AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದುತ್ವವನ್ನು ಉತ್ತೇಜಿಸುತ್ತದೆ ಎಂದು ಯೋಗಕ್ಕೆ ಹೇರಿದ್ದ ನಿರ್ಬಂಧ 28 ವರ್ಷಗಳ ಬಳಿಕ ತೆರವು; ಆದರೂ ನಮಸ್ತೇ ಎನ್ನುವಂತಿಲ್ಲ, ಮಂತ್ರ ಪಠಿಸುವಂತಿಲ್ಲ

ಯೋಗದಿಂದಾಗಿ ಶಾರೀರಿಕ, ಮಾನಸಿಕ ಸ್ವಾಸ್ಥ್ಯ ವೃದ್ಧಿಸುತ್ತದೆ. ಅಲ್ಲದೇ, ಏಕಾಗ್ರತೆ, ದೈಹಿಕ ಸಮತೋಲನತೆ, ಮಾನಸಿಕ ಶಾಂತಿ ಹೆಚ್ಚುವುದರಿಂದ ಮಕ್ಕಳ ಬೆಳವಣಿಗೆ ಹಾಗೂ ನಡವಳಿಕೆಯ ಮೇಲೆ ಪೂರಕ ಪರಿಣಾಮ ಬೀರಲಿದೆ ಎಂದು ಹೇಳಿರುವ ಜೆರೆಮಿ ಗ್ರೇ, ಮೂರು ದಶಕಗಳ ಹಿಂದಿನ ನಿಯಮವನ್ನು ಬದಲಿಸುವ ಮೂಲಕ ಯೋಗದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದಾರೆ.

ಹಿಂದುತ್ವವನ್ನು ಉತ್ತೇಜಿಸುತ್ತದೆ ಎಂದು ಯೋಗಕ್ಕೆ ಹೇರಿದ್ದ ನಿರ್ಬಂಧ 28 ವರ್ಷಗಳ ಬಳಿಕ ತೆರವು; ಆದರೂ ನಮಸ್ತೇ ಎನ್ನುವಂತಿಲ್ಲ, ಮಂತ್ರ ಪಠಿಸುವಂತಿಲ್ಲ
ಸಾಂದರ್ಭಿಕ ಚಿತ್ರ
Skanda
|

Updated on: May 22, 2021 | 12:20 PM

Share

ಅಲಬಾಮಾ ಪ್ರಾಂತ್ಯದ ಶಾಲೆಗಳಲ್ಲಿ 28 ವರ್ಷಗಳ ಹಿಂದೆ ಯೋಗಭ್ಯಾಸಕ್ಕೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗಳಿಸಲಾಗಿದೆ. ನಮಸ್ತೇ ಭಂಗಿ ಅನುಕರಿಸದೇ, ಮಂತ್ರ ಉಚ್ಛರಿಸದೇ ಯೋಗ ಕಲಿಸಬಹುದು ಎಂದು ಅಲಬಾಮಾದ ಗವರ್ನರ್ ಕೇ ಐವಿ ಮಸೂದೆಗೆ ಸಹಿ ಹಾಕಿದ್ದಾರೆ. ಆ ಮೂಲಕ ಯೋಗ ಹಿಂದುತ್ವವನ್ನು ಉತ್ತೇಜಿಸುತ್ತದೆ, ಅದಕ್ಕೆ ಹಿಂದೂ ಧರ್ಮದೊಂದಿಗೆ ಸಂಬಂಧವಿದೆ ಎಂಬ ಕಾರಣವೊಡ್ಡಿ 1993ರಲ್ಲಿ ಹೇರಲಾಗಿದ್ದ ನಿಷೇಧ ಸುಮಾರು ಮೂರು ದಶಕಗಳ ಬಳಿಕ ತೆರವುಗೊಂಡಂತಾಗಿದೆ.

1993ರಲ್ಲಿ ಅಲಬಾಮಾ ರಾಜ್ಯ ಶಿಕ್ಷಣ ಮಂಡಳಿ ಶಾಲೆಗಳಲ್ಲಿ ಯೋಗ ಕಲಿಕೆಗೆ ನಿರ್ಬಂಧ ಹೇರಿತ್ತು. ಯೋಗ ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದಾಗಿರುವ ಕಾರಣ ಅದು ಹಿಂದುತ್ವದೆಡೆಗೆ ಸೆಳೆಯುತ್ತದೆ ಎಂದು ಕೆಲ ಮೂಲಭೂತವಾದಿಗಳು ಚಕಾರವೆತ್ತಿದ ಪರಿಣಾಮ ಯೋಗಾಭ್ಯಾಸವನ್ನು ನಿಲ್ಲಿಸಲಾಗಿತ್ತು. ಆದರೆ, ಇದೀಗ ಹೊಸ ಆದೇಶದನ್ವಯ ನಮಸ್ತೇ ಭಂಗಿ ಅನುಕರಣೆ ಹಾಗೂ ಮಂತ್ರ ಪಠಣದ ಹೊರತಾಗಿ ಯೋಗಾಭ್ಯಾಸವನ್ನು ನಡೆಸಬಹುದಾಗಿದೆ.

ಈ ಬಗ್ಗೆ ಅಲ್ಲಿನ ರಾಜ್ಯ ಪ್ರತಿನಿಧಿ ಜೆರೆಮಿ ಗ್ರೇ ರಾಜ್ಯ ಶಾಸಕಾಂಗ ಸಭೆಯಲ್ಲಿ ಮಸೂದೆ ಮಂಡನೆ ಮಾಡಿದ್ದಾರೆ. ಅದರಂತೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಆಗಸ್ಟ್ 1ರಿಂದ ನೂತನ ಕಾನೂನು ಜಾರಿಯಾಗಲಿದೆ. ಶಿಶುವಿಹಾರದಿಂದ 12ನೇ ತರಗತಿಯ ತನಕ ಯೋಗವನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಳ್ಳಲು ಅನುಮತಿಸುವ ಮಸೂದೆಗೆ ಗವರ್ನರ್‌ ಕೇ ಐವಿ ಸಹಿ ಹಾಕಿದ್ದಾರೆ.

ಯೋಗದಿಂದಾಗಿ ಶಾರೀರಿಕ, ಮಾನಸಿಕ ಸ್ವಾಸ್ಥ್ಯ ವೃದ್ಧಿಸುತ್ತದೆ. ಅಲ್ಲದೇ, ಏಕಾಗ್ರತೆ, ದೈಹಿಕ ಸಮತೋಲನತೆ, ಮಾನಸಿಕ ಶಾಂತಿ ಹೆಚ್ಚುವುದರಿಂದ ಮಕ್ಕಳ ಬೆಳವಣಿಗೆ ಹಾಗೂ ನಡವಳಿಕೆಯ ಮೇಲೆ ಪೂರಕ ಪರಿಣಾಮ ಬೀರಲಿದೆ ಎಂದು ಹೇಳಿರುವ ಜೆರೆಮಿ ಗ್ರೇ, ಮೂರು ದಶಕಗಳ ಹಿಂದಿನ ನಿಯಮವನ್ನು ಬದಲಿಸುವ ಮೂಲಕ ಯೋಗದ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದಿದ್ದಾರೆ.

(Ban on Yoga ends after 28 years in Alabama still Namaste and Chanting are prohibited as they fear that it may promote Hinduism)

ಇದನ್ನೂ ಓದಿ: ಲಾಕ್​ಡೌನ್​ ಸಂದರ್ಭದ ಒತ್ತಡ ನಿವಾರಣೆಗೆ ಯೋಗಾಭ್ಯಾಸ; ಮನೆಯಲ್ಲೇ ಕಳೆಯುವ ಸಮಯಕ್ಕೆ ಸಿಗಲಿದೆ ಸ್ಪೂರ್ತಿ 

ಯೋಗದ ಮೇಲಿನ ನಿಷೇಧವನ್ನು ವಾಪಸ್​ ತೆಗೆದುಕೊಳ್ಳಲು ಮುಂದಾದ ಅಮೆರಿಕದ ಪುಟ್ಟ ರಾಜ್ಯ ಅಲಬಾಮಾ!