Eid 2021 Special ರಂಜಾನ್ ಹಬ್ಬದ ವಿಶೇಷ ಹೆಚ್ಚಿಸಲು ಇಲ್ಲಿವೆ ಐದು ಸುಲಭ ತಿನಿಸುಗಳು

Ramadan Eid Food Recipe ಈದ್ ಅಲ್-ಫಿತರ್ 2021: ಹಬ್ಬಕ್ಕೆ ಮನೆಯಲ್ಲಿ ಸಿಹಿ ತಿಂಡಿಗಳಿದ್ದರೆನೇ ಹಬ್ಬದ ಸಂಭ್ರಮಕ್ಕೆ ಮೆರಗು ಹೆಚ್ಚಾಗೋದು. ಅದರಲ್ಲೂ ಈ ಬಾರಿ ಮನೆಯಲ್ಲೇ ಕುಟುಂಬದ ಜೊತೆಗೆ ಹಬ್ಬವನ್ನು ಆಚರಿಸಬೇಕಾಗಿದೆ. ಆದ್ದರಿಂದ ನಿಮ್ಮ ಈದ್ಗೆ ನೀವು ನಿಮ್ಮ ಕುಟುಂಬದೊಂದಿಗೆ ಸವಿಯಲು ನಾವು ಕೆಲವು ರುಚಿಕರವಾದ ಮತ್ತು ಸುಲಭವಾದ ಪಾಕವಿಧಾನಗಳನ್ನು ತಂದಿದ್ದೇವೆ.

Eid 2021 Special ರಂಜಾನ್ ಹಬ್ಬದ ವಿಶೇಷ ಹೆಚ್ಚಿಸಲು ಇಲ್ಲಿವೆ ಐದು ಸುಲಭ ತಿನಿಸುಗಳು
ಸಾಂದರ್ಭಿಕ ಚಿತ್ರ
Follow us
ಆಯೇಷಾ ಬಾನು
|

Updated on: May 12, 2021 | 1:33 PM

ಈದ್ ಉಲ್-ಫಿತರ್ ಹಬ್ಬವನ್ನು ವಿಶ್ವದಾದ್ಯಂತ ಮುಸ್ಲಿಮರು ಅತ್ಯಂತ ಉತ್ಸಾಹದಿಂದ ಆಚರಿಸಲು ಸಜ್ಜಾಗಿದ್ದಾರೆ. ಹಬ್ಬಕ್ಕೆ ಇನ್ನೇನು ಎರಡು ದಿನಗಳ ಮಾತ್ರ ಬಾಕಿ ಇದೆ. ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ಒಂದಾದ ಪವಿತ್ರ ರಂಜಾನ್ ಹಬ್ಬ. ಒಂದು ತಿಂಗಳ ಉಪವಾಸದ ಬಳಿಕ ಈದ್ ಉಲ್-ಫಿತರ್ ಆಗಿ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತೆ. ಇನ್ನು ಸೌದಿ ಅರೇಬಿಯಾದಲ್ಲಿ ಮೇ 13 ರಂದು ರಂಜಾನ್ ಹಬ್ಬ ಆಚರಣೆಯಾಗಲಿದ್ದು, ಮೇ 14 ರಂದು ಭಾರತದಲ್ಲಿ ಹಬ್ಬ ಆಚರಿಸಲಾಗುತ್ತೆ.

ಇನ್ನು ರಂಜಾನ್ ಹಬ್ಬದ ವಿಶೇಷ ಉಪವಾಸ ಇಡುವುದು. ಅದಕ್ಕಾಗಿಯೇ ಈ ಆಚರಣೆಗಳಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಹಬ್ಬದ ದಿನದಂದು ಮುಸ್ಲಿಮರು ಭಕ್ಷ್ಯ ಭೋಜನ, ಸಿಹಿ ಪಾಕಗಳನ್ನು ಮಾಡಿ ಕುಟುಂಬದೊಂದಿಗೆ, ಅಕ್ಕ ಪಕ್ಕದ ಮನೆಗಳಿಗೆ ಹಂಚಿ ಸಂಭ್ರಮಿಸುತ್ತಾರೆ. ಆದ್ದರಿಂದ, ನಾವು ನಿಮಗಾಗಿ 5 ಸುಲಭ, ಗಡಿಬಿಡಿಯಿಲ್ಲದ ಪಾಕವಿಧಾನಗಳನ್ನು ಆರಿಸಿದ್ದೇವೆ, ಪ್ರತಿಯೊಂದನ್ನು 1 ಗಂಟೆಗಿಂತ ಕಡಿಮೆ ಸಮಯದಲ್ಲಿ ತಯಾರಿಸಬಹುದು.

ಇದನ್ನೂ ಓದಿ: Eid-ul-Fitr 2021 Date: ಭಾರತದಲ್ಲಿ ರಂಜಾನ್ ಹಬ್ಬ ಆಚರಣೆ ಯಾವಾಗ? ಇಲ್ಲಿದೆ ಡಿಟೇಲ್ಸ್

1. ರೋಸ್ ಶರ್ಬತ್ ಹಬ್ಬದ ವಿಶೇಷ ಸಂದರ್ಭಗಳಲ್ಲಿ ಮತ್ತು ಬೇಸಿಗೆ ಸಮಯಕ್ಕೆ ಹೇಳಿ ಮಾಡಿಸಿದ ಪಾನಿಯವೆಂದರೆ ಗುಲಾಬಿಯಿಂದ ಮಾಡುವ ರೋಸ್ ಶರ್ಬತ್.

ರೋಸ್ ಶರ್ಬತ್ ಮಾಡುವುದು ಹೇಗೆ? ಅಂಗಡಿಯಲ್ಲಿ ಸಿಗುವ ರೋಸ್ ಶರ್ಬತ್ನ ಸಿರಪನ್ನು ಮತ್ತು ಕೆಲವು ಗುಲಾಬಿ ದಳಗಳನ್ನು ಸಕ್ಕರೆ ಪಾಕದಲ್ಲಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಗುಲಾಬಿ ಸಾರ ಮತ್ತು ಹಾಲು ಸೇರಿಸಿ. ಗುಲಾಬ್ ಶರ್ಬತ್ ಸಿದ್ಧವಾಗಿದೆ. ಇದಕ್ಕೆ ಸ್ವಲ್ಪ ನಿಂಬೆ ರಸ ಮತ್ತು ನೀರಲ್ಲಿ ನೆನೆಸಿಟ್ಟ ತುಳಸಿ ಬೀಜಗಳನ್ನು ಸೇರಿಸಿ ಸವಿಯಬಹುದು.

2. ಚಾಪ್ಲಿ ಕಬಾಬ್ ಸಾಮಾನ್ಯವಾಗಿ ಮಾಂಸದ ಅಡುಗೆ ಮಾಡಲು ಹೆಚ್ಚು ಸಮಯ ಬೇಕಾಗುತ್ತೆ. ಆದರೆ ಚಾಪ್ಲಿ ಕಬಾಬ್ ಮಾಡಲು ಕೇವಲ 30 ನಿಮಿಷ ಸಾಕು. ಮೆಣಸು, ಉಪ್ಪು, ಈರುಳ್ಳಿ, ಟೊಮ್ಯಾಟೊ ಮತ್ತು ತುಂಡು ತುಂಡಾಗಿ ಕತ್ತರಿಸಿದ ಮಟನ್‌ ಮತ್ತು ಮಸಾಲೆಯುಕ್ತ ಮಿಶ್ರಣವಿದ್ದರೆ ಸಾಕು.

3. ರೈಲ್ವೆ ಮಟನ್ ಕರಿ ಬ್ರಿಟಿಷರನ್ನು ಗಮನದಲ್ಲಿಟ್ಟುಕೊಂಡು ಮೊದಲ ಬಾರಿಗೆ ಬಿಟಿಷರ ಕಾಲದಲ್ಲಿ ಮಾಡಲಾದ ಭಕ್ಷ್ಯವೇ ಈ ರೈಲ್ವೆ ಮಟನ್ ಕರಿ. ಇದಕ್ಕೆ ರೈಲ್ವೇ ಪದ ಸೇರಲು ಒಂದು ಸಂಗತಿ ಇದೆ. ಇದನ್ನು ಮೊದಲ ಬಾರಿಗೆ ಬ್ರಿಟಿಷರ ಸಮಯದಲ್ಲಿ ಭಾರತೀಯ ರೈಲ್ವೆಯ ಬಾಣಸಿಗರು ಮಾಡಿದ ಭಕ್ಷ್ಯ. ಹೀಗಾಗಿ ಇದಕ್ಕೆ ರೈಲ್ವೆ ಮಟನ್ ಕರಿ ಎಂದು ಹೇಳುತ್ತಾರೆ.  Haleem Recipe ಮಟನ್ ಹಲೀಮ್ ಮಾಡುವುದು ಹೇಗೆ? ಇಲ್ಲಿದೆ ಬಾಯಲ್ಲಿ ನೀರು ತರಿಸುವ ರೆಸಿಪಿ

4. ಕಾಶ್ಮೀರಿ ಪುಲಾವ್ ಬಿರಿಯಾನಿ ತಯಾರಿಸುವ ಗಡಿಬಿಡಿಯನ್ನು ತಪ್ಪಿಸಲು ಆದ್ಯತೆ ನೀಡುವವರು, ಯಾವಾಗಲೂ ಕಾಶ್ಮೀರಿ ಪುಲಾವನ್ನು ಪರ್ಯಾಯವಾಗಿ ಬಳಸಬಹುದು. ಅಕ್ಕಿ, ತುಪ್ಪ, ಡ್ರೈ ಫ್ರೂಟ್ಸ್ , ಗುಲಾಬಿ ದಳಗಳು ಮತ್ತು ಮಸಾಲೆಗಳ ಸಂಯೋಜನೆಯೊಂದಿಗೆ ಈ ಪುಲಾವ್ ಸಿದ್ಧವಾಗುತ್ತೆ.

5. ಹಲೀಮ್ ಡ್ರೈ ಫ್ರೂಟ್ಸ್, ಹಾಲು, ಸಕ್ಕರೆ, ಏಲಕ್ಕಿ ಸೇರಿದಂತೆ ಪಾಯಸದ ರುಚಿ ಹೆಚ್ಚಿಸುವ ಅನೇಕ ಪದಾರ್ಥಗಳನ್ನು ಹಾಕಿ ಸಿಹಿ ಖಾದ್ಯ ಶೀರ್ ಕುರ್ಮಾ ಮಾಡಲಾಗುತ್ತೇ. ಅಲ್ಲದೆ ಶೀರ್ ಕುರ್ಮಾವನ್ನು ಮಾಡಲು ಅನೇಕ ವಿಧಾನಗಳಿವೆ. ಅದರಲ್ಲಿ ರುಚಿಕರ ಹಾಗೂ ಸುಲಭವಾದ ಒಂದು ವಿಧಾನವನ್ನು ನಿಮಗೆ ಇಲ್ಲಿ ತಿಳಿಸಿಕೊಡುತ್ತಿದ್ದೇವೆ. Sheer Khurma Recipe ರಂಜಾನ್ ವಿಶೇಷ ಶೀರ್ ಕುರ್ಮಾ ಈಗ ನಿಮ್ಮ ಮನೆಯಲ್ಲೂ ತಯಾರಿಸಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ