AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Nurses Day 2021: ನೋವಿಗೆ ಮಿಡಿಯುವ ಜೀವಗಳಿವು, ಅಂತರಾಷ್ಟ್ರೀಯ ದಾದಿಯರ ದಿನದ ಶುಭಾಶಯಗಳು

International Nurses Day: ಕೊವಿಡ್​19 ದೇಶದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಈ ಸಮಯದಲ್ಲಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸುತ್ತಾ ವೈದ್ಯರ ಬಲಗೈ ಬಂಟರಾಗಿ ದಿನದ 24 ಗಂಟೆಯೂ ಕೆಲಸ ಮಾಡುತ್ತಿರುವ ದಾದಿಯರಿಗೆ ಎಂದಿಗೂ ಕೃತಜ್ಞರಾಗಿರಬೇಕು.

International Nurses Day 2021: ನೋವಿಗೆ ಮಿಡಿಯುವ ಜೀವಗಳಿವು, ಅಂತರಾಷ್ಟ್ರೀಯ ದಾದಿಯರ ದಿನದ ಶುಭಾಶಯಗಳು
International Nurses Day
Follow us
shruti hegde
|

Updated on:May 12, 2021 | 11:02 AM

ಇಂದು ಅಂತರಾಷ್ಟ್ರಿಯ ನರ್ಸ್​ (ದಾದಿಯರು) ದಿನ. 1820ರ ಸಮಯದಲ್ಲಿ ಫ್ಲಾರೆನ್ಸ್​ ನೈಂಟಿಗೇಲ್​​ ಎಂಬ ಮಹಿಳೆ ಜನಿಸುತ್ತಾರೆ. ಬಹುಶಃ ವಿಶ್ವದ ಅತ್ಯಂತ ಪ್ರಸಿದ್ಧ ನರ್ಸ್​ ಇವರು. ಲೇಡಿ ವಿತ್​ ದಿ ಲ್ಯಾಂಪ್​ ಎಂದೇ ಕರೆಯಲ್ಪಡುವ ಶುಶ್ರೂಷಕಿ ಫ್ಲಾರೆನ್ಸ್​ ನೈಟಿಂಗೇಲ್​ ಯುದ್ಧದಲ್ಲಿ ಗಾಯಗೊಂಡ ಬ್ರಿಟೀಷ್​ ಮತ್ತು ಸೈನಿಕರ ದಾದಿಯಾಗಿ ಮೊದಲಿಗೆ ಕೆಲಸ ಪ್ರಾರಂಭಿಸಿದರು. ಫ್ಲಾರೆನ್ಸ್​ ನೈಂಟಿಗೇಲ್​ ತನ್ನ ಜೀವನದ ಹೆಚ್ಚಿನ ಸಮಯವನ್ನು ಗಾಯಾಳುಗಳನ್ನು ನೋಡಿಕೊಳ್ಳಲು ಅವರ ಆರೈಕೆ ಮಾಡುವುದು ಮತ್ತು ಸಾಂತ್ವನ ಹೇಳುವುದರೊಂದಿಗೆ ಕಳೆದರು. 1860ರಲ್ಲಿ ಉದ್ಘಾಟಿಸಲಾದ ನೈಟಿಂಗೇಲ್​ ಸ್ಕೂಲ್​​ ಆಫ್​ ನರ್ಸ್​ ಎಂಬ ನರ್ಸಿಂಗ್​ ಶಾಲೆಯನ್ನು ಪ್ರಾರಂಭಿಸಲು ಮುಖ್ಯ ಪಾತ್ರ ವಹಿಸಿದವರು ಫ್ಲಾರೆನ್ಸ್​ ನೈಂಟಿಗೇಲ್​.

ಕೊವಿಡ್​19 ವಿಶ್ವದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದ್ದು, ಈ ಸಮಯದಲ್ಲಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಪಾಲಿಸುತ್ತಾ ವೈದ್ಯರ ಬಲಗೈ ಬಂಟರಾಗಿ ದಿನದ 24 ಗಂಟೆಯೂ ಕೆಲಸ ಮಾಡುತ್ತಿರುವ ದಾದಿಯರಿಗೆ ಎಂದಿಗೂ ಕೃತಜ್ಞರಾಗಿರಬೇಕು. ತಮ್ಮ ಪ್ರಾಣವನ್ನು ಒತ್ತೆ ಇಟ್ಟು ರೋಗಿಗಳ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಕೊರೊನಾ ಸಮಯದಲ್ಲಿ ತಮ್ಮ ಮನೆಗೂ ಹೋಗದೇ ಆಸ್ಪತ್ರೆಯಲ್ಲಿಯೇ ವಾಸವಿದ್ದು ಅದೆಷ್ಟೋ ರೋಗಿಗಳ ಆರೈಕೆ ಮಾಡುತ್ತಿದ್ದಾರೆ. ಅವರಿಗೆ ಈ ದಿನ ಶುಭಹಾರೈಸಲೇ ಬೇಕು.

ವೈದ್ಯರಿಗೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿರುವ ದಾದಿಯರು ವೈದ್ಯರನ್ನೇ ಮೀರಿಸುವಷ್ಟು ಕೆಲಸ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಯಾವುದೇ ಜಾತಿ, ಧರ್ಮ, ಪಕ್ಷ ಎಂಬ ಬೇಧವಿಲ್ಲದೇ ಯಾರೆ ಆಸ್ಪತ್ರೆಗೆ ದಾಖಲಾದರೂ ಅವರನ್ನು ಜಾಗರೂಕತೆಯಿಂದ ಕಾಳಜಿವಹಿಸಿ ಆರೈಕೆ ಮಾಡುವವರು ದಾದಿಯರು. ಆಸ್ಪತ್ರೆಯಲ್ಲಿ ವೈದ್ಯರಷ್ಟೇ ಇದ್ದಾರೆ, ದಾದಿಯರು ಇಲ್ಲ ಎಂಬುದನ್ನು ನೆನೆಸಿಕೊಂಡರೆ ಹೇಗಾಗಬಹುದು ಪರಿಸ್ಥಿತಿ? ಅದರಲ್ಲಿಯೂ ಕೊರೊನಾ ಸೋಂಕು ಹರಡುವಿಕೆಯ ಪರಿಸ್ಥಿತಿಯಲ್ಲಂತಿಯೂ ಆಸ್ಪತ್ರೆಗಳಲ್ಲಿ ಶುಶ್ರೂಷಕಿಯರು ಇಲ್ಲದ್ದನ್ನು ನೆನಪಿಸಿಕೊಳ್ಳಲೂ ಸಾಧ್ಯವಿಲ್ಲ.

ಇದನ್ನೂ ಓದಿ: Women’s Day Special: ಮಗ್ಗುಲ ಮುಳ್ಳಂತಿದ್ದ ಕ್ಯಾನ್ಸರ್​ ಜತೆ ಹೋರಾಡುತ್ತ, ಕೊರೊನಾ ರೋಗಿಗಳ ಸೇವೆ ಮಾಡಿದ ನರ್ಸ್​ ಕೃಪಾ ಶಿಲಬದ್ರ

Published On - 10:49 am, Wed, 12 May 21

VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ
ಕರ್ನಾಟಕದಲ್ಲಿ ಭಾರೀ ಮಳೆ ಎಚ್ಚರಿಕೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಘೋಷಣೆ