ಲಾಕ್​ಡೌನ್​ ಸಂದರ್ಭದ ಒತ್ತಡ ನಿವಾರಣೆಗೆ ಯೋಗಾಭ್ಯಾಸ; ಮನೆಯಲ್ಲೇ ಕಳೆಯುವ ಸಮಯಕ್ಕೆ ಸಿಗಲಿದೆ ಸ್ಪೂರ್ತಿ

ಆರಂಭಿಕರಿಗೆ ಹತ ಯೋಗಾಭ್ಯಾಸವು ಸೂಕ್ತವಾಗಿರುತ್ತದೆ. ಈ ಅಭ್ಯಾಸದಿಂದ ವಿಭಿನ್ನ ಮಾರ್ಪಾಡುಗಳನ್ನು ಹೊಂದಬಹುದು ಮತ್ತು ಇದು ಯೋಗ ಭಂಗಿಗಳಲ್ಲಿ ಪರಿಪೂರ್ಣತೆಯನ್ನು ಕಾಣಲು ನೆರವಾಗುತ್ತದೆ.

ಲಾಕ್​ಡೌನ್​ ಸಂದರ್ಭದ ಒತ್ತಡ ನಿವಾರಣೆಗೆ ಯೋಗಾಭ್ಯಾಸ; ಮನೆಯಲ್ಲೇ ಕಳೆಯುವ ಸಮಯಕ್ಕೆ ಸಿಗಲಿದೆ ಸ್ಪೂರ್ತಿ
ಸಾಂದರ್ಭಿಕ ಚಿತ್ರ

ಪ್ರಯಾಣಕ್ಕೆ ನಿರ್ಬಂಧ, ಸೋಂಕಿನ ಅಪಾಯದ ಬಗೆಗಿನ ಭೀತಿ, ಸಾವು- ನೋವಿನ ಸುದ್ದಿಗಳ ನಿರಂತರ ಹರಿವು, ದಿನನಿತ್ಯದ ವಸ್ತುಗಳ ಕೊರತೆ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದ ಹರಡುವಿಕೆ ಇವೆಲ್ಲವೂ ಜನರಲ್ಲಿ ಆತಂಕ ಸೃಷ್ಟಿಸಿದೆ. ಮನೆಯ ನಾಲ್ಕು ಗೋಡೆಗಳ ಮಧ್ಯೆ ನಿರಂತರವಾಗಿ ಕುಳಿತಿರುವುದು ಅಥವಾ ಮನೆಯ ಒಳಗಡೆಯೇ ದಿನದ 24 ಗಂಟೆಯನ್ನು ಕಳೆಯುವುದು ಅಷ್ಟು ಸುಲಭದ ಮಾತಲ್ಲ. ಈ ರೀತಿಯ ಬದಲಾವಣೆ ಮಾನಸಿಕ ಸವಾಲನ್ನೋಡುತ್ತದೆ.

ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಜತೆಗೆ ಆತಂಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಇನ್ನೊಂದು ವಿಷಯವೂ ಇದೆ ಎನ್ನುವುದನ್ನು ನಾವು ಈ ಸಮಯದಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ ಅದುವೆ ಯೋಗ. ಯೋಗವು ಅತಿ ಹೆಚ್ಚು ಪ್ರಯೋಜನಕಾರಿ ಎಂಬುವುದು ಹಿಂದಿನಿಂದಲೂ ತಿಳಿದುಬಂದಿರುವ ವಿಚಾರ. ತೂಕ ಇಳಿಸಲು ಮಾತ್ರವಲ್ಲ, ಮನಸ್ಸನ್ನು ಶಾಂತವಾಗಿರಿಸಿಕೊಳ್ಳಲು ಯೋಗ ಸಹಾಯ ಮಾಡುತ್ತದೆ.

ಜೀವನದ ಅನಿಶ್ಚಿತ ಘಟನೆಗಳು ಮತ್ತು ಅವುಗಳಿಂದ ಹುಟ್ಟಿಕೊಳ್ಳವ ನಕಾರಾತ್ಮಕ ಆಲೋಚನೆಗಳಿಂದ ಮನಸ್ಸು ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತದೆ ಮತ್ತು ಇದು ನಿದ್ದೆಯಿಲ್ಲದ ರಾತ್ರಿಗಳಿಗೆ ಕಾರಣವಾಗುತ್ತದೆ. ಈ ರೀತಿಯ ಸನ್ನಿವೇಶಗಳು ನಂತರ ಆಯಾಸಕ್ಕೆ ಕಾರಣವಾಗುತ್ತದೆ. ಇಂತಹ ಸವಾಲಿನ ಸಮಯವನ್ನು ಎದುರಿಸಲು ಮುಖ್ಯವಾಗಿ ಮಾನಸಿಕ ಆರೋಗ್ಯ ಅವಶ್ಯಕವಾಗಿದೆ. ಹೆಚ್ಚಿನವರು ಬಲವಂತವಾಗಿ ವಿಶ್ರಾಂತಿ ಪಡೆಯಲು ಮುಂದಾಗುತ್ತಾರೆ ಆದರೆ ಅದು ಸೂಕ್ತವಲ್ಲ ಎಂದು ಯೋಗ ವೃತ್ತಿಪರ ಮತ್ತು ಡೊಜಿಯ ಸಹ-ಸಂಸ್ಥಾಪಕ ಮುದಿತ್ ದಾಂಡ್ವಾಟ್ ಹೇಳಿದ್ದಾರೆ.

ಯೋಗ ಏಕೆ ಮುಖ್ಯ?
ಆತಂಕ ಅಥವಾ ಒತ್ತಡವು ಸಾಮಾನ್ಯವಾಗಿ ಸಹಾನುಭೂತಿಯ ನರಮಂಡಲವನ್ನು ಪ್ರಚೋದಿಸುತ್ತದೆ. ಇದು ರಕ್ತದ ಒತ್ತಡ, ಉದ್ವಿಗ್ನ ಸ್ನಾಯುಗಳು, ಏಕಾಗ್ರತೆಯ ಕೊರತೆ, ವೇಗವಾಗಿ ಉಸಿರಾಡುವುದನ್ನು ಹೆಚ್ಚಿಸುತ್ತದೆ. ಆದರೆ ಈ ಎಲ್ಲಾ ಸಮಸ್ಯೆಗಳಿಗೂ ಯೋಗ ಪರಿಹಾರ ನೀಡುತ್ತದೆ. ಸ್ನಾಯುಗಳು ಮತ್ತು ಕೀಲುಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಲು ಯೋಗವು ಒಂದು ಉತ್ತಮ ಸಾಧನವಾಗಿದೆ. ಅಲ್ಲದೆ ಇದು ಸಹಾನುಭೂತಿಯ ಸ್ಥಿತಿಯನ್ನು ಸುಧಾರಿಸಲು ನೆರವಾಗುತ್ತದೆ. ಇನ್ನು ರಕ್ತದ ಒತ್ತಡವನ್ನು ನಿರ್ವಹಿಸಲು ಮತ್ತು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡಲು ಅನೇಕ ಯೋಗ ಭಂಗಿಗಳಿವೆ ಎಂದು ಆತ್ಮಂತನ್ ಸ್ವಾಸ್ಥ್ಯ ಕೇಂದ್ರದ ಕ್ಷೇಮ ನಿರ್ದೇಶಕ ಡಾ.ಮನೋಜ್ ಕುಟ್ಟೇರಿ ತಿಳಿಸಿದ್ದಾರೆ.

ಕ್ವಾರಂಟೈನ್ ಸಮಯದಲ್ಲಿ ಯೋಗ
ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸದ ಅತ್ಯುತ್ತಮ ರೂಪಗಳಲ್ಲಿ ಒಂದಾದ ಯೋಗವು ಕ್ವಾರಂಟೈನ್ ಅವಧಿಗೆ ಸೂಕ್ತವಾಗಿರುತ್ತದೆ. ಯೋಗದ ಅಭ್ಯಾಸವು ಎಲ್ಲಾ ಮಾನಸಿಕ ಸಮಸ್ಯೆಗಳನ್ನು ಕಡಿಮೆಮಾಡಲು ಸಹಕಾರಿಯಾಗಿದೆ. ಉಸಿರಾಟ ಮತ್ತು ಧ್ಯಾನದ ಜೊತೆಗೆ ಯೋಗವನ್ನು ಸರ್ವತೋಮುಖ ವ್ಯಾಯಾಮವೆಂದು ಪರಿಗಣಿಸಬಹುದು. ಇದು ನಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ.

ಆರಂಭಿಕರಿಗೆ ಹತ ಯೋಗಾಭ್ಯಾಸವು ಸೂಕ್ತವಾಗಿರುತ್ತದೆ. ಈ ಅಭ್ಯಾಸದಿಂದ ವಿಭಿನ್ನ ಮಾರ್ಪಾಡುಗಳನ್ನು ಹೊಂದಬಹುದು ಮತ್ತು ಇದು ಯೋಗ ಭಂಗಿಗಳಲ್ಲಿ ಪರಿಪೂರ್ಣತೆಯನ್ನು ಕಾಣಲು ನೆರವಾಗುತ್ತದೆ. ಈ ಯೋಗ ಅಭ್ಯಾಸಗಳಲ್ಲಿ ತ್ರಿಕೋನಾಸನ, ತಡಾಸನ, ಅರ್ಧ ಕಟಿ ಚಕ್ರಾಸನ, ವೀರಭದ್ರಾಸನ ಪ್ರಮುಖವಾಗಿದೆ.

ಕೊರೊನಾ ಸೋಂಕಿನ ಈ ಸಂದರ್ಭದಲ್ಲಿ ಯೋಗ ನಿದ್ರೆ ಹೆಚ್ಚು ಪ್ರಯೋಜನಕಾರಿ. ಯೋಗ ನಿದ್ರೆ ಅತ್ಯಂತ ಆಳವಾದ ಮತ್ತು ಶಕ್ತಿಯುತ ತಂತ್ರಗಳಲ್ಲಿ ಒಂದಾಗಿದೆ. ಪ್ರತಿದಿನ 20 ನಿಮಿಷಗಳ ಯೋಗ ನಿದ್ರೆ ಮಾಡುವುದರಿಂದ ಒತ್ತಡ ಮತ್ತು ಆತಂಕ ದೂರವಾಗುತ್ತದೆ ಎಂದು ಯೋಗ ವೃತ್ತಿಪರ ಮತ್ತು ಡೊಜಿಯ ಸಹ-ಸಂಸ್ಥಾಪಕ ಮುದಿತ್ ದಂಡ್ವಾಟೆ ತಿಳಿಸಿದ್ದಾರೆ.

ಇದನ್ನೂ ಓದಿ:

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯೋಗ, ಧ್ಯಾನ; ಕೊರೊನಾ ಸಮಯದಲ್ಲಿ ದೇಹದ ಸದೃಢತೆ ಮುಖ್ಯ