Lunar Eclipse 2021: ಈ ವರ್ಷದ ಮೊದಲ ಚಂದ್ರಗ್ರಹಣದ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು ಹೀಗಿವೆ

ಈ ಚಂದ್ರಗ್ರಹಣವು ಜನವರಿ 21, 2019 ರ ನಂತರದ ಮೊದಲ ಸಂಪೂರ್ಣ ಚಂದ್ರಗ್ರಹಣವಾಗಿದೆ. ಈ ಸಮಯದಲ್ಲಿ ಚಂದ್ರ ಕೆಂಪು ಅಥವಾ ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಹೀಗಾಗಿ ಇದನ್ನು ರಕ್ತ ಚಂದ್ರ ಎಂದು ಕರೆಯಲಾಗುತ್ತದೆ.

Lunar Eclipse 2021: ಈ ವರ್ಷದ ಮೊದಲ ಚಂದ್ರಗ್ರಹಣದ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು ಹೀಗಿವೆ
pfrAtಸಂಗ್ರಹ ಚಿತ್ರ
Follow us
|

Updated on: May 12, 2021 | 10:40 AM

ಸಾಮಾನ್ಯವಾಗಿ ಗ್ರಹಣವನ್ನು ಸೂತಕದ ರೀತಿಯಲ್ಲಿ ನೋಡುತ್ತಾರೆ. ಹಿಂದೂ ಸಂಪ್ರದಾಯದ ಪ್ರಕಾರ ಗ್ರಹಣ ಕಾಲದಲ್ಲಿ ದೇವರಿಗೆ ಕಷ್ಟ ಎಂದು ಭಾವಿಸಲಾಗುತ್ತದೆ. ಹೀಗಾಗಿ ಗ್ರಹಣದ ನಂತರ ದೇವಾಲಯಗಳಲ್ಲಿ ಮತ್ತು ಮನೆಯಲ್ಲಿ ಸೂತಕ ಕಳೆದಂತೆ ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಗುತ್ತದೆ. ಅದರಂತೆ ಈ ವರ್ಷವು ಕೂಡ ಸೂರ್ಯ ಮತ್ತು ಚಂದ್ರಗ್ರಹಣಗಳಿರಲಿದ್ದು, ವರ್ಷದ ಮೊದಲ ಚಂದ್ರಗ್ರಹಣ ಮೇ 26 ರಂದು ನಡೆಯಲಿದೆ.

ಚಂದ್ರನ ಕರಿ ನೆರಳು ಭೂಮಿ ಮೇಲೆ ಹಾದುಹೋಗುವುದರಿಂದ ಇದು ಸಂಪೂರ್ಣ ಚಂದ್ರಗ್ರಹಣವಾಗಲಿದೆ. ಈ ಚಂದ್ರಗ್ರಹಣವು ಜನವರಿ 21, 2019 ರ ನಂತರದ ಮೊದಲ ಸಂಪೂರ್ಣ ಚಂದ್ರಗ್ರಹಣವಾಗಿದೆ. ಈ ಸಮಯದಲ್ಲಿ ಚಂದ್ರ ಕೆಂಪು ಅಥವಾ ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಹೀಗಾಗಿ ಇದನ್ನು ರಕ್ತ ಚಂದ್ರ ಎಂದು ಕರೆಯಲಾಗುತ್ತದೆ. ಆ ಮೂಲಕ ಸೂಪರ್‌ಮೂನ್ ಎಂಬ ಪದಕ್ಕೆ ನಾವು ಮೇ 26 ರಂದು ನೋಡಬಹುದಾದ ಅತ್ಯುತ್ತಮ ಚಂದ್ರನನ್ನು ಹೊಲಿಸಬಹುದಾಗಿದೆ.

2021 ರ ಮೊದಲ ಚಂದ್ರ ಗ್ರಹಣದ ಬಗ್ಗೆ ತಿಳಿದುಕೊಳ್ಳಬೇಕಾದ ಸಂಗತಿಗಳು ಏನು?

  • ಮೇ 26 ರ ರಾತ್ರಿ ಸಂಪೂರ್ಣ ಚಂದ್ರ ಭೂಮಿಯ ಹತ್ತಿರದಲ್ಲಿ ಕಾಣಿಸಿಕೊಳ್ಳುತ್ತದೆ.
  • ಹೀಗಾಗಿ ಈ ಬಾರಿಯ ಚಂದ್ರಗ್ರಹಣದ ಸಂದರ್ಭದಲ್ಲಿ ಆಕಾಶದಲ್ಲಿನ ಚಂದ್ರ ಹೆಚ್ಚು ಆಕರ್ಷಕವಾಗಿ ಮತ್ತು ಕೆಂಪು ಬಣ್ಣದಿಂದ ಕಾಣಿಸಿಕೊಳ್ಳಲಿದೆ.
  • ಮೇ 26 ಸಂಜೆ ಆರಂಭವಾಗುವ ಈ ಚಂದ್ರಗ್ರಹಣಕ್ಕೆ ಆಸ್ಟ್ರೇಲಿಯಾ, ಪಶ್ಚಿಮ ಯುನೈಟೆಡ್ ಸ್ಟೇಟ್ಸ್, ದಕ್ಷಿಣ ಅಮೆರಿಕಾ ಅಥವಾ ಆಗ್ನೇಯ ಏಷ್ಯಾದ ಜನರು ಸಾಕ್ಷಿಯಾಗಲಿದ್ದಾರೆ.

Earthsky.org ಹೇಳುವ ಹಾಗೆ, ಪೂರ್ಣ ಚಂದಿರನು ಭೂಮಿಯ ಕತ್ತಲೆಯ ಛತ್ರಿಯಂಥ ನೆರಳನ್ನು ಸೀಳಿ ಪ್ರವೇಶಿಸುವುದರಿಂದ ಒಟ್ಟಾರೆಯಾಗಿ ಚಂದ್ರಗ್ರಹಣ ಅಲ್ಪಾವಧಿಯದ್ದಾಗಿರುತ್ತದೆ. ಗ್ರಹಣವು ಒಟ್ಟು 15 ನಿಮಿಷಗಳಿಗಿಂತ ಕಡಿಮೆ ಇರುತ್ತದೆ.

2021ರಲ್ಲಿ ಎಷ್ಟು ಗ್ರಹಣಗಳನ್ನು ನಾವು ನೋಡಬಹುದು? ಪ್ರತಿ ವರ್ಷ ಸರಾಸರಿ ನಾಲ್ಕರಿಂದ ಏಳು ಗ್ರಹಣಗಳಿರುತ್ತದೆ. ಅದರಂತೆ ಈ ವರ್ಷವೂ ಕಾಣಲಿದ್ದೇವೆ. ಅವುಗಳಲ್ಲಿ ಕೆಲವು ಸಂಪೂರ್ಣ ಮತ್ತು ಕೆಲವು ಪಾರ್ಶ್ವ ಗ್ರಹಣಗಳಿರುತ್ತದೆ. ವಿಭಿನ್ನ ಹೆಸರುಗಳ ಆಧಾರದ ಮೇಲೆ ಸ್ಥಳೀಯ ಕಾಲೋಚಿತ ಅಂಶಗಳ ಆಧಾರದಲ್ಲಿ ಚಂದ್ರಗ್ರಹಣ ಇರಲಿದ್ದು, 2021ರ ಗ್ರಹಣದ ಪಟ್ಟಿ ಹೀಗಿದೆ. ಮೇ 26: ಪೂರ್ಣ ಚಂದ್ರಗ್ರಹಣ ಜೂನ್ 10: ವಾರ್ಷಿಕ ಸೂರ್ಯಗ್ರಹಣ ನವೆಂಬರ್ 19: ಪಾರ್ಶ್ವ ಚಂದ್ರಗ್ರಹಣ ಡಿಸೆಂಬರ್ 4: ಪೂರ್ಣ ಸೂರ್ಯಗ್ರಹಣ

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸಾಮಾನ್ಯವಾಗಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ನಡುವೆ ಹಲವರಿಗೆ ಗೊಂದಲಗಳು ಉಂಟಾಗುತ್ತದೆ. ಹೀಗಾಗಿ ಗೊಂದಲಗೊಳ್ಳಬೇಡಿ. ಸೂರ್ಯಗ್ರಹಣದಲ್ಲಿ ಸೂರ್ಯನಿಗೆ ಕಪ್ಪು ಆವರಿಸುತ್ತದೆ ಮತ್ತು ಚಂದ್ರಗ್ರಹಣದಲ್ಲಿ ಚಂದ್ರ ಕಪ್ಪಾಗಿ ಕಾಣಿಸುತ್ತಾನೆ .

ಇದನ್ನೂ ಓದಿ:

ಸೂಯೆಜ್ ಕಾಲುವೆಯಲ್ಲಿ ದೈತ್ಯ ಹಡಗು ಮತ್ತೆ ತೇಲಲು ಹುಣ್ಣಿಮೆ ಚಂದ್ರನೇ ಕಾರಣ!

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಯೋಗ, ಧ್ಯಾನ; ಕೊರೊನಾ ಸಮಯದಲ್ಲಿ ದೇಹದ ಸದೃಢತೆ ಮುಖ್ಯ

ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ