲ್ಲಿ ಬೆಚ್ಚನೆಯ ಅಪ್ಪುಗೆಗಳು, ಹೊಸ ವೈಬ್ಸ್ ಶುರು​! ಇದಕ್ಕೆ ಕಾರಣವೇನು? ಕೊರೊನಾ ಕಾಟ ಮುಗಿಯಿತಾ?

No masks only hugs at White House: ಅತಿಥಿಗಳು ಪರಸ್ಪರ ಕೈಹೊಸೆಯುತ್ತಾ, ಅಭಿಮಾನದಿಂದ ಮೆಚ್ಚುಗೆಯ ನೋಟ ಬೀರಿದರು. ತನ್ಮೂಲಕ ಸಾಂಕೇತಿಕವಾಗಿ ಕೊರೊನಾಗೆ ಗುಡ್​ ಬೈ ಹೇಳಿದರು. ಅಬ್ಬಾ! ಇದಕ್ಕಿಂತ ಸೌಭಾಗ್ಯ ಇನ್ನೇನು ಎಂದು ಶ್ವೇತ ಭವನದ ಗಣ್ಯಾತಿಗಣ್ಯರು ಸಂತೋಷಪಟ್ಟರು. ಶ್ವೇತಭವನದಿಂದ ನಿರ್ಗಮಿಸುವುದಕ್ಕೂ ಮುನ್ನ ಅಧ್ಯಕ್ಷ ಬೈಡನ್, ಶ್ವೇತಭವನದ ಶಿಷ್ಟಾಚಾರಗಳನ್ನು ಬದಿಗಿಟ್ಟು ಕೆಲವರನ್ನು ಆಲಿಂಗಿಸಿದ್ದು ವಿಶೇಷವಾಗಿ ಕಣ್ಣಿಗೆ ಕಟ್ಟಿದಂತಿತ್ತು.

ಶ್ವೇತ ಭವನದಲ್ಲಿ ಬೆಚ್ಚನೆಯ ಅಪ್ಪುಗೆಗಳು, ಹೊಸ ವೈಬ್ಸ್ ಶುರು​! ಇದಕ್ಕೆ ಕಾರಣವೇನು? ಕೊರೊನಾ ಕಾಟ ಮುಗಿಯಿತಾ?
ಶ್ವೇತ ಭವನದ ಶಿಷ್ಟಾಚಾರಗಳ ಬದಿಗಿಟ್ಟು,ಕೊರೊನಾ ಮಾರ್ಗಸೂಚಿ ಪಕ್ಕಕ್ಕಿಟ್ಟು ಕೆಲವರನ್ನು ಆಲಿಂಗಿಸಿದ್ದು ವಿಶೇಷವಾಗಿತ್ತು!
Follow us
ಸಾಧು ಶ್ರೀನಾಥ್​
| Updated By: ganapathi bhat

Updated on: May 22, 2021 | 6:47 PM

ಅಮೆರಿಕದಲ್ಲಿ ಮನುಜ ಮನುಜರ ಮಧ್ಯೆ ಬೆಚ್ಚನೆಯ ಹೊಸ ತರಂಗಗಳು ಅಂದ್ರೆ ವೈಬ್ರೇಷನ್​ ಏರ್ಪಡುತ್ತಿದೆ! ಇದೇ ಹೊಸದೇನೂ ಅಲ್ಲ; ಆದರೆ ಇದು ಬಿಸಿ ಅಂದ್ರೆ ಬಿಪೋರ್​ ಕೊರೊನಾ ಅಂದ್ರೆ ಕೊಒರನಾ ಬರುವುದಕ್ಕೂ ಮುಂಚಿನ ದಿನಗಳಲ್ಲಿ ಮನುಷ್ಯ ಮನುಷ್ಯರ ಮಧ್ಯೆ ಇಂತಹ ತರಂಗಗಳು ರಿಂಗಣಿಸುತ್ತಿದ್ದವು. ಆದರೆ ಕೊರೊನಾ ಅಟಕಾಯಿಸಿಕೊಂಡಿದ್ದೇ ಅವೆಲ್ಲ ದೂರವಾಗಿ ಮನುಷ್ಯ ಮನುಷ್ಯ ನಡುವಿನ ಅಂತರ ದೂರವಾಯಿತು. ಹಾಗಾದರೆ ಅಲ್ಲೇನು ಈಗ ಕೊರೊನಾ ಕಾಟ ಮುಗಿಯಿತಾ? ಎಂಬ ಪ್ರಶ್ನೆ ಎತ್ತುವುದಾದರೆ…

ಕೊರೊನಾದಿಂದಾಗಿ ಜೀವನದಲ್ಲಿನ ಜುಂಜುಂ ಮಾಯವಾಗಿ, Zoom ಮಯವಾಗಿತ್ತು!:

ಅಧಿಕಾರಕ್ಕೆ ಬಂದರೂ ಅನೇಕ ತಿಂಗಳುಗಳಿಂದ ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್​ ಜನರಿಂದ ದೂರವೇ ಉಳಿದರು. ಕೊನೆ ಶ್ವೇತಭವನ ಅಧಿಕಾರಿಗಳೊಂದಿಗೂ ಮಾರು ದೂರ ಉಳಿತು, ಅಂತರ ಅಂದರೆ ಆರೋಗ್ಯಪೂರ್ಣ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿದ್ದರು. ಕೊರೊನಾದಿಂದಾಗಿ ಲೈಫು ಜುಮ್ಮಂತ ಅಂತ ಅಲ್ಲದಿದ್ದರೂ ಎಲ್ಲ ಜೂಮ್​ಮಯವಾಗಿತ್ತು (Zoom). ಪದಗ್ರಹಣದಿಂದ ಹಿಡಿದು ನಿನ್ನೆ ಮೊನನೆಯವರೆಗೂ ಅಧ್ಯಕ್ಷ ಜೋ ಬೈಡೆನ್​ ಎಂದಿಗೂ ಕಂಡು ಕೇಳರಯದ ಇಂತಹ ಸಂದಿಗ್ದ ಪರಿಸ್ಥಿತಿಯನ್ನು ತುಂಬಾನೇ ಕಸಿವಿಸಿಯಿಂದ ಎದುರಿಸಿದರು. ಯಾವಾಗಪ್ಪ ಈ ಕೊರೊನಾ ಉಗಿಯುತ್ತದೆ ಎಂದು ತಲೆಯ ಮೇಲೆ ಕೈಹೊತ್ತು ಕುಳಿತಿದ್ದು ಸುಳ್ಳಲ್ಲ.

ಆದ್ರೆ ನಿನ್ನೆಗೆ ಶ್ವೇತ ಭವನದಲ್ಲಿ ಶ್ವೇತ ಬೆಳಕು ಸ್ವಚ್ಛಂದವಾಗಿ ಹರಿದಿತ್ತು. ಸಾಂಪ್ರದಾಯಿಕ ಕಾರ್ಯಕ್ರಮವೊಂದರಲ್ಲಿ ಎಲ್ಲರೂ ಅಕ್ಕಪಕ್ಕ ಕುಳಿತು ಉಭಯಕುಶಲೋಪರಿ ವಿಚಾರಿಸಿಕೊಂಡರು. ಪರಸ್ಪರ ಕೈಚಾಚಿ ಶುಭ ಆಶಯಗಳನ್ನು ವಿನಿಮಯ ಮಾಡಿಕೊಂಡರು. ಕೆಲವರ ಮಧ್ಯೆ ಬೆಚ್ಚನೆಯ ಅಪ್ಪುಗೆಯೂ ಕಾಣಿಸಿಕೊಂಡಿತು. ಅಧಿಕಾರಿಗಳು, ರಾಜತಾಂತ್ರಿಕರು, ವರದಿಗಾರರ ಮಧ್ಯೆ ಹೊಸ ವೈಬ್ಸ್​ ಹರಿದಾಡಿತ್ತು. ಮಾಸ್ಕ್ ಫ್ರೀ ದಿನಗಳು ಮರುಕಳಿಸಿವೆ ಎಂದು ಅವರೆಲ್ಲ ಸಾರಿದರು.

ಮಾಸ್ಕ್​ ಮಯವಾಗಿದ್ದ ಅಮೆರಿಕದಲ್ಲಿ Thanks to Corona Vaccine ಈಗ ಮಾಸ್ಕ್​ ಮಾಯವಾಗಿದೆ!

ಅಮೆರಿಕದಲ್ಲಿ ಇದೆಲ್ಲ ಸಾಧ್ಯವಾತ್ತಿರುವುದು ಆ ಒಂದು ರಾಮಬಾಣದಿಂದ. ಕೊರೊನಾ ಸೋಂಕು ಲಸಿಕೆ ಇದೆಲ್ಲವನ್ನೂ ಸಾಧ್ಯಾವಾಗಿಸಿದೆ. ಬದುಕು ಮತ್ತೆ ವ್ಯವಸ್ಥಿತ ಹಳಿಗೆ ಮರಳುತ್ತಿದೆ. ಮಾಸ್ಕ್​ ಮಯವಾಗಿದ್ದ ಅಮೆರಿಕದಲ್ಲಿ ಈಗ ಮಾಸ್ಕ್​ ಮಾಯವಾಗಿದೆ! ಕೊರೊನಾ ಕ್ರಿಮಿಗೆ ಹೆದರಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅವಶ್ಯಕತೆ ಇಲ್ಲ ಎಂದು ಸಾರಿದ್ದಾರೆ ಅಮೆರಿಕದ ಅಧ್ಯಕ್ಷ ಬೈಡನ್. ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ಸಹ ಆನಂದದಿಂದ ಅತಿಥಿಗಳನ್ನು ಅಪ್ಪಿ, ಸಮಾಧಾನದ ನಿಟ್ಟುಸಿರುಬಿಟ್ಟರು. ಇದಕ್ಕೆಲ್ಲ ಮೂಲವಾಗಿರುವುದು ಅದೇ ಕೊರೊನಾವನ್ನು ಹೊಡೆದೋಡಿಸುವ ವ್ಯಾಕ್ಸಿನ್ ಎಂಬ ರಾಮಬಾಣ.

ನಾವು ನಮ್ಮ ಸ್ವಸ್ಥಾನಗಳಿಗೆ, ಹಿಂದಿನ ರೀತಿರಿವಾಜುಗಳಿಗೆ ಮರಳಿದ್ದೇವೆ. ನಾನಿದನ್ನು ದೃಢಪಡಿಸುತ್ತಿದ್ದೇನೆ. ನಾವು ಮತ್ತದೇ ಬಿಸಿಯಪ್ಪುಗೆಯಲ್ಲಿ ಮಿಂದೇಳಬಹುದು. ಸಾಕಿನ್ನು ಕೊರೊನಾ ಭೀತಿಯ ಗೊಡವೆ ಎಂದು ಸ್ವತಃ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್​ ಸಾಕಿ ನಿನ್ನೆ ಶುಕ್ರವಾರ ಪ್ರಕಟಿಸಿದ್ದಾರೆ.

ಕಳೆದ ಒಂದು ವಾರದಿಂದ ಈ ವಿದ್ಯಮಾನ ನಡೆದಿತ್ತು. ಮೇ 13ರಂದೇ ಅಧ್ಯಕ್ಷ ಬೈಡನ್​ ಮಾಸ್ಕ್​ಗೆ ಬೈ ಬೈ ಹೇಳಿ, ನಮ್ಮನಡುವೆ ಇನ್ನು ಅಂತರ ಬೇಡ ಎಂದು ಹೇಳಿದ್ದರು. ಬೈಡನ್​ ಅಧ್ಯಕ್ಷೀಯ ದಿನಗಳು ಮುಂದಿನ ಕಾಲ ಘಟ್ಟದಲ್ಲಿ ಇನ್ನೂ ಹೆಚ್ಚಾಗಿ ಕಾಣಬರಲಿದೆ. ಅಧ್ಯಕ್ಷ ಬೈಡನ್​ ಇನ್ನಷ್ಟು ಮತ್ತಷ್ಟು ಸಾರ್ವಜನಿಕ ಸಮಾರಂಭಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಶ್ವೇತ ಭವನದ ಮೂಲಗಳು ಸಾರಿವೆ.

ಶ್ವೇತ ಭವನದ ಶಿಷ್ಟಾಚಾರಗಳ ಬದಿಗಿಟ್ಟು,ಕೊರೊನಾ ಮಾರ್ಗಸೂಚಿ ಪಕ್ಕಕ್ಕಿಟ್ಟು ಕೆಲವರನ್ನು ಆಲಿಂಗಿಸಿದ್ದು ವಿಶೇಷವಾಗಿತ್ತು!

70 ವರ್ಷಗಳ ಹಿಂದೆ ಕೊರಿಯಾ ಯುದ್ಧದಲ್ಲಿ ಅಪ್ರತಿಮ ಧೈರ್ಯ ಶ್ರೌರ್ಯ ತೋರಿದ್ದ 94 ವರ್ಷದ ನಿವೃತ್ತ ಕರ್ನಲ್ ರಾಲ್ಫ್​ ಪುಕೆಟ್​(ಜೂನಿಯರ್) ಅವರಿಗೆ ಮೊದಲ ಬಾರಿಗೆ ಕಮಾಂಡರ್ ಇನ್​ ಚೀಪ್​ ಆಗಿ ಅಧ್ಯಕ್ಷ ಬೈಡನ್​ ಆತ್ಮೀಯವಾಗಿ ಗೌರವದ ಮೆಡಲ್ ನೀಡಿ, ಸನ್ಮಾನ ಮಾಡಿದರು. ಈ ಸಮಾರಂಭಕ್ಕೆ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್​ ಜೆ ಇನ್​ ಸಹ ಶ್ವೇತಭವನ್ಕೆ ಆಗಮಿಸಿದ್ದರು.

ಬೈಡನ್​ ಮತ್ತು ಮೂನ್​ ಜೆ ಇನ್ ಇಬ್ಬರೂ ನಿವೃತ್ತ ಕರ್ನಲ್ ರಾಲ್ಫ್​ ಪುಕೆಟ್ ಅವರ ಕೈಹೊಸೆಯುತ್ತಾ, ಅಭಿಮಾನದಿಂದ ಮೆಚ್ಚುಗೆಯ ನೋಟ ಬೀರಿದರು. ತನ್ಮೂಲಕ ಸಾಂಕೇತಿಕವಾಗಿ ಕೊರೊನಾಗೆ ಗುಡ್​ ಬೈ ಹೇಳಿದರು. ಅಬ್ಬಾ! ಇದಕ್ಕಿಂತ ಸೌಭಾಗ್ಯ ಇನ್ನೇನು ಎಂದು ಶ್ವೇತ ಭವನದ ಗಣ್ಯಾತಿಗಣ್ಯರು ಸಂತೋಷಪಟ್ಟರು. ಶ್ವೇತಭವನದಿಂದ ನಿರ್ಗಮಿಸುವುದಕ್ಕೂ ಮುನ್ನ ಅಧ್ಯಕ್ಷ ಬೈಡನ್, ಶ್ವೇತಭವನದ ಶಿಷ್ಟಾಚಾರಗಳನ್ನು ಬದಿಗಿಟ್ಟು ಕೆಲವರನ್ನು ಆಲಿಂಗಿಸಿದ್ದು ವಿಶೇಷವಾಗಿ ಕಣ್ಣಿಗೆ ಕಟ್ಟಿದಂತಿತ್ತು. ( New vibes at traditional felicitation function at White House Hugs are in masks are out including for President joe biden )

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ