AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Women’s Day 2026 ನಿಮ್ಮ ನೆಚ್ಚಿನ ಮಹಿಳೆಗೆ ಈ ಉಡುಗೊರೆ ನೀಡುವ ಮೂಲಕ ವುಮೆನ್ಸ್‌ ಡೇಯನ್ನು ವಿಶೇಷವಾಗಿ ಆಚರಿಸಿ

Women’s Day Gift Ideas: ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಮಹಿಳೆಯರ ಕಠಿಣ ಪರಿಶ್ರಮ, ಪ್ರೀತಿ ಮತ್ತು ಕೊಡುಗೆಗಳನ್ನು ಗೌರವಿಸುವ ವಿಶೇಷ ಸಂದರ್ಭವಾಗಿದೆ. ಇಂತಹ ಈ ವಿಶೇಷ ದಿನದಂದು ನಿಮ್ಮ ಜೀವನದಲ್ಲಿನ ವಿಶೇಷ ಮಹಿಳೆಗೆ ಈ ಕೆಲವೊಂದು ಸ್ಪೆಷಲ್‌ ಉಡುಗೊರೆಗಳನ್ನು ನೀಡುವ ಮೂಲಕ ಆಕೆಯ ಮೊಗದಲ್ಲಿ ನಗು ತರಿಸಿ.

Women’s Day 2026 ನಿಮ್ಮ ನೆಚ್ಚಿನ ಮಹಿಳೆಗೆ ಈ ಉಡುಗೊರೆ ನೀಡುವ ಮೂಲಕ ವುಮೆನ್ಸ್‌ ಡೇಯನ್ನು ವಿಶೇಷವಾಗಿ ಆಚರಿಸಿ
ಅಂತಾರಾಷ್ಟ್ರೀಯ ಮಹಿಳಾ ದಿನImage Credit source: Freepik
ಮಾಲಾಶ್ರೀ ಅಂಚನ್​
|

Updated on: Mar 07, 2026 | 4:01 PM

Share

ಮಹಿಳೆಯರ (Women’s) ಸಾಧನೆಗಳನ್ನು ಗೌರವಿಸಲು, ಮನೆ ಹಾಗೂ ಸಮಾಜಕ್ಕೆ ಅವರ ಕೊಡುಗೆಗಳನ್ನು ಸ್ಮರಿಸಲು, ಒಬ್ಬ ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ ಆಕೆಯ ತ್ಯಾಗ, ಪರಿಶ್ರಮವನ್ನು ಗೌರವಿಸಲು ಪ್ರತಿ ವರ್ಷ ಮಾರ್ಚ್ 8 ರಂದು  ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇಂತಹ ಈ ವಿಶೇಷ ಸಂದರ್ಭದಲ್ಲಿ ನಿಮ್ಮ ಬಾಳಿನಲ್ಲಿ ವಿಶೇಷ ಸ್ಥಾನ ಪಡೆದ ಸ್ಪೆಷಲ್‌ ಮಹಿಳೆಗೆ ಸರ್‌ಪ್ರೈಸ್‌ ಉಡುಗೊರೆ ನೀಡುವ ಮೂಲಕ ನಿಮಗಾಗಿ ಆಕೆ ಮಾಡಿದ  ತ್ಯಾಗ, ಪರಿಶ್ರಮಕ್ಕೊಂದು ಥ್ಯಾಂಕ್ಸ್‌ ಹೇಳಬಹುದು. ಜೊತೆಗೆ ಆಕೆಯ ಮೊಗದಲ್ಲಿ ನಗು ಮೂಡಿಸಬಹುದು. ಹಾಗಾಗಿ ನಿಮ್ಮ ನೆಚ್ಚಿನ ಮಹಿಳೆಗೆ ಈ ಕೆಲವೊಂದು ಗಿಫ್ಟ್‌ಗಳನ್ನು ನೀಡುವ ಮೂಲಕ ಮಹಿಳಾ ದಿನವನ್ನು ವಿಶೇಷವಾಗಿ ಆಚರಿಸಿ.

ಮಹಿಳಾ ದಿನದಂದು ನಿಮ್ಮ ನೆಚ್ಚಿನ ಮಹಿಳೆಗೆ ಈ ಉಡುಗೊರೆಗಳನ್ನು ನೀಡಿ:

ಹ್ಯಾಂಡ್‌ಬ್ಯಾಗ್‌: ನಿಮ್ಮ ತಾಯಿ, ಸಹೋದರಿ ಅಥವಾ ಹೆಂಡತಿ ಫ್ಯಾಷನ್ ಪ್ರಿಯರಾಗಿದ್ದರೆ ಅವರಿಗೆ ಸುಂದರವಾದ ಮತ್ತು ಸ್ಟೈಲಿಶ್ ಹ್ಯಾಂಡ್‌ಬ್ಯಾಗ್ ಉಡುಗೊರೆಯಾಗಿ ನೀಡಬಹುದು. ಅಲ್ಲದೆ ಸೀರೆ, ಬಟ್ಟೆಗಳನ್ನು ಕೂಡ ಗಿಫ್ಟ್‌ ಮಾಡಬಹುದು. ಖಂಡಿತವಾಗಿಯೂ ಈ ಗಿಫ್ಟ್‌ಗಳನ್ನು ಅವರು ಇಷ್ಟಪಡುತ್ತಾರೆ.

ವಾಚ್:‌ ಹೆಚ್ಚಿನ ಮಹಿಳೆಯರಿಗೆ ವಾಚ್‌ಗಳೆಂದರೆ ಸಖತ್‌ ಇಷ್ಟ. ಹೀಗಿರುವಾಗಿ ನಿಮ್ಮ ಜೀವನದ ಸ್ಪೆಷಲ್‌ ಮಹಿಳೆಗೆ ಮಹಿಳಾ ದಿನದಂದು ಸುಂದರವಾದ ವಾಚ್‌ ಒಂದನ್ನು ಉಡುಗೊರೆಯಾಗಿ ನೀಡಬಹುದು.

ಫೋಟೋ ಫ್ರೇಮ್:‌ ನೆನಪುಗಳಿಗಿಂತ ಉತ್ತಮ ಉಡುಗೊರೆ ಇನ್ನೊಂದಿಲ್ಲ. ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಕುಟುಂಬದ ಫೋಟೋಗಳು ಮತ್ತು ಒಟ್ಟಿಗೆ ಕಳೆದ ವಿಶೇಷ ಕ್ಷಣಗಳ ಸುಂದರವಾದ ಫೋಟೋಗಳಿಗೆ  ಫ್ರೇಮ್ ಆಕಿ ಅದನ್ನು ಉಡುಗೊರೆಯಾಗಿ ನೀಡಬಹುದು. ಈ ಉಡುಗೊರೆ ನಿಮ್ಮ ಬಾಳಿನ ಸ್ಪೆಷಲ್‌ ಮಹಿಳೆಯ ಮುಖದಲ್ಲಿ ನಗು ಮೂಡಿಸುವುದು ಖಚಿತ.

ಮೇಕಪ್‌ ಕಿಟ್‌, ಸ್ಕಿನ್‌ಕೇರ್‌ ಉತ್ಪನ್ನ: ನಿಮ್ಮ ಸಂಗಾತಿ ಅಥವಾ ಸಹೋದರಿ ಮೇಕಪ್ ಇಷ್ಟಪಟ್ಟರೆ, ನೀವು ಅವರಿಗೆ ಬ್ಯೂಟಿ ಹ್ಯಾಂಪರ್ , ಸ್ಕಿನ್‌ ಕೇರ್‌ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡಬಹುದು.

ಪುಸ್ತಕ: ನಿಮ್ಮ ಜೀವನದಲ್ಲಿನ ವಿಶೇಷ ಮಹಿಳೆ ಪುಸ್ತಕಗಳನ್ನು ಓದಲು ಇಷ್ಟಪಟ್ಟರೆ, ಅವಳಿಗೆ ಒಳ್ಳೆಯ ಪುಸ್ತಕವನ್ನು ಉಡುಗೊರೆಯಾಗಿ ನೀಡುವುದು ಉತ್ತಮ. ಈ ಉಡುಗೊರೆ ಅವಳಿಗೆ ತುಂಬಾ ವಿಶೇಷವಾಗಿರುತ್ತದೆ.

ಗಿಡಗಳು: ಸಾಮಾನ್ಯವಾಗಿ ಹೆಚ್ಚಿನ ಮಹಿಳೆಯರು ಗಿಡಗಳನ್ನು ಇಷ್ಟಪಡುತ್ತಾರೆ. ಹಾಗಾಗಿ ಮಹಿಳಾ ದಿನದಂದು ನಿಮ್ಮ ನೆಚ್ಚಿನ ಮಹಿಳೆಗೆ ಒಂದಷ್ಟು ಗಿಡಗಳನ್ನು ಉಡುಗೊರೆ ನೀಡುವ ಮೂಲಕ ಆಕೆಯ ದಿನವನ್ನು ವಿಶೇಷವಾಗಿ ಆಚರಿಸಿ.

ಇದನ್ನೂ ಓದಿ: ಸವಾಲುಗಳನ್ನು ಧೈರ್ಯದಿಂದ ಎದುರಿಸಲು ಚಾಣಕ್ಯರ ಈ ಸಲಹೆಗಳನ್ನು ಪಾಲಿಸಿ

ವಿಶೇಷ ಭೋಜನ ಕೂಟ ಆಯೋಜಿಸಿ: ನಿಮಗಾಗಿ ಎಲ್ಲವನ್ನು ಮಾಡುವ ನಿಮ್ಮ ನೆಚ್ಚಿನ ಮಹಿಳೆಯನ್ನು ರೆಸ್ಟೋರೆಂಟ್‌ಗೋ ಅಥವಾ ಟ್ರಿಪ್‌ ಗೋ ಕರೆದೊಯ್ಯಿರಿ. ಹೌದು ಏನನ್ನೂ ನಿರೀಕ್ಷಿಸದೆ ನಿಮಗಾಗಿ ಎಲ್ಲವನ್ನೂ ಮಾಡುವ ನಿಮ್ಮ ನೆಚ್ಚಿನ ಮಹಿಳೆಗೆ ಸ್ವಲ್ಪ ವಿಶ್ರಾಂತಿ ನೀಡಿ ಆಕೆಯನ್ನು ಎಲ್ಲಿಗಾದರೂ ಕರೆದುಕೊಂಡು ಹೋಗಿ. ಖಂಡಿತವಾಗಿಯೂ ಈ ಸರ್‌ಪ್ರೈಸ್‌ ಗಿಫ್ಟ್‌ ಅನ್ನು ಆಕೆ ಇಷ್ಟಪಡುತ್ತಾಳೆ.

ಮನೆಕೆಲಸಗಳನ್ನು ಮಾಡಿ: ಮಹಿಳಾ ದಿನದಂದು ನೀವು ನಿಮ್ಮ ತಾಯಿ, ಸಂಗಾತಿಗೆ ನೀಡಬಹುದಾದ ಅತ್ಯಂತ ವಿಶೇಷ ಉಡುಗೊರೆ ಎಂದರೆ ವಿಶ್ರಾಂತಿ ದಿನ. ಹೌದು ಈ ದಿನ ಅವರಿಗೆ ವಿಶ್ರಾಂತಿ ಕೊಟ್ಟು ನೀವು ಮನೆಕೆಲಸಗಳನ್ನು ಮಾಡಿ, ಅವರಿಗಾಗಿ ಸ್ಪೆಷಲ್‌ ಅಡುಗೆಯನ್ನು ಮಾಡಿ, ಈ ವಿಶೇಷ ಉಡುಗೊರೆ ಸಣ್ಣದಾಗಿದ್ದರೂ, ಅವರಿಗೆ ಸಾಕಷ್ಟು ಖುಷಿಯನ್ನು ನೀಡುವುದು ಖಂಡಿತ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ದಸರಾದಲ್ಲಿ ಭಾಗವಹಿಸಲು ಕನ್ನಡ ಚಿತ್ರರಂಗಕ್ಕೆ ಸಿಎಂ ವಿಶೇಷ ಆಹ್ವಾನ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್